Sunday, September 9, 2012

ಹೌದಪ್ಪಾ ಹೌದೋ ನೀನೆ ದೇವರ....


ಇವತ್ತು ವಾಡಿಯಾದಾಗ ಹರೀಶ್ ಹೇಳಿದ ಮಾತು ಮನಸ್ಸಿಗೆ ನಾಟೇದ..ಹೌದು
ನನ್ನ ಒಳಗನ್ನು ಬೆದಕುವ ಕಾಲ ಬಂತು ಅಂತ ಅನಿಸೇದ...ನಾ ಒಂದು ಭ್ರಮಾದಾಗ
ಇದ್ದೆ ಇನ್ನೇನು ಪುಸ್ತಕ ಬಂತು ನಾನೂ "ಕವಿ" ಆದೆ ಅಂತ ಬೀಗಿದ್ದೆ... ಹರೀಶ್ ಮಾತು
ಚುಚ್ಚಿತು ನಾನು ನನ್ನ ಪೀಳಿಗೆಯಗೆಳೆಯರಿಗೆ ಈ ಬ್ಲಾಗು ಈ ನೆಟ್ಟು,ಫೇಸಬುಕ್ಕು ಎಲ್ಲಾ
ವರದಾನವಾಗಿ ಬಂದಾವ. ನಮ್ಮ ಮನಸ್ಸಿನ ಭಾವನಾ ಇಡೀ ಜಗತ್ತಿಗೆ ಕ್ಷಣದೊಳಗ
ಹೇಳ್ಕೋಬಹುದು. ಬರೀ "ಎಂಟರ್ " ಕೀ ಟಂಕಿಸುವುದರಿಂದ..!! ನಮ್ಮ ಅಭಿವ್ಯಕ್ತಿಗೆ
ಯಾರದೇ ಬಂದಿಶ್ ಇಲ್ಲ ಇದೊಂದು ಸ್ವಚ್ಛಂದ ನದಿ ಎಲ್ಲಿ ಬೇಕಾದಲ್ಲಿ ಹರೀತದ...ಒಂದುನಾಕು
ಮಂದಿ ಓದಿ "ಸೂಪರ್", ವಾಹ್ ವಾಹ್ ಅಂತಾರ ಬರದಾವ ಉಬ್ಬಿಹೋಗತಾನ..
ಇನ್ನೋಂದು ಬರೀತಾನ ಇನ್ನೂ ನಾಕು ಮಂದಿ ಜೈ ಕಾರ ಹಾಕತಾರ...ನಾ ಉತ್ತಮೋತ್ತಮ
ನಾ ಶ್ರೇಷ್ಠ ಹಿಂಗ ಲೇಖಕನೊಳಗ ಅಹಂ ತುಂಬತದ. ಹರೀಶ್ ಹೇಳಿದ್ದು ಇದನ್ನ ನಮಗ
ಉತ್ಸಾಹ ಅದ ನಾವು ಬರೀತೇವಿ..ಬರದಿದ್ದು ಏನು ಅದರ ಉಪಯುಕ್ತತೆ ಏನು ಅಥವಾ
ಅದು ಯೋಗ್ಯವಾದದ್ದೋ ಇಲ್ಲ ನಾವು ಯಾವುದು ವಿಚಾರ ಮಾಡೂದಿಲ್ಲ. ಇದೊಂಥರಾ
ಭಸ್ಮಾಸುರ ಅವತಾರ ನಮ್ಮದು..!

ಈಗೀಗಂತೂ ಬ್ಲಾಗು ಪೇಪರ್ ನಲ್ಲಿ ಅದಾರೋ ಬರೆದ ಲೇಖನಗಳಿಗೆ ವಿರೋಧ
ಸೂಚಿಸಲು ಒಂದು ಆಯುಧವಾಗಿ ಬಳಕೆಯಾಗುತ್ತಿದೆ..ಈ ಭರದಲ್ಲಿ ಬಳಸಿದ ಭಾಷೆ,
ಆ ಭಾಷೆ ಬಳಸಿದ ವ್ಯಕ್ತಿಯ ಸಂಸ್ಕೃತಿ ಎಲ್ಲ ಬೆತ್ತಲಾಗಿ ನಿಲ್ಲುತ್ತದೆ..ಇಂದು ನಮ್ಮ ದೇಶದಲ್ಲಿ
ಭಯೋತ್ಪಾದನೆ ಈ ರೀತಿ ಬೆಳೆಯಲೂ ನಮ್ಮ ನಮ್ಮಲ್ಲಿನ ಸಾಮರಸ್ಯದ ಕೊರತೆನೂ
ಕಾರಣ..ನಾವು ಸದಾ ಅವ ಹೀಗೆ ಇದು ಹೀಗೆ ಆ ಗುರು ಹೀಗೆ ಆ ಆಚಾರ್ಯ ಹೀಗೆ ಎಂದು
ಬೊಬ್ಬೆ ಹೊಡೆಯುತ್ತೇವೆ. ಬ್ಲಾಗು ಇದು ತಿಳಿದವರ ಮಾಧ್ಯಮ. ಇದನ್ನು ಬಳಸುವವನಿಗೆ
ಸಾಮಾಜಿಕ ಜವಾಬ್ದಾರಿ ಇದೆ..ಬೇಕಾಬಿಟ್ಟಿಯಾಗಿ ಇದು ಉಪಯೋಗಿಸಬಾರದು..
ತಿಳಿದವರು..ಓದಿದವರು ವೇದ ಪುರಾಣ ಸಾರ ಅರಿತವರೂ ಈ ಥರಾ ಹುಚ್ಚಾಟ ಮಾಡುತ್ತಿದ್ದಾರೆ
ಇದರಿಂದ ಅವರಿಗೇನು ಲಾಭ ಸಮಾನ ರೋಗಿಷ್ಠ ಮನಸ್ಥಿತಿ ಉಳ್ಳವರು ಬೋ ಪರಾಕ್
ಹೇಳುವುದನ್ನು ಬಿಟ್ಟು..!!

ಕೊನೆಯದಾಗಿ ವಿನಂತಿ ಇದೆ..ಬನ್ನಿ ಕಳೆ ತೆಗೆಯೋಣ...!!

"ಹೌದಪ್ಪಾ ಹೌದೋ ನೀನೇ ದೇವರ...
ನಿಂದ ನೀ ತಿಳಿದರ..
ನಿನಗಿಲ್ಲೋ ದೂರ..." ---ಶರೀಫಜ್ಜ

7 comments:

  1. ಉಮೇಶ್ ಬರೋಬ್ಬರಿ ಮಾತದ.. ಸಕಾಲಿಕ ಅದ,,, ಕೆಲ ಬ್ಲಾಗ್ ಲೇಖನ ಓದಿದ್ರ ವಾಕರಿಕ ಬತ್ತದ ನೋಡ್ರಿ.. ಹಲವು ಕಿರಿ ಸ್ನೇಹಿತರಿಗೆ ನಾನು ನನ್ನ ಅಲ್ಪಮತಿಗೆ ತಿಳಿದಷ್ಟು ತಿದ್ದಿ ಹೇಳುತ್ತೇನೆ..ಕೆಲವರು ನಿಜಕ್ಕೂ ಸುಧಾರಿಸಿದ್ದಾರೆ. ಆದರೆ ಹಿರಿಯರು, ಜ್ಞಾನಿಗಳು (ತಮ್ಮನ್ನು ಹಾಗೇ ಕರೆದುಕೊಳ್ಳುತ್ತಾರೆ ಸಹಾ) ಬಳಸುವ ಭಾಷೆ ನಿಜಕ್ಕೂ ನಾವು ವಿದ್ಯಾವಂತರೇ?? ಅಥವಾ ವಿದ್ಯಾಧರ-ರಕ್ಕಸರೇ ಎನ್ನ್ನುವಂತೆ ಮಾಡುತ್ತೆ. ಪರಸ್ಪರ ಪ್ರೀತಿ-ಪ್ರೇಮ-ವಾತ್ಸಲ್ಯ ಬೆಳಸಬೇಕಾಗಿರೋ ನಾವು ವೈಮನ -ಮೈಮನ ತುಂಬುವಂತೆ ಮಾಡ್ತಿವಲ್ಲಾ..?? ಎತ್ತ ಸಾಗುತ್ತಿದ್ದೇವೆ ಎನಿಸುತ್ತೆ.

    ReplyDelete
  2. ದೇಸಾಯಿ ಸರ್;ನೀವು ಹೇಳುವ ಮಾತು ಖರೆ ಅದಾ.ನಮ್ಮನ್ನ ನಾವು ತಿಳೀ ಬೆಕದ.ಚಂದದ ಸಕಾಲಿಕ ಬರಹ.

    ReplyDelete
  3. Desayar,
    I can only partly agree with you. Because of the blogging advantage, many good writers have come to light who would have got no space in our magazines etc. Well, the fire can harm and give light as well!

    ReplyDelete
  4. ದೇಸಾಯಿಯವರೆ..

    ಪ್ರತಿಯೊಬ್ಬರಿಗೂ ಒಂದೊಂದು ನಿಲುವು ಇರುತ್ತದೆ...
    ನಮ್ಮ ನಂಬಿಕೆಯೇ ಶ್ರೇಷ್ಠ ಅಂತ ಸಾಧಿಸುವ ಹಂಬಲವೇಕೆ?
    ಅದಕ್ಕಾಗಿ ಇತರರನ್ನು ನಿಂದಿಸುವದು ಏಕೆ?

    ಬ್ಲಾಗ್ ಅಂಥಹ ಒಂದು ತಾಣ ನಮ್ಮಂತವರಿಗೆಲ್ಲ ಒಂದು ವರವಾಗಿದೆ..
    ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು...
    ಯಾರಿಗೂ ನೋವಾಗದ ಹಾಗೆ ಬರೆಯಲಿಕ್ಕೆ ಬರುತ್ತದಲ್ಲವೆ?

    ಈ ಬ್ಲಾಗ್ ಎಷ್ಟೆಲ್ಲ ಸ್ನೇಹಿತರನ್ನು ಕೊಟ್ಟಿದೆ...
    ಚಿಕ್ಕದಾದ ನಮ್ಮ ಪ್ರಪಂಚವನ್ನು ವಿಸ್ತಾರವಾಗಿಸಿದೆ...

    ನಿಮ್ಮ ಲೇಖನ ಸಕಾಲಿಕವಾಗಿದೆ...

    ಧನ್ಯವಾದಗಳು...

    ReplyDelete
  5. ಬ್ಲಾಗ್ ಗಳು..ಕನ್ನಡಿಯ ಬಿಂಬದಂತೆ...ನೋಡಿದು ನಿಜ, ಕೇಳಿದ್ದು ನಿಜ..ಎಲ್ಲಿವರೆಗೆ ಅದರ ಮುಂದೆ ಒಂದು ವಸ್ತುವಿರುತ್ತೆ ಅಲ್ಲಿಯ ತನಕ...ಬರೆಯುವ ವಸ್ತು ವಷ್ಟುನಿಷ್ಟವಾದಾಗ..ಭಾವನಲಹರಿ..ಮನಲಹರಿಗೆ ಸಾತ್ ಕೊಡುತ್ತೆ...ಅವರವರ ಭಾವಕ್ಕೆ..ಅನ್ನುವ ಹಾಗೆ..ಅಪಾಯವಿಲ್ಲದೆ ಉಪಯೋಗಿಸುವ ಕಲೆ ಇರಬೇಕು..
    ಸುಂದರ ಲೇಖನ..

    ReplyDelete
  6. ದೇಸಾಯ್ ಸರ್,

    ಹರೀಶ್‍ರವರ ಅಭಿಪ್ರಾಯ ತುಂಬಾ ಮಾರ್ಮಿಕವಾಗಿದೆ. ಬ್ಲಾಗ್ ಮತ್ತು ಫೇಸ್ ಬುಕ್‍ನಲ್ಲಿ ಹೊಗಳಿಕೆ ಮತ್ತು ಜೈ ಜೈ...ಇಟ್ಟಾಕ್ಷಣ ಬರಹಗಾರನಿಗೆ ಹುರುಪು ಬರುವುದು ನಿಜ. ಆದ್ರೆ ಅದೇ ಹುರುಪಿನಲ್ಲಿ ಹೊಗಳಿಕೆ ಮತ್ತು ಈ ಜೈಕಾರ ಇಡುವವರ ಆಸೆಗೆ ತಕ್ಕಂತೆ ಬರೆಯಲು ಯತ್ನಿಸಿ ಅವನೊಳಗಿನ ತುಡಿತಗಳು ಮತ್ತು ಭಾವಗಳು ಅವನಿಗರಿವಿಲ್ಲದಂತೆ ಮರೆಯಾಗುತ್ತಿವೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ನನಗಾದ ಅನುಭವ. ಅದೇ ಕಾರಣಕ್ಕೆ ಬರೆಯಲೇಬೇಕು ಎನ್ನುವ ತುಡಿತ ಮಿಡಿಯುವವರೆಗೂ ಸುಮ್ಮನೆ ಏನನ್ನು ಗೀಚಬಾರದು ಎನ್ನುವುದು ನಾನು ತೆಗೆದುಕೊಂಡ ವೈಯಕ್ತಿಕ ಅಭಿಪ್ರಾಯ. ನಿಮ್ಮ ಕಾಳಜಿಯುಕ್ತ ವಿಚಾರ ನನಗೆ ಇಷ್ಟವಾಯ್ತು..

    ReplyDelete
  7. ದೇಸಾಯಿ ಸರ್,


    ನಮಗಾದಷ್ಟು ಕಳೆ ತೆಗೆಯೋ ಪ್ರಯತ್ನ ಮಾಡೋಣ.....ಎಲ್ಲಾ ನಮ್ ಕೈಲಿ ಇಲ್ಲ ಆಲ್ವಾ....ನಮ್ಮ ಪ್ರಯತ್ನ ನಾವು ಮಾಡೋದು ಅಷ್ಟೆ.....ನಿಮ್ಮ ಕಾಳಜಿ ಇಷ್ಟ ಆಯಿತು....

    ReplyDelete