Wednesday, July 18, 2012

ಅವನಿಲ್ಲದ ಈ ಸಂಜೆ...

ಅವನಿಲ್ಲದ ಈ ಸಂಜೆ...

ಹೌದು ಈಗ ಅವನಿಲ್ಲ "ಆನಂದ ಮರತೆ ನಹಿ..." ಎಂದು ಹೇಳಿಹೋದವ ಮರಳಿಬರಲಾರ..

ಅವನಾರು ನೆಂಟನೆ ಗೆಳೆಯನೆ ಅಲ್ಲ ಬೆಳ್ಳಿಪರದೆ ಮೇಲೆ ಅವನಿಗಿಂತ ಮೊದಲೂ ಅನೇಕರು

ಬಂದಿದ್ರು ತಮ್ಮ ಪ್ರತಿಭೆ ತಮ್ಮ ಜಾದುವಿನಿಂದ ರಸಿಕರಿಗೆ ದಂಗು ಬಡಿಸಿದ್ದರು.

ಅವ ಸಿನೆಮಾಕ್ಕೆ ಬಂದಾಗ ಅದಾಗಲೇ ಅಲ್ಲಿ ಶಮ್ಮಿ, ದಿಲೀಪ್ ರಾಜ್ ರಾಜೇಂದ್ರ್ ಓಹ್

ಒಬ್ಬರಿಗಿಂತ ಒಬ್ಬರು ಘತಾನುಘಟಿಗಳು.ಇವರ ನಡುವೆ ಈ ಪಂಜಾಬಿಹುಡುಗನ ಪಯಣ...

ಸುರುವಾತು ಸಲೀಸಿರಲಿಲ್ಲ ಮೊದಲ ಚಿತ್ರ "ಆಖ್ರಿ ಖತ್ " ಯಾರೂ ಓದಲೇ ಇಲ್ಲ

ನಾಸಿರ್ ಹುಸೇನ್ ನ "ಬಹಾರೊಂ ಕೆ ಸಪ್ನೆ.." ಸಹ ಸುಂದರ ಕನಸು ತೋರಲಿಲ್ಲ...

೧೯೬೯ ಅದೃಷ್ಟದ ವರ್ಷ "ಆರಾಧನಾ" ಸುವರ್ಣ ಇತಿಹಾಸ ಬರೆದ ಚಿತ್ರ..ಬೆನ್ನಿಗೆ ಬಂದಿದ್ದು

"ದೋ ರಾಸ್ತೆ" ಎರಡೂ ಹಿಟ್ ಚಿತ್ರಗಳು ಅವನ ಮೆಚ್ಚಿನ ಹಿರೋಯಿನಗಳು ಅದರಲ್ಲಿದ್ದುದು..

ಶರ್ಮಿಲಾ ಮತ್ತು ಮುಮತಾಜ. ಮುಂದೆ ನಡೆದದ್ದು ಒಂದು ಇತಿಹಾಸ.


ಇವನ ಕಾರಿನಮೇಲೆಲ್ಲ ಲಿಪಸ್ಟಿಕ್ ಗುರುತುಗಳು..ರಕ್ತದಿಂದ ಬರೆದ ಪ್ರೇಮಪತ್ರಗಳು..

ತಮ್ಮ ಬೊಟ್ಟು ಕತ್ತರಿಸಿಕೊಂಡು ಹರಿದ ನೆತ್ತರಿನಿಂದ ಸಿಂಧೂರ ಬಳಿದುಕೊಳ್ಳುತ್ತಿದ್ದ ಹೆಂಗಸರು...

ಆತ ಒಂದರ್ಥದಲ್ಲಿ ಇಂದ್ರನಂತಿದ್ದ..ಅವನೇ ಹೇಳಿಕೊಳ್ಳುವಹಾಗೆ ದೇವರ ಹಾಗೆ ದೈವತ್ವಕ್ಕೆ ತೀರ

ಹತ್ತಿರದಲ್ಲಿದ್ದ. ಸಾಲು ಸಾಲು ೧೭ ಹಿಟ್ ಚಿತ್ರಗಳು..ಎಲ್ಲಚಿತ್ರದಲ್ಲೂ ಒಬ್ಬನೇ ಹೀರೋ..

ಇವನ ದನಿ, ರೋಮದಿಂದ ತುಂಬಿದ ಎದೆ,ಹಾಕಿಕೊಳ್ಳೋ ಗುರುಶರ್ಟು ಒಂದೇ ಎರಡೇ ಒಂದೊಂದಕ್ಕೂ

ಇತಿಹಾಸವಿದೆ.


ಈತ ಬೆಳೆದ ಸುತ್ತಮುತ್ತಲು ತನ್ನ ಪ್ರಭಾವವಲಯ ಬೆಳೆಸಿದ ಕಿಶೋರ, ಶಕ್ತಿ ಸಾಮಂತ, ಪಂಚಮ್ ಬರ್ಮನ್

ಮತ್ತು ಈತ ಈ ಜೋಡಿ ಅಪ್ರತಿಮವಾದದ್ದು..ಹಿಂದಿ ಸಿನೆಮಾದ ಇತಿಹಾಸ ಸುವರ್ಣಅಕ್ಷರದಲ್ಲಿ ಬರೆದಿದ್ದು

ಇವಾಗಲೇ. ದೇವರ ಹತ್ತಿರ ಒಂದು ಸಿಂಹಾಸನ ಖಾಲಿ ಇತ್ತು ರಾಜೇಶ್ ಖನ್ನ ಅಲ್ಲಿ ಕುಳಿತ ..ಆಳಿದ.

ಇತಿಹಾಸ ಸಾಕ್ಷಿ ಇದೆ..ಮೇಲಿನ ಕುರ್ಚಿಗೆ ಗ್ರೀಸು ಮೆತ್ತಿರುತ್ತದೆ..ಕುಳಿತವ ಜಾರುತ್ತಾನೆ. ಕಾಕಾನದು ಇದೇ ಕತೆ.

ಶೂಟಿಂಗ್ ಗೆ ತೀರ ಲೇಟಾಗಿ ಬರುತ್ತಾನೆ ಇದು ಅವನ ಮೇಲಿದ್ದ ಕಂಪ್ಲೇಟು... "ಹಾಥಿ ಮೇರೆ ಸಾಥಿ" ಚಿತ್ರದ ವೇಳೆ

ಒಂದುದಿನ ಇವ ಕಂಡಿದ್ದು ನಿರ್ಮಾಪಕ ದೇವರ್ ಲೈಟಬಾಯ್ ಗೆ ಸಿಕ್ಕಾಪಟ್ಟೆ ಬಯ್ಯುತ್ತಿದ್ದರು..ಇವ ಕಾರಣ

ಕೇಳಿದಾಗ ಗೊತ್ತಾಗಿದ್ದು ಅಂದು ಆ ಲೈಟ್ ಬಾಯ್ ಅರ್ಧತಾಸು ತಡವಾಗಿ ಬಂದಿದ್ದ. ದೇವರ್ ಬಳಿ ಈ ಬಗ್ಗೆ

ಆಕ್ಷೇಪಿಸಿದ ದೇವರ್ ಹೇಳಿದ್ದು " ನಾ ಅವನಿಗೆ ಬಯ್ಯುವುದು ನನಗೂ ಸೇರಿಲ್ಲ ನಿಜ ನಾ ತಗೊಂಡ ಹೀರೋ

೧೦ ಗಂಟೆ ಬದಲು ೩ ಗಂಟೆಗೆ ಬರುತ್ತಾನೆ ಅವನಿಗೆ ನಾ ಬಯ್ಯಲಾರೆ.." ಮರುದಿನ ಕಾಕಾ ನಿಯಮಿತ ವೇಳೆಗೆ

ಹಾಜರ್ರಾದ. ಇವ ತನ್ನದೇ ಆದ ಸ್ಟೈಲು ಹೊಂದಿದ್ದ ಪ್ರತಿ ಆಕ್ಟರ್ ಗೂ ಅವನದೇ ಆದ ಮ್ಯಾನರಿಸಂ ಇರುತ್ತದೆ..

ಇವನ ಕೈ ಆಡಿಸುವಿಕೆ.., ಹುಬ್ಬು ಹಾರಿಸುವುದು ಕಣ್ಣು ಮಿಟುಕಿಸುವುದು ಹುಚ್ಚು ಹಿಡಿಸಿತ್ತು..ಆದರೆ ಸಿಹಿಊಟ

ಅದೆಷ್ಟು ತಿನ್ನಲು ಸಾಧ್ಯ....ಜನರಿಗೆ ಬದಲಾವಣೆ ಬೇಕಾಗಿತ್ತು. ಸೂಪರ್ ಸ್ಟಾರ್ ಕುರ್ಚಿ ಅಲುಗಾಡಿತು.


ವೈಯುಕ್ತಿಕ ವಿಷಯಕ್ಕೆ ಬಂದ್ರೆ ಅಂಜು ಮಹೇಂದ್ರು ಗಾಯಗೊಳಿಸಿದ್ದಳು ಮುಲಾಮು ಸವರಲು ಬಂದವಳು

೧೭ರ ಡಿಂಪಲ್. ಯಶಸ್ವಿ ಮದುವೆ ಅನ್ನುವಂತಿಲ್ಲ ಬೇರೆ ಆದರು..ಟೀನಾ ಮುನೀಮ್ ಬೆನ್ನು ಹತ್ತಿದ..ಇವನಿಗೆ

ಟಾಟಾ ಹೇಳಿ ಅಂಬಾನಿ ಕೈ ಹಿಡಿದಾಗ ಇವ ಕುಗ್ಗಿದ. ಹಾಂ ಇನ್ನೊಬ್ಬ ಹೆಂಗಸು ಇವನ ಜೀವನದಲ್ಲಿ ಬಂದಿದ್ದಳು..

ಅವಳೇ ದೇವಿ. ಸ್ಟಾರ್ & ಸ್ಟೈಲ್ ಪತ್ರಿಕೆಯಲ್ಲಿ ಅವಳು ಇವನ ಬಗ್ಗೆ ಬರೆಯುತ್ತಿದ್ದ ಲೇಖನಗಳು ಇವನನ್ನು

ಯಶಸ್ಸಿನ ಉತ್ತುಂಗಕ್ಕೆ ಒಯ್ದವು.


ಸಾಲು ಸಾಲು ಹಿಟ್ ಚಿತ್ರಗಳು ಸ್ಟಾರ್ ಗಿರಿ ತಂದ ಅಮಲು..ಇವನಲ್ಲಿದ್ದ ಕಲಾವಿದ ಕಳೆದುಹೋಗುವ ಅಪಾಯವಿತ್ತು

ಆದರೆ "ಆನಂದ", "ಬಾವರ್ಚಿ","ನಮಕ್ ಹರಾಮ್ " "ಇತ್ತೆಫಾಕ್" "ಆವಿಷ್ಕಾರ್" ಈ ಚಿತ್ರಗಳು ಅವನಲ್ಲಿದ್ದ

ನಿಜವಾದ ಕಲಾವಿದನನ್ನು ಪರಿಚಯಿಸಿದವು.


ನಾ ಕಾಲೇಜಿಗೆ ಹೋಗುತ್ತಿದ್ದ ದಿನಗಳು..೮೦ರ ದಶಕ.ನಮ್ಮ ಹುಬ್ಬಳ್ಳಿಯಲ್ಲಿ ಅನೇಕ ಟಾಕೀಸಿನಲ್ಲಿ ಹಳೆ ಸಿನೇಮಾ

ಪುನಃ ಪ್ರದರ್ಶನ ವಾಗುತ್ತಿದ್ದವು, ನನಗೊಬ್ಬ ಆತ್ಮೀಯ ಮಿತ್ರ ವಿವೇಕ್ ಶಿಂಧೆ ..ರಾಜೇಶ್ ಖನ್ನಾನ ಅಭಿಮಾನಿ

ನನ್ನ ಹಿರೋ ಅಮಿತಾಬ್ ,,ನನಗೆ ಅವನಿಗೆ ಯಾರು ಮೇಲು ಎಂಬುದರ ಬಗ್ಗೆ ಅನೇಕಸಲ ಮಾತುಬೆಳೆದಿದ್ದವು

ಅವನ ನಿಲುವು ಅವನದು...ಹೌದು ರಾಜೇಶ್ ಖನ್ನ ಅಮಿತಾಬ್ ಇವರ ನಡುವೆ ನಡೆದ ಪಟ್ಟದ ಕದನವೂ

ರೋಚಕವೆ. ೧೯೭೬ ರಲ್ಲಿ ರಾಜೇಶ್ ಖನ್ನ ಅಂದ "ನನ್ನದು ಮುಗೀತು ಹೊಸ ಸೂಪರ್ ಸ್ಟಾರ್ ಬMದಾಗಿದೆ.."


ಸಾಹಿರ್ ಬರೆದ , ಇವ ಅಭಿನಯಿಸಿದ "ದಾಗ್' ಚಿತ್ರದ ಸಾಲು...

"ಕಲ್ ಕೋಯಿ ಔರ್ ಥಾ

ಆಜ್ ಕೋಯಿ ಔರ್ ಹೈ...

ಯೇ ಭಿ ಏಕ್ ದೌರ್ ಹೈ..

ವೋ ಭಿ ಏಕ್ ದೌರ್ ಥಾ....

ಆಜ್ ಮೈ ಯಹಾಂ ಹೂಂ

ಜಹಾಂ ಕಲ್ ಕೋಯಿ ಔರ್ ಥಾ..."

7 comments:

 1. ಸುಂದರ ಚಿತ್ರಯಾತ್ರೆಯನ್ನು ಅಷ್ಟೇ ಸುಂದರವಾಗಿ ಪದಗಳಲ್ಲಿ ಕಟ್ಟಿ ಕೊಟ್ಟಿದ್ದೀರ ದೇಸಾಯಿ ಸರ್..ತುಂಬಾ ಸೊಗಸಾಗಿದೆ..ರಾಜೇಶ್ ಖನ್ನ ಪರದೆಮೇಲೆ ತೋರಿಸಿದ ಜಾದೂ...ಬಹುಶಃ ಯಾರು ಸರಿಗಟ್ಟಲಿಕ್ಕೆ ಆಗದು...(ನನ್ನ ದೇವರು ಅಮಿತಾಭ್ ನ ಬಿಟ್ಟು!!!!!)

  ReplyDelete
 2. ಅಬ್ಬಬ್ಬ ರಾಜೇಶ್ ಖಂಣನ ಬಗ್ಗೆ ಎಷ್ಟೊಂದು ಮಾಹಿತಿ , ಅವನ ಸಂಪೂರ್ಣ ಪರಿಚಯವನ್ನು ಚೆನ್ನಾಗಿ ಮಾಡಿದ್ದೀರಾ, ಅವನ ಯಶಸ್ಸು ಹಾಗು ಅವನ ಸ್ಟಾರ್ ಗಿರಿಯ ಅವನತಿ ಎರಡನ್ನೂ ವಿವರವಾಗಿ ನಿರೂಪಣೆ ಮಾಡಿದ್ದೀರಿ. ಈ ಮಹಾನ್ ಕಲಾವಿದನಿಗೆ ಕಲಾಭಿಮಾನಿಗಳ ಕಣ್ಣೀರ ಶ್ರದ್ದಾಂಜಲಿ.ಅವನ ಚಿತ್ರದ ಹಾಡುಗಳು ಪ್ರೇಮಿಗಳ ಅಮರ ಪ್ರೇಮ ಗೀತೆಗಳು. ಅವು ಎಂದಿಗೂ ಅಮರ.

  ReplyDelete
 3. a fine tribute to the lost star..Umesh Desai..thanks for sharing!
  malathi S

  ReplyDelete
 4. ಹಿಂದಿ ಚಿತ್ರರಂಗದ ಪ್ರಪ್ರಥಮ ಸೂಪರ್ ಸ್ಟಾರ್ ಬಗ್ಗೆ ಒಳ್ಳೆಯ ಲೇಖನ ಕೊಟ್ಟಿದ್ದೀರ ಸಾರ್.

  ಒಂದು ನಕ್ಷತ್ರದ ಅವಸಾನ ಈ ರೀತಿ ಆಗಬಾರದಿತ್ತು.

  ReplyDelete
 5. ದೇಸಾಯಿಯವರೆ...

  ನಿಜ ಹಿಂದಿ ಸಿನೇಮಾ ರಂಗದ ಮೊದಲ ನಕ್ಷತ್ರ ಇನ್ನಿಲ್ಲ...

  ಅವನ ಕೊನೆಯ ದಿನಗಳು ಚೆನ್ನಾಗಿರಲಿಲ್ಲ...
  ಅಳಿಯ ಅಕ್ಷಯ ಕುಮಾರ್ ಮನಸ್ಸು ಮಾಡಿದ್ದರೆ ಇನ್ನೂ ಚೆನ್ನಾಗಿ ನೋಡಿಕೊಳ್ಳಬಹುದಿತ್ತು...

  ವಿಚ್ಛೇದಿತ ಹೆಂಡತಿ ಡಿಂಪಲ್ ಅವನನ್ನು ನೋಡಿಕೊಳ್ಳಲು ಬರಬೇಕಾಯಿತು...

  ಉತ್ತುಂಗುದ ಶಿಖರಕ್ಕೆ ಏರಿದವರ ಕೊನೆಯ ದಿನಗಳು ಹೀಗಿರಬಾರದು.. ಅಲ್ವಾ?

  ಬಹುಷಃ ಆತನ ಒರಟು ಸ್ವಭಾವ ಇದಕ್ಕೆಲ್ಲ ಕಾರಣವಿರಬಹುದು...

  ಏನೇ ಇದ್ದರೂ..
  ಆತನ ವಿಶಿಷ್ಟ ಶೈಲಿಯ ಮಾತುಗಳು..
  ಅಭಿನಾಅಯ..
  ಜನಪ್ರೀಯ ಹಾಡುಗಳಿಂದ ನಮ್ಮೆಲ್ಲರ ಮನದಲ್ಲಿ ಉಳಿದುಬಿಡುತ್ತಾನೆ

  ReplyDelete
 6. ದೇಸಾಯರ,
  ನನ್ನ ಗಣಕಯಂತ್ರದ ತೊಂದರೆಯಿಂದಾಗಿ ನಾನು ಈಗಾಗಲೇ ಬರೆದ ಪ್ರತಿಕ್ರಿಯೆ ಇಲ್ಲಿ ಪ್ರಕಟವಾಗಿಲ್ಲ. ತೆರೆಯಿಂದ ಮರೆಯಾಗಿ ಹೋದ ತಾರೆಗೆ, ನೀವು ಭಾವಪೂರ್ಣವಾದ ಹಾಗು ವಾಸ್ತವತೆಯಿಂದ ಕೂಡಿದ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದೀರಿ. ನಿಮ್ಮ ಲೇಖನದಿಂದ ಅವನ ನೆನಪುಗಳು ಮತ್ತೆ ಮರುಕಳಿಸಿದವು.

  ReplyDelete
 7. ದೇಸಾಯಿ ಸರ್,

  ಹೌದು, ಭಾರತೀಯ ಚಿತ್ರರಂಗ ಒಂದು ಅಮೂಲ್ಯ ನಟನನ್ನು ಕಳೆದುಕೊಂಡಿದೆ....ಅವರು ಅಭಿನಯಿಸಿದ ಸುಂದರ ಚಿತ್ರಗಳು, ಅವುಗಳಲ್ಲಿನ ಮಧುರ ಗೀತೆಗಳು ನಮ್ಮೊದಿಂಗೆ ಸದಾ ಇರುತ್ತವೆ ಎನ್ನುವುದೇ ಸಮಾಧಾನ....ಉತ್ತಮ ಲೇಖನ...ಧನ್ಯವಾದಗಳು.

  ReplyDelete