Tuesday, April 26, 2011

ಯೇ ರಾತ್ ಭೀಗಿ ಭೀಗಿ..
ಹಿಂದಿನ ಸಂಚಿಕೆಯಲ್ಲಿ ಸಂಜೆಯ ಬಗ್ಗೆ ಬರೆದಿದ್ದೆ. ಈಗ ಅದರ ನಂತರದ ಅಂದರೆ ರಾತ್ರಿ ಬಗ್ಗೆ..
ರಾತ್ರಿ, ನಿಶೆ,ಶಬ್,ರಾತ್  ಹೀಗೆ ನೂರಾರು ಹೆಸರು.ಭಾವಗಳು ಸ್ಫುರಿಸುವ ವೇಳೆ ಅದು.
ನಮ್ಮ ಭಾಗ ಅಂದರೆ ಭೂಗೋಲದ ಈ ಭಾಗದಲ್ಲಿ ರಾತ್ರಿಯಾದಾಗ ಬೇರೆಡೆ ಹಗಲಾಗಿರುತ್ತದೆ.
ಅದು ಸ್ವಾಭಾವಿಕ ಬಿಡಿ. ರಾತ್ರಿ ಅನೇಕ ಸಂಗತಿಗಳನ್ನು,ನೆನಪುಗಳನ್ನು ಹಾಗೆಯೇ ನೋವುಗಳನ್ನು
ತೆರೆದಿಡುತ್ತದೆ. ನಾವು ಮಲಗಿದ ವೇಳೆ ನಮ್ಮ ಮನಸ್ಸು ಎಚ್ಚರವಾಗಿರುತ್ತದೆ..ಒಂಥರ ಸುಶುಪ್ತ
ಸ್ಥಿತಿಯಲ್ಲಿ ನಾವಿರುತ್ತೇವೆ.ನಿದ್ರೆ ಇದು ಅತಿ ಅವಶ್ಯಕ. ಹಗಲಿಡೀ ದಣಿದ ದೇಹ ವಿರಮಿಸುವುದು ಈ
ನಿದ್ದೆಯಲ್ಲಿಯೇ. ನಿದ್ದೆ ಮಾಡಿ ಎದ್ದಾಗ ದೇಹದ ಚೈತನ್ಯವೇ ಬೇರೆ.ಇರಲಿ .ರಾತ್ರಿ ಬಗ್ಗೆ ಅನೇಕ
ಹಾಡುಗಳಿವೆ. ಸುಖ ,ದುಃಖ,ಮಿಲನ, ವಿರಹ ಎಲ್ಲವುಗಳ ಭಾವವೇ ಈ ರಾತ್ರಿ.

ಕಿಶೋರ್ ನ ಹಾಡು ನೆನಪಿದೆಯೇ..
"ಆಯೇ ತುಮ್ ಯಾದ್ ಮುಝೆ.." ಮುಂದುವರೆಸುತ್ತ" ಜಬ್ ಮೈ ರಾತೊಂಮೆ ತಾರೆ ಗಿನತಾ ಹುಂ
ಔರ ತೇರಿ ಕದಮೊಂಕಿ ಆಹಟ್ ಸುನತಾ ಹುಂ,..."
ಎಷ್ಟು ಸುಂದರ ಕಲ್ಪನೆ ಇದೆ. ತಾರೆ ಎಣಿಸುವದು
ಅಂದರೆ ಅದು ಮುಗಿಯದ ಕೆಲಸ.ರಾತ್ರಿಇಡೀ ಜಾಗರಣೆಮಾಡಿ ಅವಳ ಹೆಜ್ಜೆ ಸಪ್ಪಳಕ್ಕೆ ಹಾತೊರೆಯುವ
ಮನ.
ಹೇಮಂತ್ ದಾನ ಶೀತಲ ದನಿ. ರಾತ್ರಿಯ ನೀರವತೆಯನ್ನು ಭೇದಿಸುತ್ತದೆ. ಎದೆ ಹಿಂಡುತ್ತದೆ.
"ತುಮ್ ಪುಕಾರಲೋ...ರಾತ್ ಬೇಕರಾರಿಸಿ ಬೇಕರಾರ್ ಹೈ ತುಮಾಃರಾ ಇಂತಜಾರ್ ಹೈ...".
ರಫಿಯ ನೋವುತುಂಬಿದ ದನಿ. ಈ ನಿಶೆಯ ನೋವು ಮತ್ತಷ್ಟು ಹೆಚ್ಚಿಸುತ್ತದೆ...
"ಸುಹಾನಿ ರಾತ್ ಢಲ್ ಚುಕಿ ನಾ ಜಾನೆ ತುಮ್ ಕಬ್ ಆವೋಗೆ...."
" ದಿನ್ ಢಲ್ ಜಾಯೆ ಹಾಯೆ ರಾತ್ ನ ಜಾಯೆ ತೂ ತೋ ನ ಆಯೆ ತೇರಿ ಯಾದ್ ಸತಾಯೇ..."
ಮಹೇಂದ್ರ ಕಪೂರ್ ನ
"ಯೇ ಹವಾ ಯೇ ಫಿಜಾ ಹೈ ಉದಾಸ್ ಜೈಸೆ ಮೇರಾ ದಿಲ್ ಆಭಿಜಾ ಆಭಿಜಾ.." ಅವನ ದನಿಯ
ನೋವಿಗೆ ಯಾರ ಹೃದಯವೂ ಕರಗದೇ ಇರಲಾರದೇನೋ...!
ವಿರಹ ಅಥವಾ ಬೆಂಕಿ ಸಮಾನವಾಗಿದೆ. ಆ ಕಡೆಯೂ ಬೇಗೆ ಇದೆ.ಅನೇಕ ಯುಗಳ ಗೀತೆಗಳಿವೆ
"ಯಾದ್ ಮೆ ತೇರೆ ಜಾಗ್ ಕೆ ಹಮ್ ರಾತಭರ್ ಕರವಟೆ ಬದಲ್ ತೆ ಹೈ..."
"ಘಬರಾಯೆ ಹಾಯೆ ರೆ ದಿಲ್ ಸಪನೊಂಮೆ ಆಕೆ ಕಭಿಮಿಲ್..."

ಮೇಲಿನ ಭಾವ ಬರೀ ನೋವು ಹೇಳಿದವು. ರಾತ್ರಿಯಲ್ಲಿ ಮಾತ್ರ ಯಾಕೆ ಹೀಗೆ ಹಗಲಿನಲ್ಲಿ ನೆನಪು
ಬರಬಾರದೇಕೆ . ಬಹುಷಃ ರಾತ್ರಿಯಲ್ಲಿ ನಮ್ಮತನಕ್ಕೆ ನಾವು ಮುಖಾಮುಖಿಯಾಗುತ್ತೇವೇನೋ
ದಿನದ ಜಂಜಡಗಳ ಶ್ರಮ ಈ ರಾತ್ರಿಯಲ್ಲಿ ಬದಿಗೊತ್ತಿ ಪ್ರಿಯತಮೆ/ಪ್ರಿಯತಮನನ್ನು
ನೆನೆಯುತ್ತ ಹಾಡು ಗುಣುಗುಣಿಸುವುದು ಸಾಮಾನ್ಯ ಪ್ರಕ್ರಿಯೆ. ಅದು ಬರೀ ನೋವಿನ ಹಾಡು
ಆಗಿರಬೇಕು ಎಂದೇನಿಲ್ಲ. ರಾತ್ರಿಗೆ ಅದರದೇ ಆದ ಗಂಧವಿದೆ. ಅಲ್ಲಿಯ ತಂಗಾಳಿ,ಆ ಕಂಪು
ಹೂವಾಗಲು ಚಡಪಡಿಸುವ ಮೊಗ್ಗು,ನಭದಲ್ಲಿ ಹರಡಿರುವ ತಾರೆ/ಚಂದ್ರ..ಹೀಗೆ ರಾತ್ರಿ ಅದರದೇ
ಆದ ಚಿತ್ರ ನಿರ್ಮಿಸುತ್ತದೆ. ರಾತ್ರಿಯ ಸೌಂದರ್ಯ ಹೊಗಳಿ ಅನೇಕ ಹಾಡಿವೆ--

ರಫಿಯ "ಖೋಯಾ ಖೋಯಾ ಚಾಂದ್ ಖುಲಾ ಆಸಮಾನ..." ಈ ಹಾಡಿನ ಚಿತ್ರಿಕರಣ ರಾತ್ರಿಯಲ್ಲಿ
ಆಗಿತ್ತು. ಅಮಲೇರಿದವನಂತೆ ದೇವ್ ಆನಂದ್ ಓಡಾಡುವ ಚಂದ ಏನು ಹೇಳಲಿ..
 
ರಫಿದೆ ಇನ್ನೊಂದು ಹಾಡಿದೆ.."ಇತನಿ ಹಸೀನ್ ಇತನಿ ಜವಾಂ ರಾತ್ ಕ್ಯಾ ಕರೆ.. ಜಾಗೆ ಹೈ ಕುಛ
ಅಜೀಬ್ ಸಿ ಜಜಬಾತ್ ಕ್ಯಾ ಕರೇ..." ಅವನ ಈ ಹಾಡಿನಲ್ಲಿ ಸಕ್ಕರೆಯ ಮಧುರತೆ ಇದೆ.

"ಜಬ್ ಜಾಗ್ ಉಠೆ ಅರಮಾನ್ ತೋ ಕೈಸೆ ನಿಂದ್ ಆಯೇ.." ಹೇಮಂತ್ ದಾನ ರೇಶಿಮೆ ಕಂಠದ
ಸೊಬಗು ಅದೆಷ್ಟು ಚೆಂದ.

ಇನ್ನು ರಾತ್ರಿ ಬರೀ ನೋವು ಅಥವಾ ಸೌಂದರ್ಯವಲ್ಲ. ಅದು ಮಿಲನ ಮಹೋತ್ಸವದ ಕ್ಷಣ ಕೂಡ.
ಪ್ರೀತಿಯ ಎರಡು ಹೃದಯಗಳು ದೇಹಗಳು ಮಿಲನಗೊಳ್ಳುವ ಆ ದಿವ್ಯಗಳಿಗೆ. ರಾತ್ರಿ ಸಮ್ಮೋಹನ
ಗೊಳಿಸುತ್ತದೆ. ತನ್ನ ಪ್ರಶಾಂತತೆಯ ತಂಪು ಪಸರಿಸಿ ಪ್ರೇಮಿಗಳ ಮಿಲನಕ್ಕೆ ಇಂಬು ಗೊಡುತ್ತದೆ.

"ದೋ ಸಿತಾರೊಂಕಾ ಜಮೀನ್ ಪರ್ ಹೈ ಮಿಲನ್ ಆಜ್ ಕಿ ರಾತ್ " ಈ ಹಾಡು ಸದಾಅಮರ.
ರಫಿ ಲತಾ ನೌಶಾದ್ ಶಕೀಲ್ ರ ಸಂಗಮದ್ದು.

"ಫಿರ್ ಛೇಡಿ ರಾತ್ ಬಾತ್ ಫೂಲೋಂಕಿ ರಾತ್ ಹೈ ಬಾರಾತ್ ಫೂಲೋಂಕಿ.." ಮಕದುಮ್ ಮೊಯಿನುದ್ದೀನ್
ಬರೆದ ಗಜಲಿದು.

"ಆಜ್ ಕಿ ರಾತ್ ಪಿಯಾ ದಿಲ ನ ತೋಡೋ ಮನ್ ಕಿ ಬಾತ್ ಪಿಯಾ ಮಾನಲೋ.." ಲತಾಳ ರೇಶಿಮೆದನಿಯ
ಆಗ್ರಹ ಗುಂಗು ಹಿಡಿಸುತ್ತದೆ.

"ಮಾಲವೂನ್ ಟಾಕ್ ದೀಪ್ ಚೇತವೂನ ಅಂಗ ಅಂಗ
ರಾಜಸಾ ಕಿತಿ ದಿಸಾನಿ ಲಾಭಲಾ ನಿವಾಂತ ಸಂಗ...."
ಸುರೇಶ್ ಭಟ್ ರ ಈ ಮರಾಠಿ ಗಜಲು. ಅದ ಹಾಡಿದ ಲತಾಳ ಭಾವುಕ ದನಿ.

ಇನ್ನು ಎಷ್ಟೋ ಹಾಡು ನಾ ಮರೆತಿರಬಹುದು. ರಾತ್ರಿಯ ಅನುಭವ ಅದರ ಸವಿ ಅನುಭವಿಸಿಯೇ ತೀರಬೇಕು.
ನಗರದ ಗೌಜುಗದ್ದಲಗಳಲ್ಲಿ ನಾವು ರಾತ್ರಿಯನ್ನು ಹಗಲಗಿಸುತ್ತಿದ್ದೇವೆ. ಬಿಪಿಓ , ಕಾಲ್ಸೆಂಟರು ಹುಟ್ಟಿಕೊಂಡು
ರಾತ್ರಿ ಹಗಲು ಪಲ್ಲಟ ಗೊಂಡಿವೆ. ನಾವು ಹೀಗೆ ರಾತ್ರಿಯನ್ನು ಕಡೆಗಣಿಸಿದರೂ ರಾತ್ರಿ ತನ್ನ ಕಾಯಕ
ಮಾಡುತ್ತಲೇ ಇದೆ. ತಾರೆ ಹೊಳೆಯುತ್ತಿವೆ, ಚಂದ್ರ ನಗುತ್ತಿದ್ದಾನೆ, ಮೊಗ್ಗು ಗಮಿಸುತ್ತಿವೆ, ನಿಶಿಗಂಧ ಪಸರಿಸಿದೆ
ನಾವು ನಿದ್ರೆಯ ಸೋಗಿನಲ್ಲಿದ್ದೇವೆ.ಒಂದರೆ ಕ್ಷಣ ಬನ್ನಿ  ಹೋಗುವ ಹಾಡುವ
"ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡ ಬೇಡ ಗೆಳತಿ..."

No comments:

Post a Comment