Wednesday, January 26, 2011

ಇವರು ಮಾತ್ರ ಅದ್ಯಾಕೆ ಹಾಗೆ....?

                                         ಶಾಲೆಯ ಪೆಪ್ಪರಮಿಂಟಿನ ಒಗರಿಗೆ ಮುಖ
                                        ಕಿವುಚಿದ ತರಳೆ..
                                        ಪ್ಲಾಸ್ಟಿಕ್ ಧ್ವಜ ಮಾರಿಬಂದ ದುಡ್ಡು ಎಣಿಸಿ
                                        ಸುಸ್ತಾದವ  " ನಮ್ಮ ಮೆಟ್ರೋ" ದ ಕೆಳಗೆ.
                                        ದಿಲ್ಲಿ ದರಬಾರಿನಲಿ  ಸ್ಟಾರ್ಚ ಹಾಕಿದ ಸೀರೆಯ
                                        ಚುಂಗಿನ ರಾಷ್ಟ್ರಪತಿ.. ಅಂತೂ ಈರುಳ್ಳಿ ಬೆಲೆ
                                        ಇಳಿದಿದ್ದಕ್ಕೆ ನಗುತ್ತಿರುವ ಪ್ರಧಾನಿ..
                                        ಹೀಗೆ ನಿನಗೆ ಅರವತ್ತೊಂದಾಯಿತೀಗ..
                                        ಆದರೇನು ತಾಯೇ ನಿನ್ನ ಹಸಿವೇ  ಹಿಂಗಿಲ್ಲ
                                        ನಿನ್ನ ಮಡಿಲಲಿ ಆಡಿದ ಕಂದಮ್ಮಗಳ ರಕ್ತ
                                         ಅಷ್ಟು ರುಚಿಯೇ...
                                         ಚಪ್ಪರಿಸಿ  ಬೀಗುತಿಹೆಯಲ್ಲ....!
                                         ನಿರಂಜನ ,ಯಶವಂತರಂತಹವರು..
                                         ಇರಬಹುದಿತ್ತು ಇವರೂ
                                         ಏಸಿರೂಮಿನ ತಂಪನುಭವಿಸುತ್ತ
                                         ಸ್ವಿಸ್ ಬ್ಯಾಂಕಿನ ಕೋಡನ್ನು ಗುಣಗುಣಿಸುತ್ತ
                                         ಇದ್ದಾರಲ್ಲವೇ   ಎಲ್ಲರೂ ಹೀಗೆ...
                                         ಇವರು ಮಾತ್ರ ಅದ್ಯಾಕೆ ಹಾಗೆ....?       

                  ನಿನ್ನೆ ಮಾಲೆಗಾಂವ್ ನಲ್ಲಿ ಯಶವಂತ್ ಸೋಲವಣೆ ಅನ್ನುವ ಅಧಿಕಾರಿಯನ್ನು  ಜೀವಂತದಹಿಸಿ ಕೊಲ್ಲಲಾಯಿತು. ಅವ ತೈಲ ಕಲಬೆರೆಕೆ (ಡಿಸೆಲ್,ಪೆಟ್ರೋಲ್) ವಿರೋಧಿಸಿದ್ದ. ಅವ  ಏಸಿ ಹುದ್ದೆ ಅಲಂಕರಿಸಿದ್ದ
ಕೊಂದವರು ಅಲ್ಲಿಯೇ ಇದ್ದಾರೆ ಅಲ್ಲಿಯ ಮುಖ್ಯಮಂತ್ರಿ ಅವರನ್ನು ಬಂಧಿಸುವುದಾಗಿ ಹೇಳಿದ್ದಾನೆ.
ಒಂದರೆ ಕ್ಷಣ  ನಿಲ್ಲೋಣ ಈ ಪ್ರಶ್ನೆ ಕೇಳೋಣ.." ಇವರು ಮಾತ್ರ ಅದ್ಯಾಕೆ ಹಾಗೆ....? "   
                        

7 comments:

 1. ಚಿಂತನೆಗೀಡುಮಾಡುವಂತಿದೆ... ಈ ಚಿಂತೆಗೆ ಮಾತ್ರ ಪರಿಹಾರ .... ?!

  ReplyDelete
 2. ಅಲ್ಲಲ್ಲಿ ಅಲ್ಲಲ್ಲಿ ಕಾಣುವ ಈ ಪ್ರಾಮಾಣಿಕರನ್ನು ಮಫಿಯಾ ಕ್ರೂರವಾಗಿ ಹೊಸಕಿ ಹಾಕುವದರ ಮೂಲಕ ಇತರ ಪ್ರಾಮಾಣಿಕರಿಗೆ ಸಂದೇಶ ನೀಡುತ್ತದೆ. IOCಯ ಓರ್ವ ತರುಣ ಇಂಜನಿಯರನನ್ನು ಸಹ ಕೆಲವು ವರ್ಷಗಳ ಹಿಂದೆ ಕೊಲೆ ಮಾಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬ ವನರಕ್ಷಕನನ್ನು ಟ್ರಕ್ಕಿನ ಹಿಂದೆ ಎಳೆಯುತ್ತ ಕೊಲ್ಲಲಾಗಿತ್ತು. ಈ ಘಟನೆಗಳ ವಿಚಾರಣೆ ಏನಾಯ್ತೋ ಏನೊ! ಇದನ್ನೆಲ್ಲ ಅರಿತೂ ಕೆಲವು ಪ್ರಾಮಾಣಿಕರು ಮುನ್ನುಗ್ಗುತ್ತಾರೆ. ಇವರೇಕೆ ಹೀಗೆ ಎನ್ನುವ ನಿಮ್ಮ ಪ್ರಶ್ನೆ ಸಮಂಜಸವಾಗಿದೆ.

  ReplyDelete
 3. mr.nagaraj we are movingtowars black hole....!

  ReplyDelete
 4. ತೇಜಸ್ವಿನಿ ಧನ್ಯವಾದಗಳು.ಅಂತ್ಯ ಹಾಡಬೇಕು ಅಂದವರೇ ಹೀಗೆ ದುರಂತವಾದರೆ ಜನ ಧೈರ್ಯ ಮಾಡಲಾರರೇನೋ

  ReplyDelete
 5. ಕಾಕಾ ನಿಮಗೆ ಡಬಲ್ ಧನ್ಯವಾದಗಳು.ಈ ಮೊದಲೇ ನೀವು ಕಾಮೆಂಟ್ ಹಾಕಿದ್ರಿ ನಾ ಕವಿತಾದಾಗ ಐವ್ವತ್ತೊಂದು ಅಂತ ಬರದಿದ್ದೆಆದ್ರ ಅದು ಅರವತ್ತೊಂದಾಗಬೇಕಿತ್ತು.ತಿದ್ದುವ ಗಡಿಬಿಡಿಯೊಳಗ ನಿಮ್ಮ ಹಾಗೂ ಭಟ್ ಅವರ ಕಾಮೆಂಟ್
  ಅಳಿಸಿ ಹೋದ್ವು. ನೀವು ಹೇಳಿದ ತರುಣ ಇಂಜಿನೀಯರ್ ಅಂದ್ರ ನಿರಂಜನ್ ಅವ ನಮ್ಮವ. ಅವನದೂ ದುರಂತನ ಆದ್ರ
  ಯಶವಂತಂದು ಮಾತ್ರ ತೀರ ಕೆಟ್ಟದ್ದು. ಈ ಮಾಫಿಯಾದ ಹಿಂದೆ ಭುಜಬಲ್ ಹೆಸರು ಕೇಳ್ತದ ಆದ್ರ ಏನೂ ನಿಲ್ಲುವಹಂಗಿಲ್ಲ ಯಾಕಂದ್ರ ಭುಜಬಲ್ ಪಕ್ಷದಾವ್ರು ಮಹಾರಾಷ್ಟ್ರದ ಕೀಲಿಕೈ ಇದ್ದಂಗ

  ReplyDelete
 6. ದೇಸಾಯಿ ಸರ್,
  ನಿಮ್ಮ ಲೇಖನ ಓದಿ ನನಗನಿಸಿದ್ದು
  PATAA NAHI, APNI JINDAGI KIS RAAH PE JAA RAHI HAI,KONASAA MOD HAI, MAKAAM HAI.. PATAA NAHI.. MANJILA KA TO KHABAR NAHI..!

  ReplyDelete