Saturday, November 13, 2010

ಎಂದೂ ಮರೆಯದ ಹಾಡು---೭



ಈ ಲೇಖನದ ಸರಣಿ ಬಹಳ ದಿನಗಳಿಂದ ಖಾಲಿ ಇತ್ತು.ಬಹುಷಃ ವಿಶೇಷವಾದ ಗೀತೆಗೆ ಕಾಯುತ್ತಿತ್ತೇನೋ... ಈ ಸಲ ನಾನು ಆರಿಸಿದ ಹಾಡು "ದೇವರ್ " ಚಿತ್ರದ್ದು.ಇದು ೧೯೬೬ ರಲ್ಲಿ ಬಂದಿದ್ದು. ಈ ಚಿತ್ರಕ್ಕೆ
ರೋಶನ್ ಸಂಗೀತವಿತ್ತು. ಹಿಂದಿ ಚಿತ್ರರಂಗದಲ್ಲಿ ಮದನಮೋಹನ್ ನಂತರ ಗಜಲ ಸಂಯೋಜಿಸಿದವರಲ್ಲಿ  ರೋಶನ್
ಹೆಸರು ಸಹ ಮೇಲ್ಪಂಕ್ತಿಯದು.ಈ ಹಾಡು ಮುಕೇಶ್ ಹಾಡಿದ್ದು. ಮುಕೇಶ್ ನೋವಿನ ಭಾವಗಳಿಗೆ ದನಿಯಾದವ.ಈ ಹಾಡಿನಲ್ಲಿ ನೋವಿನ ಜೊತೆಜೊತೆಗೆ ಒಂದು ತೆರನಾದ ಸಾತ್ವಿಕ ಆಕ್ರೋಶ ಇದೆ. ಈ ಗೀತೆಯ ಭಾವನೆಗಳ ಏರಿಳಿತಕ್ಕೆ
ಮುಕೇಶ್ ದನಿ ಮುಕುಟಪ್ರಾಯವಾಗಿದೆ.ಬಹುಷಃ ಹಿಂದಿ ಚಿತ್ರರಂಗದಲ್ಲಿ ಮುಕೇಶ್ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡವರಲ್ಲಿ ರೋಶನ್ ಒಂದು ಕೈ ಮೇಲೆ ಅಂತ ಹೇಳಬಹುದು.ಈ ಹಾಡು ಬರೆದಿದ್ದು ಆನಂದ ಬಕ್ಷಿ. ಈ ಅಪ್ರತಿಮ ಗೀತಕಾರನ ಬಗ್ಗೆ ಒಂದೆರಡು ಸಾಲು..

ಆನಂದ್ ಬಕ್ಷಿ ಹುಟ್ಟಿದ್ದು ೨೧/೦೭/೧೯೩೦ ರಲ್ಲಿ..ರಾವಲ್ಪಿಂಡಿಯಲ್ಲಿ.  ಸ್ವಾತಂತ್ರ್ಯಪೂರ್ವದಲ್ಲಿ ನೇವಿಯಲ್ಲಿದ್ದ.ಬಟವಾರಾ
ನಂತರ ಅವರ ಕುಟುಂಬ ಭಾರತಕ್ಕೆ ಬಂತು.ಇಲ್ಲಿ ಸೈನ್ಯದಲ್ಲಿ ಕೆಲಸಕ್ಕೆ ಸೇರಿದ.ಬರೆಯುವ ,ಹಾಡುವ ಖಯಾಲಿ ಬಕ್ಷಿಗೆ. ೧೯೫೬ ರಲ್ಲಿ ಸುಮಾರು ಅರವತ್ತು ಗೀತೆಗಳ ಜೊತೆಗೆ ಮುಂಬಯಿಗೆ ಬಂದಿಳಿದ. ಸಂಘರ್ಷ ಫಲ ನೀಡಲಿಲ್ಲ
ಹಲವು ರಾತ್ರಿ ದಾದರ್ ಸ್ಟೇಶನ್ ನ ವೇಟಿಂಗ್ ರೂಮ್ ಗಳಲ್ಲಿ ಕಳೆದ.ಒಂದೆರಡು ಚಿತ್ರಗಳಿಗೆ ಹಾಡು ಬರೆಯುವ ಅವಕಾಶ ಸಿಕ್ಕಿತಾದರೂ ಅವು ಜನರ ನಾಲಿಗೆ ಮೇಲೆ ನೆಲೆಯೂರಲಿಲ್ಲ. ೧೯೬೫ ರಲ್ಲಿ ಎರಡು ಚಿತ್ರಗಳು--
"ಹಿಮಾಲಯ್ ಕಿ ಗೋದ್ ಮೇ",","ಜಬ್ ಜಬ್ ಫೂಲ್ ಖಿಲೆ " ಹಿಟ್ ಆದವು.ಹಾಡು ಮನೆಮಾತಾದವು.ಆನಂದಬಕ್ಷಿ
ಹಿಂತಿರುಗಿ ನೋಡಲಿಲ್ಲ. ಸುಮಾರು ೩೫೦೦ ಹಾಡು ಬರೆದ ಬಕ್ಷಿ ಹಿಂದಿಸಿನೇಮಾದ ಹೊಳೆಯುವ ನಕ್ಷತ್ರ.

ನಾ ಆರಿಸಿದ ಗೀತೆ ಅವರ ಪ್ರತಿಭೆಗೊಂದು ಉದಾಹರಣೆ. ಚರ್ವಿತಚರ್ವಣ ಅನ್ನಬಹುದಾದ ಸನ್ನಿವೇಶ. ನಾಯಕನಿಗೆ
ಮೋಸ ಆಗಿರುತ್ತದೆ.ತನ್ನ ದುಃಖ ತೋಡಿಕೊಳ್ಳಲು ಅವನಿಗೆ ಹಾಡೊಂದೇ ದಾರಿ.ಸರಿ ಹಾಡುತ್ತಾನೆ ತನ್ನೆದೆಯ ನೋವು ಹೊರಹಾಕುತ್ತಾನೆ. ಗೀತಕಾರ ಇಂತಹ ಮಾಮೂಲಿ ಸನ್ನಿವೇಶದಲ್ಲೂ ತನ್ನ ಪ್ರತಿಭೆ ತೋರಿಸಬೇಕು. ಆ ನೋವು ತಾನೇ ಅನುಭವಿಸಿದ ಹಾಗೆ ಬರೆಯಬೇಕು.ಬಕ್ಷಿ ಬರೆದ ಅಮರ ಗೀತೆಯಲ್ಲಿ ಇದೊಂದು.
www.mouthshut.com ದ ಸಮೀಕ್ಷೆ ಪ್ರಕಾರ ೨೦ ಸದಾಕಾಲದ ನೋವಿನ ದುಃಖದ ಹಾಡುಗಳಲಿ ಇದೂ ಒಂದು.
ಹಾಡಿನ ಪೂರ್ಣ ಪಾಠ ಕೊಟ್ಟಿರುವೆ. ಅಲ್ಪ ನಾದ ನಾನು ಈ ಗಜಲಿನ ಭಾವಾನುವಾದ ಸಹ ಮಾಡಿರುವೆ.
ನೋಡಿ ಓದಿ ತಿಳಿಸಿ ಹೇಗಿದೆ ಅಂತ....

ಮೊದಲು ಮೂಲ ಗೀತೆ.....

बहारोंने मॆरा चमन लूटकर खिजा को ये इलझाम क्युं दे दिया
किसीने चलॊ दुश्मनी की मगर इसे दोस्ति नाम क्युं  दे दिया

मै समझा नहिं ऐ मेरे हमनशिं सजा ये मीली है मुझे किसलिये
के साकीं ने लब से मेरे छीनकर किसि और को जाम क्युं दे दिया

मुझे क्या पता था कभि इश्क मे रकीबों कॊ कासिद बनाते नहीं
खता हॊ गई ए कासिद मेरे तेरे हाथ पैगाम क्युं दे दिया..

खुदाया यहां तेरे इनसाफ के बहुत मैने भी चर्चें सुने है मगर
सजा कि जगह एक खतावार कॊ भला तूने ईनाम क्युं दे दिया..


ನನ್ನ ಪ್ರಯತ್ನ  ಹೀಗಿದೆ.....

ನಾ ಬೊಗಸೆಯೊಡ್ಡಿದಾಗ ಮುಳ್ಳುಗಳನೇ ಸುರಿದ  ಆ ಚೈತ್ರ...
ಅಮಾಯಕ ಶಿಶಿರನ ಮೇಲೇಕೆ ಗೂಬೆ ಕೂರಿಸಿದ.

ನನ್ನಜೊತೆ ಹಗೆಸಾಧಿಸಿ ಕುಹಕಮಾಡಿದನು ಸಖ  ಆದರೆ
ಆ ನಾಟಕಕೆ.. ಗೆಳೆತನದ ಹೆಸರೇಕೆ  ಹೇಳಿದ..

ನನ್ನಾವ ತಪ್ಪಿಗೆ ಈ ಪರಿ ಶಿಕ್ಷೆ ವಿಧಿಸಿತು ವಿಧಿ ಗೊತ್ತಾಗಲೇ  ಇಲ್ಲ
ಮಧುಬಟ್ಟಲನು ನನ್ನಿಂದ ಕಸಿದು ಅದನು ನಿನಗೇಕೆ ಕುಡಿಸಿದ..

ನನಗರಿವಾಗಲೇ ಇಲ್ಲ ಪ್ರೀತಿಯಲಿ.. ಸಖನೂ ದಾಯಾದಿಯಾಗುವನೆಂದು
ತಪ್ಪಾಯಿತು ..ನೋಡಿ ಸಖನ ಕೈ ತುಂಬ ಇದೆ ಕಲೆ ನನ್ನದೇ ರಕ್ತದ...

ದೇವ ನಿನ್ನ ನ್ಯಾಯಪರತೆಯ ಬಗ್ಗೆ ನಾ  ಹಲವರಿಂದ ಕೇಳಿದ್ದೆ...
ನೋಡೀಗ ವಂಚಕನ ಕೊರಳಲಿ ಹೂಮಾಲೆ ರಾರಾಜಿಸುದುದ...

ಆನಂದ್ ಬಕ್ಷಿ ತನ್ನ ಗಜಲ್ ದಲ್ಲಿ "ರಕೀಬ್ " ಹಾಗೂ "ಕಾಸಿದ್" ಎಂಬ ಶಬ್ದಗಳನ್ನು  ಬಳಸಿಕೊಂಡಿದ್ದಾರೆ.
ನನಗೆ ಅವುಗಳ ಅರ್ಥ ಗೊತ್ತಿರಲಿಲ್ಲ. ಕೊನೆಗೆ "ಬಜ್" ನಲ್ಲಿ ಪ್ರಶ್ನೆ ಮುಂದಿಟ್ಟಾಗ ಶ್ರೀಯುತ ಗೋರೆ, ಆಜಾದ್ ಹಾಗೂ
ಸುರೇಶ್ ಹೆಗಡೆ ಯವರು ನೆರವಾದರು, ಅವರ ಸಹಾಯಕ್ಕೆ ವಂದನೆ ಹೇಳುವೆ.


  

7 comments:

  1. ಚೆನ್ನಾಗಿದೆ! ಮಧುರ ಮಧುರವೀ ಮಂಜುಳಗಾನ

    ReplyDelete
  2. ಆನಂದ್ ಭಕ್ಷಿಯ ಹಾಡುಗಳನ್ನು ಕೇಳುತ್ತಾ ಬೆಳೆದವನು ನಾನು ,ಮುಖೇಶ್ ಅರ್ಥ ಪೂರ್ಣ ಹಾಡಿಗೆ ದ್ವನಿ ಯಾಗಿ ವೈವಿಧ್ಯ ಮೆರೆದಿದ್ದಾರೆ.ಇನ್ನೂ ರೋಶನ್ ಬಗ್ಗೆ ಹೇಳುವುದೇ ಬೇಡ ಭಾರತೀಯ ಮರೆಯ ಲಾಗದ ಒಂದು ಚೇತನ .ಆನಂದ್ ಭಕ್ಷಿಯ ಹಾಡಿನ ಕನ್ನಡ ಅರ್ಥ ನೀಡಿ ಸೋಸಗಸಾದ ಲೆಖ್ಸ್ನ ಬರೆದಿದ್ದೀರಿ ನಿಮಗೆ ಜೈ.ಹೋ.
    --
    ಪ್ರೀತಿಯಿಂದ ನಿಮ್ಮವ ಬಾಲು.

    ReplyDelete
  3. ದೇಸಾಯಿಯವರೇ, ಚೆನ್ನಾಗಿದೆ. ಮು೦ದುವರಿಯಲಿ ಹೀಗೆ. .....

    ReplyDelete
  4. ಚೆನ್ನಾಗಿದೆ.. ದೇಸಾಯಿಯವರೆ.ಬರವಣಿಗೆ ನಡೆಯುತ್ತಿರಲಿ..
    ನಿಮ್ಮ ಹಳೆಯ ಬರಹಗಳನ್ನೂ ಓದುತ್ತಿದ್ದೇನೆ.

    ReplyDelete
  5. Dear Desayar,
    The translation is very good. I could appreciate the original after reading the translation.
    Thank you.

    ReplyDelete
  6. ದೇಸಾಯ್ ಸರ್,
    ಎಂದು ಮರೆಯದ ಹಾಡಿನಲ್ಲಿ ಉತ್ತಮ ಅನುವಾದ ಮಾಡಿದ್ದೀರಿ. ನನಗೂ ಅನಂದ್ ಬಕ್ಷಿ, ಮುಖೇಶ್ ದ್ವನಿಯೆಂದರೆ ತುಂಬಾಇಷ್ಟ. ಇಂಥವು ಮತ್ತಷ್ಟು ಪರಿಚಯವಾಗಲಿ..

    ReplyDelete
  7. ಉತ್ತಮ ಅನುವಾದ.. ಮುಕೇಶ್, ರಫಿ ಮತ್ತು ಕಿಶೋರ್ ಹಾಡು ನನ್ನ ಫೆವರೆಟ್ ... ಚೆನ್ನಾಗಿದೆ..

    ReplyDelete