Friday, March 26, 2010

ನೀನು


ಈ ಬಾಳ ಬಾಂದಳದಲಿ ಮಿನುಗುವ
ಚುಕ್ಕಿ ನೀನು....
ಅಂಗಳದಲಿ ಹರಡಿದ ರಂಗೋಲಿಯ
ಚಂದ ನೀನು....
ಕಾರ್ಮುಗಿಲ ನಡುವೆ ಮಿನುಗಿದ ಬೆಳ್ಳಿ
ಗೆರೆ ನೀನು...
ಶ್ರಾವಣದ ಒದ್ದೆ ಮುಂಜಾವಲಿ ಅರಳಿದ
ಹೂ ನೀನು...
ಬಾಳ ಹಾಲಾಹಲದಲೂ ಚಿಮ್ಮುವ ಅಮೃತ
ವಾಹಿನಿ ನೀನು....
ಧಮನಿ ಧಮನಿಗಳಲಿ ಉಕ್ಕುವ ಜೀವ
ತೇಜ ನೀನು....

8 comments:

  1. ಕವನದೊಳಗಿನ ಆಪ್ತತೆಯ ಭಾವ ಇಷ್ಟವಾಯಿತು.

    ReplyDelete
  2. ತುಂಬ ಚೆನ್ನಾಗಿದೆ...

    ReplyDelete
  3. ದೇಸಾಯರ,
    ಮಗಳು ತಂದೆ ತಾಯಿಯರಿಗೆ ಏನು ಆಗಿರ್ತಾಳ ಅನ್ನೋದನ್ನ ಭಾಳ
    ಛಂದಾಗಿ ಹೇಳೀರಿ.ಅದರಾಗೂ,

    "ಶ್ರಾವಣದ ಒದ್ದೆ ಮುಂಜಾವಲಿ ಅರಳಿದ
    ಹೂ ನೀನು...
    ಬಾಳ ಹಾಲಾಹಲದಲೂ ಚಿಮ್ಮುವ ಅಮೃತ
    ವಾಹಿನಿ ನೀನು....
    ಧಮನಿ ಧಮನಿಗಳಲಿ ಉಕ್ಕುವ ಜೀವ
    ತೇಜ ನೀನು.... "
    ಅನ್ನುವ ಭಾವನೆ ಸಂತಾನವಾತ್ಸಲ್ಯದ ಸಾರ್ಥಕ ರೂಪಕವಾಗಿದೆ.

    ReplyDelete