Sunday, February 14, 2010

ಸೋಲಾ ಬರಸ್ ಕಿ ಬಾಲಿ ಉಮರ್ ಕೊ ಸಲಾಮ್ ..


ಇದೇನು ನಾ ಯಯಾತಿತಾದೆನೆ ಅಂದುಕೊಬೇಡಿ ..ಹಾಗೆ ನೋಡಿದ್ರೆ ನಮ್ಮೆಲ್ಲರ ಮನದಲ್ಲಿ
ಆ ಹಂಬಲ ಇದ್ದೇ ಇದೆ ನನ್ನಂತಹ ಭಂಡರು ಅದನ್ನು ನಾಚಿಕೆಯಿಲ್ಲದೆ ಹೊರಹಾಕುತ್ತೇವೆ ಇನ್ನುಳಿದವರು ಆ ಚಪಲಗಳಿಗೆ ವೈರಾಗ್ಯದ
ಮುಸುಕು ಹಾಕಿರುತ್ತಾರೆ.ಸಾಹಿರ್ ಬರೆದ ಹಾಡಿನ ಸಾಲೊಂದಿದೆ " ಯೇ ಭೋಗ್ ಭಿ ಏಕ್ ತಪಸ್ಯಾ ಹೈ ತುಮ್ ತ್ಯಾಗ್ ಕೆ ಮಾರೆ
ಕ್ಯಾ ಜಾನೋ ..." ನಿಜ ಅಲ್ಲವೇ ಭೋಗವನ್ನೇ ಒಂದು ತಪಸ್ಸಾಗಿ ಸಿದ್ಧಿಸಿಕೊಂಡರೆ ಹೇಗೆ.... ಯಯಾತಿ ಮಾಡಿದ್ದು ಇದನ್ನೇ.

ಮೇಲಿನ ಪೀಠಿಕೆ ಯಾಕೆ ಅಂದ್ರೆ ನನ್ನ ಹಾಗೂ ಅಂಜಲಿಯ ದಾಂಪತ್ಯಕ್ಕೀಗ ಹದಿನಾರರ
ಹರೆಯ. ಹದಿನಾರು ಈ ವಯಸ್ಸು ಅನೇಕ ಆಸೆಗಳ ,ಬಣ್ಣಗಳ ಕನಸು ಕೊಡುವ ವಯಸ್ಸು ..ಆ ವಯಸ್ಸು ಮುಟ್ಟಿದವರಿಗೆ.....!
ಕಪ್ಪು ಕೂದಲ ನಡುವೆ ಅಲ್ಲಲ್ಲಿ ಇಣುಕೋ ಬಿಳಿಗೂದಲಿಗೆ ಡೈ ಹಚ್ಚುತ್ತ.., ಬಿಎಮ್ ಟಿಸಿಯಲ್ಲಿ ಜೋತಾಡುತ್ತಲೇ ಈ ಬೆಂಗಳೂರಿನಲ್ಲಿ ಸೈಟಿನ ಬಗ್ಗೆ ಕನಸಿಸುತ್ತ ಅಥವಾ ಮಗಳ ಅಭ್ಯಾಸದ ಬಗ್ಗೆ ತಲೆ ಚಚ್ಚಿಕೊಳ್ಳುತ್ತಲೋ, ಮತ್ತೆ ಎಲ್ಲೋ ನೋಡಿದ
ಬಳೆ ಪ್ಯಾಟರ್ನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ ದಿನ ಕಳೆಯೋ ನಮ್ಮಂಥವರಿಗೂ ಹದಿನಾರು ತುಂಬಿದೆ ... ಹೌದು ಈ ನಿಟ್ಟಿನಲ್ಲಿ
ಹೊಸ ಜಾಡು ಹಿಡಿಯಬೇಕಾಗಿದೆ..ಮತ್ತೆ ಬಾಳಿನ ಕ್ಯಾನವಾಸನಲ್ಲಿ ಬಣ್ಣ ತುಂಬಬೇಕಾಗಿದೆ.... ಈ ಹದಿನಾರರ ಹರೆಯಕ್ಕೆ
ಹೊಸಾ ಅರ್ಥ ಕೊಡಬೇಕಾಗಿದೆ. ಸಿಟ್ಟು ಸೆಡವು ಮೂಲೆಯ ಟ್ರಂಕಿನಲ್ಲಿ ಮುಚ್ಚಿಟ್ಟು ಮನೆ ಬಾಗಿಲಿಗೆ ಹೊಸ ಆಸೆಗಳ ತೋರಣ
ಕಟ್ಟುವುದಿದೆ. ಎಷ್ಟೊಂದು ಕೆಲಸಗಳಿವೆ.....
ಜಗಜಿತ್ ಸಿಂಗ್- ಚಿತ್ರಾ ಸಿಂಗ್ ಹಾಡಿದ ಗಜಲಿನ ಸಾಲು ಹೀಗಿದೆ....

उस मॊड से शुरू करॆ फिर से ए जिंदगि..
हर शय जहां हसीन थि हम तुम थे अजनबि...

ನಿಮ್ಮ ಹಾರೈಕೆ ಇದ್ದೇ ಇದೆ ಅಲ್ಲವೇ....
೧೫/೦೨/೨೦೧೦....

19 comments:

 1. Noor kaala baali. Preetiyinda baduki. Wish you all the peace prosparity and happyness.

  ReplyDelete
 2. ಸರ್, ನಿಮ್ಮ ಮದುವೆ ಯೌವನಕ್ಕೆ ಕಾಲಿಟ್ಟಿದೆ. ಮುಂದೆ ಅದು ಷಷ್ಟಿ...ಇತ್ಯಾದಿಗಳನ್ನು ಆಚರಿಸಿಕೊಳ್ಳಲಿ ಅಂತ ಹಾರೈಸುತ್ತೇನೆ. ಫೋಟೊ ಸೂಪರ್.

  ReplyDelete
 3. ನಿಮ್ಮ ದಾಂಪತ್ಯಕ್ಕೀಗ ಹದಿನಾರರ ಹರಯ, ವಯಸ್ಸಿಗಲ್ಲ. ಅಭಿನಂದನೆಗಳು.

  ReplyDelete
 4. ನಲಿವಿನೀಂ ನಿಮ್ಮ ಜೋಡಿ
  ಗೆಲುವಿನೀಂ ಬಾಳ್ಗೆ ನೂರ್ಕಾಲ ಮನೆಮಾಡಿ
  ಉಂಡುಟ್ಟು ಸುಖದಿ ಜಯಿಸಲಿ ಸುತಸುತೆಯರೊಡಗೂಡಿ
  ಮಕ್ಕಳು-ಮರಿಮಕ್ಕಳು-ಮರಿಮರಿಮಕ್ಕಳು ಮನೆತುಂಬ ಕುಣಿದು ಕುಪ್ಪಳಿಸೆ
  ಜಯಸಿರಿಯು ದಾಂಗುಡಿಯಿಟ್ಟು ನಿಮ್ಮ ಮನೆಮನದಂಗಳವ ಬೆಳಗಲೆಂಬ
  ಅತಿಶಯದ ಸ್ನೇಹ-ಪ್ರೀತಿ ತುಂಬಿ ಹಾರೈಪೆನಾ..

  ReplyDelete
 5. ನಿಮ್ಮ ದಾ೦ಪತ್ಯಕೆ ಹದಿನಾರರ ಹರೆಯ
  ನೂರು ಕನಸುಗಳ ಹೊತ್ತು ಕುಣಿಯುವ ಸಮಯ
  ನೋವಿನ, ನಲಿವಿನ, ಗೆಲುವಿನ ನಡುವಲಿ
  ನಡೆಯಲಿ ಬಾಳ ಬ೦ಡಿ ಪಯಣ

  ReplyDelete
 6. ಉಮೇಶ-ಅಂಜಲಿ,
  "ಏಕ್ ದೂಜೆ ಕೆ ಲಿಯೆ!"
  ಶುಭಾಶಯಗಳು.
  Browning ಹೇಳ್ಯಾನ, ನೋಡರಿ:
  "Let us grow old together
  The best is yet to be."

  ReplyDelete
 7. ಅಭಿನಂದನೆಗಳು ಸಾರ್.. ನೂರ್ಕಾಲ ಚೆನ್ನಾಗಿ, ಪ್ರೀತಿಯಿಂದ ಬಾಳಿ..

  ReplyDelete
 8. ಯಾಕೋ ನಿಮ್ಮ ಹದಿನಾರರ ಸ೦ಭ್ರಮ ನೋಡಿ, ನನ್ನ ಮದುವೆಯಾಗಿ ಎಷ್ಟು ದಿನಗಳಾದವೆ೦ದು ಲೆಕ್ಕ ಹಾಕಲು ನಮ್ಮದು ಹದಿನಾರನೇ ವರ್ಷವೆ೦ದು ಗೊತ್ತಾಯಿತು. ನಾಳೆ ಫ಼ೆಬ್ರವರಿ ೨೫ಕ್ಕೆ ನಮ್ಮದು ಹದಿನಾರು ತು೦ಬುತ್ತೆ....
  ಆದರೆ ಹದಿನಾರು ವರ್ಷಗಳಾದವೇ?? ನ೦ಬೋಕಾಗುತ್ತಿಲ್ಲ ಬಿಡಿ... ನಿನ್ನೆ ಮೊನ್ನೆ ಆದ ಹಾಗಿದೆ...

  ReplyDelete
 9. ಧನ್ಯವಾದಗಳು..ವಸಂತ್

  ReplyDelete
 10. ಶಿವು ಧನ್ಯವಾದಗಳು ಫೋಟೋ ಮೊನ್ನೆ ಡಿಸೆಂಬರ್ ನಲ್ಲಿ ಮಡಿಕೇರಿಗೆ ಹೋದಾಗ ಅಲ್ಲಿಯ ಸ್ಟುಡಿಯೊದಲ್ಲಿ ತಗೆಸಿಕೊಂಡದ್ದು

  ReplyDelete
 11. ಸವಡಿ ಅವರಿಗೆ ಧನ್ಯವಾದಗಳು ಮನಸ್ಸಿಗೆ ಬಂದ ಹರೆಯ ಎಂದೂ ಮಾಸಬಾರದು ಇದು ನನ್ನ ಆಶಾ ಅದ

  ReplyDelete
 12. ಸೀತಾರಾಮ್ ಸರ್ ಅಡ್ವಾನ್ಸಾಗಿ ಶುಭಾಶಯಗಳು...ಏನು ತಯಾರಿ ನಡಸೀರಿ ಆ ವಿಶೇಷ ದಿನದ್ದು...

  ReplyDelete
 13. ಭಟ್ ಅವರಿಗೆ ಧನ್ಯವಾದ ನಿಮ್ಮ ತುಂಬಿದ ಹಾರೈಕೆಗಳಿಗೂ ಒಂದು ಸಲಾಮು

  ReplyDelete
 14. ಪರಾಂಜಪೆ ಅವರಿಗೆ ಧನ್ಯವಾದಗಳು ನಿಮ್ಮ ಹಾರೈಕೆಗೆ ಮನ ತುಂಬಿದೆ

  ReplyDelete
 15. ಧನ್ಯೊಸ್ಮಿ ಕಾಕಾ ನಿಮ್ಮಂಥ ಹಿರಿಯರ ಆಶೀರ್ವಾದ ಹೀಗೆಯೇ ಇರಲಿ....

  ReplyDelete
 16. ಗೋರೆ ಸರ್ ಹಾರೈಕೆಗೆ ಧನ್ಯವಾದಗಳು

  ReplyDelete
 17. umesh sir

  late agi wishes helta irodake sorry!!!!

  happy wedding aniversary sir!!!

  ReplyDelete
 18. ಸೂಪರ್ರಾಗಿ ಕಾಣ್ತಿದ್ದೀರಿ ಸಾಹೇಬ್ರೇ..

  ಹದಿನಾರಕ್ಕೆ ಶುಭಾಷಯಗಳು.

  -ಯಳವತ್ತಿ

  ReplyDelete