ಇದು ಹೊಸಾ ಪ್ರಯೋಗ ನ್ಯಾನೋಗಿಂತ ಸ್ವಲ್ಪ ದೊಡ್ಡದು ಹೆಂಗನಿಸ್ತು ಈ ಹೊಸಾ ಅಂಬೋಣ...??
1)
ಅವ ಮಗಳಿಗೆ ತಿಳಿಹೇಳಿದ..ಒಳ್ಳೆಯ ಸ್ನೇಹಿತರನ್ನು ಸಂಪಾದಿಸಬೇಕು
ಗೆಳೆತನ ದೈವದತ್ತ ಆದರೆ ಆಯ್ಕೆಯ ಸ್ವಾತಂತ್ರ್ಯ ನಮ್ಮ ಕೈಯ್ಯಲ್ಲಿದೆ..ಹೀಗಾಗಿ ಒಳ್ಳೆಯವರನ್ನೇ ಗೆಳೆತನ ಮಾಡಬೇಕು. ಸ್ವಲ್ಪದಿನಗಳ ನಂತರಅವ ಹುಟ್ಟೂರಿಗೆ ಹೋದ..ಹಳೆಯ ಗೆಳೆಯರು ಸಿಕ್ಕರು. ಯಾವುದೋ ಬಾರಿನಲ್ಲಿಸಮಾರಾಧನೆಯ ನಡುವೆ ನಗೆ ಹಗೆ ಮಾತು ಹೀಗೆ ಅವ್ಯಾಹತ..ಹೊತ್ತು ಹನ್ನೊಂದಾಗಿತ್ತು.ಅವನ ಹೆಂಡತಿ ಫೋನ ಮಾಡಿದ್ಲು..ಇವನ ಫೋನ್ ನಿಂದ ತೇಲಿಬಂದ ಕೇಕೆ, ನಗೆಯ ದನಿಮಗಳ ಕಿವಿಗೂ ತಲುಪಿತು. ಅಪ್ಪನ ಉನ್ಮತ್ತತೆ ಅವನ ಗೆಳೆಯರ ತೊದಲುವಿಕೆ ಮಗಳಿಗೆಹೊಸದನ್ನು ತೋರಿಸಿತು. ಅವಳು ಅಂದ್ಲು "ಅಪ್ಪ ನನಗೆ ಮಾತ್ರ ಒಳ್ಳೆಯ ಗೆಳೆತನದ ಬಗ್ಗೆ ಹೇಳ್ದ..ಆದ್ರೆ ತಾನು...?????????""
2)
ಆ ದೊಡ್ಡ ಮನಿ ಮಂತ್ರಿಗಳದು..ಅವರವತ್ತು ಮಾಡಬೇಕಾದ ಭಾಷಣ ಸೆಕ್ರೆಟರಿ ಓದಿ
ಹೇಳತಿದ್ದ.. ಮ್ಯಾಲಿನರೂಮಿನ್ಯಾಗ ಮಗಳು, ಬಾಜೂ ರೂಮಿನ್ಯಾಗ ಅವ್ರ ಹೆಂಡತಿ ಮಲಗಿದ್ರು
ಗಡಿಯಾರ ಎಂಟ ತೋರಸತಿತ್ತು. ಆಳಮನ್ಸ ನಿಂಗ್ಯಾ ಅವ್ರ ಭರ್ಜರಿನಾಯಿಗೆ ವಾಕಿಂಗ್ ಮಾಡ್ಸಿ
ಕರಕೊಂಡು ಬಂದು ಉಣ್ಣಾಕಿಟ್ಟ. ಅವ್ನ ಹೆಂಡತಿ ನಿಂಗಿ ಮಂತ್ರಿಗೊಳಮನಿ ಅಂಗಳ ತೊಳದು ರಂಗೋಲಿ
ಹಾಕತಿದ್ಲು ಆರ ತತ್ತಿಯಿಂದ ಮಾಡಿದ ಅಮಲೇಟ್ ನಾಯಿ ಅಡರಾಯ್ಸಿ ತಿನ್ನೂದನ್ನ
ನೋಡತಿದ್ದ ನಿಂಗ್ಯಾ ಜೊಲ್ಲ ಬಿಟಗೋತ...ಮಂತ್ರಿ ಹೆಂಡತಿ ಎದ್ದಾಕಿ ಗ್ಯಾಲರಿಯೊಳಗ ನಿಂತ್ಲು..
ರಂಗೋಲಿ ನಗತಿತ್ತು. ನಿಂಗ್ಯಾನ ಜೊಲ್ಲು ಒಣಗಿತ್ತು. ಸೆಕ್ರೆಟರಿ ಓದಿ ಹೇಳತಿದ್ದ..
"ದೇಶ ಉದ್ಧಾರ ಆಗೂದು ಬಡವ್ರ ಹೊಟ್ಟಿ ತುಂಬಿದಾಗ.." ನಿನ್ನೆ ಉಳದ ತಂಗಳ ತನಗೂ, ಗಂಡಗೂ
ತಗೊಂಡು ನಿಂಗಿ ಬಂದ್ಲು...ನಾಯಿ ಹಸವು ಆರಿರಲಿಲ್ಲ..ಕುಂಯ್ ಗುಡ್ತು.. ಭಾಷಣ ಕೇಳಿದ ಮಂತ್ರಿಗಳು
ಆಕಳಿಸತಿದ್ರು....

ದೇಸಾಯರ,
ReplyDeleteಅಂಗೈಯಲ್ಲೇ ಅರಮನೆ ತೋರಸ್ತಿದ್ದೀರಿ. ‘ಶಭಾಶ್!’ ಅನ್ನಲೇ ಬೇಕು.
second one is the BEST.....
ReplyDeletetumbaa chennaagide sir.....