Thursday, March 7, 2013

ಚಪ್ಪಾಳೆಗಳ ಹಿಂದಡಗಿದೆ ನಿಟ್ಟುಸಿರು...!!




ಹೋದವಾರ ನಮ್ಮ ನಡುವಿನ ಹಿರಿಯರಿಬ್ಬರ ನಡುವಿನ ವಾದ ಈ ಸಾಮಾಜಿಕತಾಣಗಳ
ಚರ್ಚೆಯ ವಿಷಯವಾಗಿತ್ತು. ನಮ್ಮ ಕನ್ನಡದ "ನೇರ,ದಿಟ್ಟ,ನಿರಂತರ" ಚಾನೆಲ್ ಈ
ವಿವಾದದಲ್ಲಿ ಮೂಗುತೋರಿಸಲು ಪ್ರಯತ್ನಿಸಿತು. ವಿವಾದ ನಾಗಮಂಡಲ ನಾಟಕದಲ್ಲಿ
ಅಳವಡಿಸಿಕೊಳ್ಳಲಾದ "ಮಾಯಾದ ಮನದ ಭಾರ..."ಹಾಡಿನ ಕುರಿತಾದದ್ದು. ಈ ಹಾಡು
ಹಿಂದೆ ಶಂಕರ್ ನಾಗ್ ಇದೇ ನಾಗಮಂಡಲ ನಾಟಕ ಮಾಡುವಾಗ ಶ್ರೀ ಗೋಪಾಲ ವಾಜಪೇಯಿ
ಅವರ ಕಡೆ ಬರೆಸಿದ್ದು ..ಆ ಹಾಡಿಗೆ ಸಂಗೀತ ಅಶ್ವಥ ನೀಡಿದ್ರು..ಅದು ರಂಗಗೀತೆ..ಆ ನಾಟಕ
ಬರೆದವರು ಗಿರೀಶ್ ಕಾರ್ನಾಡ್ . ಮನೋಹರ ಗ್ರಂಥಮಾಲೆಯವರು ಆ ನಾಟಕ ಪುಸ್ತಕ ರೂಪದಲ್ಲಿ
ಪ್ರಕಟಿಸಿದ್ರು..ಈ ಗೀತೆ ಆ ನಾಟಕದ (ಪುಸ್ತಕ) ದಲ್ಲಿ ಇತ್ತು. ಆದರೆ ಗೀತರಚನೆಕಾರರಾಗಿ ವಾಜಪೇಯಿಯವರ
ಹೆಸರಿರಲಿಲ್ಲ..ಈ ಬಗ್ಗೆ ವಾಜಪೇಯಿಯವರು ಕಾರ್ನಾಡ್ ಜೊತೆ ನಡೆಸಿದ ಪತ್ರವ್ಯವಹಾರ ಅದಕ್ಕೆ ಅವರು ನೀಡಿದ
ಉತ್ತರ..ಎಲ್ಲ ವಿವರ ನಾ ಇಲ್ಲಿ ಪುನರಾವರ್ತಿಸಲಾರೆ..

ಮೇಲೆ ಹೇಳಿದ ಚಾನೆಲ್ ಅಂದು ಸಂದೀಪ್ ಎನ್ನುವ ಬ್ಲಾಗರ್ ಜೊತೆಗೆ ಲಹರಿ ವೇಲು ಅವರನ್ನು ಕರೆಸಿದ್ರು
ಅದು ಚರ್ಚೆನೇ ಅಲ್ಲ ಅನ್ನುವ ತೀರ ಕೆಳಮಟ್ಟದಲ್ಲಿ ಆ ಕಾರ್ಯಕ್ರಮ ಪ್ರಸಾರ ಆಯಿತು.ಈ ಕಾಪಿರೈಟ ಕಾಯಿದೆ
ನಮ್ಮ ಸಿನೇಮಾರಂಗದಲ್ಲಿ ಬರದೇ ಇದ್ದುದರ ಕೆಟ್ಟ ಪರಿಣಾಮಗಳ ಬಗ್ಗೆ ವೇಲು ಹೇಳುತ್ತಿದ್ದರು,ನಾವೆಲ್ಲ ಬಹಳ
ಮೆಚ್ಚಿದ ಹಾಡು "ದೇವರು ಹೊಸೆದ ಪ್ರೇಮದ ದಾರ..." ಅನ್ನೋ ಹಾಡು ಚಿತ್ರದ ಟೈಟಲ್ ಪ್ರಕಾರ
ಡಾ.ಬಾಲಮುರುಳಿಕೃಷ್ಣ ಹಾಡಿದ್ದು ಅಂತಿದೆ..ಹಿಂದೇಯೆ ಈ ಬಗ್ಗೆ ವಿವಾದ ಇತ್ತು ಆ ಹಾಡು ಹಾಡಿದ್ದು ವೆಂಕಟ್ರಾಜ್
ಅನ್ನುವವರು ..ಪುಣ್ಯಾತ್ಮನ ದನಿ ಬಾಲಮುರಳಿಯನ್ನೇ ಹೋಲುತ್ತದೆ..,ಹೀಗಾಗಿ ಅವರು ಆ ಸಂಗೀತ ನೀಡಿದ
ಹಂಸಲೇಖ ಮತ್ತು ನಿರ್ಮಾಪಕ ರಾಜೇಂದ್ರಸಿಂಗ್ ಬಾಬು ಕಣ್ಣಿಗೆ ಬಿದ್ರು ಲೋಕಲ್ ಪ್ರತಿಭೆಯನ್ನು ಬಳಸಿ ಹಾಡು
ರಿಕಾರ್ಡ ಆತು..ಆದ್ರೆ ಈ ಹಾಡಿಗೆ ಆ ವೆಂಕಟ್ರಾಜ್ ಮಾಲೀಕತ್ವ ಇಲ್ಲ..ಆ ಹಾಡು ಹಿಟ್ ಆತು ರಾಷ್ಟ್ರಪ್ರಶಸ್ತಿ ಗಳಿಸ್ತು
ಪಡೆದವರು ಬಾಲಮುರುಳಿ. ವೆಂಕಟ್ರಾಜ್ ಅವರಿಗೆ ಹೇಗಾಗಿರಬೇಡ...ಅವರೂ ಅಂದು ಲೈನ್ ಮೇಲೆ ಬಂದ್ರು
ಈ ಅನ್ಯಾಯ ನಿಜ ಅಂತ ಹೇಳಿದ್ರು ಹಾಗೆಯೇ ಮಧ್ವಾಚಾರ್ಯ ಚಿತ್ರದ "ವಂದೇ ವಂದ್ಯಂ ಸದಾನಂದಂ.." ಅನ್ನೋ ಹಾಡು
ಸಹ ಇದೇ ರೀತಿ ಅನ್ಯಾಯ ಆಗಿದೆ ಅಂತ ಗೋಳಾಡಿದ್ರು...ಲಹರಿ ವೇಲು ವಿವಾದಕ್ಕೆ ಕಮಿಟ್ ಆಗಲಿಲ್ಲ ಬದಲು
ಈ ತರಹದ ವ್ಯವಹಾರ ಅಂದ್ರೆ ಬಸಿರು ಬೇರೆಯವರದ್ದು ಹೆಸರು ತನ್ನದು ಎಂಬುದು ನಮ್ಮ ಚಿತ್ರರಂಗದಲ್ಲಿ ನಡೆದುಕೊಂಡು
ಬರುತ್ತಿರುವ ಸಂಗತಿ ಇದು ಎಲ್ಲರಿಗೂ ಗೊತ್ತಿದೆ..ದೊಡ್ಡ ದೊಡ್ಡ ಹೆಸರುಗಳು..ಜನಪ್ರಿಯ ಹಾಡುಗಳ ಹಿಂದೆ ಇದೇ ತರಹದ
ಅಭಿಜಾತ ರಹಸ್ಯಗಳಿವೆ..ಹಾಡು ತೋರಿಸಲು ಬಂದು ಆ ನಿರ್ದೇಶಕ ನೋಡಿ ತಿಳಿಸುವೆ ಎಂಬ ಮಾತು ನಂಬಿಹೋದವ
ಮುಂದಿನ ಆ ನಿರ್ದೇಶಕನ ಸಿನೆಮಾದಲ್ಲಿ ತಾನು ಬರೆದ ಹಾಡು ಬೇರೆಯವರ ಹೆಸರಲ್ಲಿ ಇದ್ದುದನ್ನು ನೋಡಿ ಇದು ಭಾಗ್ಯ
ಅಂದುಕೊಂಡು ಸುಮ್ಮನಿರೋದು ಇದು ಪಾಲಿಸಿ. ವೇಲು ಅಂಥ ನುರಿತವರು ಅನುಭವಸ್ಥರು ಹೀಗೆ ಹೇಳುತ್ತಾರೆ ಅಂದ್ರೆ
ಈ ವಾದದಲ್ಲಿ ಹುರುಳಿಲ್ಲದೇ ಇಲ್ಲ. ಕಾಪಿರೈಟ್ ಕಾಯಿದೆಯ ಬಲಪಡಿಸುವಿಕೆ ಒಂದೇ ಇದಕ್ಕೆ ಪರಿಹಾರ ಅಂತ ಅವರಂದ್ರು.





ಸ್ವಲ್ಪ ವಿಚಾರಮಾಡಿದರೆ ನಾವು ಇದುವರೆಗೂ ಮೆಚ್ಚಿದ ಆಸ್ವಾದಿಸಿದ ಕನ್ನಡ ಸಿನೇಮಾಗಳ ಅದೂ ಇತ್ತಿತ್ತ ಬಂದ
ಹಾಡುಗಳ ಮೂಲ ಗಾಬರಿಗೊಳಿಸುತ್ತದೆ.ಒಂದರೆಕ್ಷಣ ಕಣ್ಣುಮುಚಿದರೆ ನಾವು ಹೊಡೆಯುವ ಚಪ್ಪಾಳೆಯ ಗತ್ತಿನಲ್ಲಿ
ಯಾರೋ ಅಮಾಯಕ,ಅನಾಮಿಕನ ನಿಟ್ಟುಸಿರು ಇದೆ..ಎಂಬ ಭಾಸ. ಚಪ್ಪಾಳೆಯ ಗದ್ದಲದಲ್ಲಿ ಆ ನಿಟ್ಟುಸಿರಿನ ನೋವು
ಅಡಗಿದೆ. ಹಾಗಾದ್ರೆ ಇಲ್ಲಿ ಬರಿ ಕತ್ತಲೆ ಇದೆಯೇ ಹೃದಯವಂತಿಕೆ ಇಲ್ಲವೇ ...






ಇಲ್ಲ. ಇಲ್ಲಿ ಒಳ್ಳೆಯದೂ ಇದೆ. ೧೯೭೫ರಲ್ಲಿ ಅಭಿಮಾನ್ ಎಂಬ ಹಿಂದಿ ಚಿತ್ರ.ದಾದಾ ಬರ್ಮನ್ ಟ್ಯೂನ್ ಗೆ ಮಜರೂಹ
ಹಾಡು ಬರೆದಿದ್ರು. ಮುಕೇಶ್ ಮತ್ತು ಲತಾ ಆ ಯುಗಳಗೀತೆ ಹಾಡಬೇಕು..ಮುಕೇಶ್ ಎಲ್ಲೋ ಬಿಸಿಯಗಿದ್ತು..
ಲತಾ ಬಂದಿದ್ರು..ಮುಕೇಶ್ ದನಿಗೆ ಹೋಲುವ ಮನಹರ್ ಉಧಾಸ್ ಎನ್ನೋ ಯುವಕನ ಕೈಲಿ ಟ್ರ್ಯಾಕ್ ಹಾಡಿಸಿ ನಂತ್ರ
ಮುಕೇಶ್ ದನಿ ಕೂಡಿಸೋದು ಅಂತ ತೀರ್ಮಾನ ಆತು. ಸರಿ ಲತಾನ ಜೊತೆ ಹಾಡುವ ಅವಕಾಶ ಒಲಿದು ಬಂದಿತ್ತು
ಮನಹರ್ ಉಧಾಸ್ ಹಾಡಿದ್ರು. ಎಲ್ಲ ಮುಗೀತು. ಮುಕೇಶ್ ಗೆ ಆ ಟ್ರ್ಯಾಕ್ ಕೇಳಿಸಲಾತು. ಮುಕೇಶ್ ಅಂದಿದ್ದು ಒಂದೇ
ಮಾತು ಈ ಹಾಡಿಗೆ ಆ ಯುವಗಾಯಕ ನ್ಯಾಯಒದಗಿಸಿದ್ದಾನೆ ಅವನ ದನಿಯಲ್ಲಿಯೇ ಈ ಹಾಡು ಇರಲಿ..ನನಗಿಂತಲೂ
ಅವ ಚೆನ್ನಾಗಿ ಹಾಡಿದ್ದಾನೆ ಅಂತ. ಒಂದು ಸುವರ್ಣಿಮ ಗಳಿಗೆ ಅದು.ಮಹಾನ್ ಹಾಡುಗಾರನಲ್ಲಿ ಇನ್ನೂ ಮಾನವತೆ ಇತ್ತು.

ಈ ಲೇಖನ ಮುಗಿಸಲಿರುವೆ..ಆದ್ರೆ ಅಮಾಯಕರ ಅನಾಮಿಕರ ಬವಣೆ ಮುಗಿಯುವುದೇ..???

4 comments:

  1. ಮೂಲ ಪುರುಷನಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು. ಹೆಸರು ಮತ್ತು ಸಂಭಾವನೆ ಅವರಿಗೇ ಸಲ್ಲಬೇಕು.

    ಗೋಪಾಲ ವಾಜಪೇಯಿ ಅವರಿಗೆ ಆದ ಅನ್ಯಾಯಕ್ಕೆ ನಮ್ಮ ತೀವ್ರ ವಿರೋಧವಿದೆ. ಇನ್ನಾದರೂ ದೊಡ್ಡವರು ತಿದ್ದಿಕೊಳ್ಳಬೇಕು.

    ಅಂತೆಯೇ ವೆಂಕಟ್ರಾಜೂ ಅವರು ಪ್ರಸಿದ್ಧಿಗೆ ಬರಲಿ, ಎಂದು ಹಾರೈಸುತ್ತೇನೆ.

    ReplyDelete
  2. ಬಹಳ ಖೇದವೆನಿಸುತ್ತದೆ ಇಂಥ ಅನ್ಯಾಯಗಳನ್ನು ಓದಿ. ಮೂಲ ಪ್ರತಿಭೆಗೆ ಅನ್ಯಾಯ ಅಕ್ಷಮ್ಯ ಅಪರಾಧ.

    ReplyDelete
  3. ವಾಜಪೇಯಿಯವರಿಗೆ ಕಾರ್ನಾಡರು ಮಾಡಿರುವ ಅನ್ಯಾಯವು ಅಕ್ಷಮ್ಯವಾಗಿದೆ.ಇನ್ನು ಮುಖೇಶರ ದೊಡ್ಡಸ್ತನವನ್ನು ಓದಿ ಸಂತೋಷವಾಯಿತು. ಸಿನೆಮಾರಂಗದಲ್ಲಿ ಇಂಥವರೂ ಇದ್ದಾರಲ್ಲ ಎಂದು ಅಚ್ಚರಿಯಾಗುತ್ತದೆ.ಮುಖೇಶ ಮತ್ತು ಕಾರ್ನಾಡ ಇವರು ಮನುಷ್ಯನ ಒಳ್ಳೆಯತನ ಮತ್ತು ಸ್ವಾರ್ಥದ ಸಂಕೇತಗಳಾಗಿದ್ದಾರೆ ಎನ್ನಬಹುದು!

    ReplyDelete
  4. ನನ್ನ್ ಬ್ಲಾಗಿನಲ್ಲಿ ಗಾಯಕರ ಹೆಸರು ತಪ್ಪಾಗಿದೆ ಅದು ವೆಂಕಟರಾಘವನ್ ಅಂತ
    ವೆಂಕಟ್ರಾಜ್ ಅಲ್ಲ..ತಿದ್ದಿದ ಶ್ರೀ ಗೋಪಾಲ ವಾಜಪೇಯಿ ಅವರಿಗೆ ಧನ್ಯೋಸ್ಮಿ..

    ReplyDelete