ಈ ಸಲವಾದರೂ ಅವನಲ್ಲಿ ಕರುಣೆ ಬಂದೀತು...
ಕನಸಿನ ಖಾಲಿಜೋಕಾಲಿ ಜೀಕು ತಗೊಂಡು ಬೀಗೀತು..
ಮೇಲೆಕೂತು ಆಡತಾನವ ನಮ್ಮ ಬಾಳ ಪಗಡೆಪಟ್ಟದಲಿ..
ಉರುಳಿಸಿದಾಗ ಕವಡೆ ಈ ಸಲ ಅವ , ಬೆಸ ಬಿದ್ದೀತು..
ತಾಟಿಗೆ ಎರಡು ರೊಟ್ಟಿ..ಕಣ್ತುಂಬ ನಿದ್ರೆ ಛಂದದೊಂದು ಕನಸು
ಮುಚ್ಚಿದ ಅವನ ಖಜಾನಿ ಬಾಗಿಲು ಇನ್ನಾದರೂ ತೆರೆದುಕೊಂಡೀತು..
ಕಣ್ಣಲ್ಲೂ ಅಡರಿತ್ತು ಕಪ್ಪು ..ಕಣ್ಣೀರು ಕಪಾಳದಿ ಹೆಪ್ಪುಗಟ್ಟಿತ್ತು
ಅವನ ಎದೆಯೊಳಗೆಉಕ್ಕಿದ ರಸ ಅಂಗಳವ ತೋಯಿಸೀತು...
ಹೊಸದು ಸಿಗಲಿ ಇಂದಾದರೂ ಮುಗಿಯುವ ಕಲ್ಲು ದೇವರಾಗಲಿ..
ಇಳೆಯ ಕೊಳೆ ನೀಗುವ ಮಳೆ ಈ ಸಲವಾದರೂ ಬಂದೀತು...!!
ತಾಟಿಗೆ ಎರಡು ರೊಟ್ಟಿ..ಕಣ್ತುಂಬ ನಿದ್ರೆ ಛಂದದೊಂದು ಕನಸು
ReplyDeleteಮುಚ್ಚಿದ ಅವನ ಖಜಾನಿ ಬಾಗಿಲು ಇನ್ನಾದರೂ ತೆರೆದುಕೊಂಡೀತು..
ತುಂಬಾ ಚೆನ್ನಾದ ಕವಿತೆ ... ತುಂಬಾ ಇಷ್ಟ ವಾಯ್ತು
ದೇಸಾಯಿಯವರೆ..
ReplyDeleteಓದುತ್ತ ಓದುತ್ತ ಕಣ್ಣಲ್ಲಿ ನೀರಾಡಿತು...
ಊಟಕೊಡುವ ರೈತನ ಕಷ್ಟ...
ಕಣ್ಣೀರು ಒರೆಸಲು ಯಾರೂ ಇಲ್ಲ...
ಎಲ್ಲರೂ ವೇಷಧಾರಿ ಮುಖವಾಡದವರು...
Very Nice
ReplyDeleteಹೇಳಲು ಮಾತುಗಳಿಲ್ಲ...
ReplyDeleteಸುಂದರ ಪದಗಳ ಸಾಲು ಚಿತ್ರಣ...
ReplyDeleteರೈತನ ಬದುಕಿನ ಚಿತ್ರಣ...
ಅವನಿಲ್ಲದೆ ನಮಗೆ ಊಟವಿಲ್ಲ..
ಆದ್ರೆ ಅವನ ನೋವು ಯಾವ ರಾಜಕಾರಣಿಗೂ ಬೇಕಿಲ್ಲ
ತಮ್ಮ ಬೆಲೆ ಬೇಯಿಸುವುದಷ್ಟೇ ಗೊತ್ತು...
ಆದ್ರೆ ಅವರಿಗೆ ತಿಳಿದಿಲ್ಲ..ಆ ಬೇಳೆ ಕೂಡ ರೈತನೇ ಬೆಳಯಬೇಕು..
ದುರಂತ..ದುರಂತ...
ಯಾಕೋ ಸಾರ್,
ReplyDeleteರೈತಾಪಿ ಜನಕ್ಕೆ ಪದೇಪದೇ ಆಘಾತಗಳ ಸರಮಾಲೆ. ಮೊದಲೇ ಕೈಕೊಟ್ಟ ಮುಂಗಾರು ಮಳೆ, ಆಮೇಲೆ ಬಿತ್ತನೆ ಬೀಜವೋ ರಸಗೊಬ್ಬರವೋ ಕೇಳಿದರೆ ಸರ್ಕಾರದಿಂದ ಬಂದೂಕು ಮೊರೆತ ಮತ್ತೆ ಲಾಠಿ ಪ್ರಹಾರ! ಇನ್ನೇನು ತಾನೇ ಮಾಡುತ್ತಾನೆ ನೇಗಿಲ ಯೋಗಿ?
ವ್ಯವಸಾಯ ಅಂದ್ರೆ ನೀನು ಸಾಯ ನಾನು ಸಾಯ ಅಂತ ಆಗೋಗಿದೆ. ಭಗವಂತನಿಗೆ ಭರ್ತಿ ನಿದ್ರೆ!!!
ಓದಲು ಕಷ್ಟವಾಗುತ್ತದೆ ಸರ್. ರೈತನ ಕಷ್ಟಗಳಿಗೆಲ್ಲ ಕೊನೆ ಎಂದೋ..
ReplyDelete