ನೀ ಸುರಿದೆ ತುಂಬ
ನಗುವಿನ ರೊಟ್ಟಿ...!
ನಿನ್ನ ಪುಟ್ಟ ಪಾದ ಎದೆಮೇಲೆ..
ಚೆಲ್ಲಾಟ ವಾಡಿತ್ತು ಬಾಳಿಗೊಂದು
ಹುರುಪು ತಂದಿತ್ತು...
ನನ್ನೆದೆ ತುಂಬ ಈಗ ನೀನು
ನಿನ್ನ ನಗುವಿನ ಮುಂದೆ ದೀಪ ಉರಿದರೇನು..
ಅನುಬಂಧದ ನದಿ ಎಲ್ಲೋ ಹುಟ್ಟಿ ಅಂಗಳ ತೊಯ್ಸಿ
ಸುಖ ಸೂರೆ ಚಿಟ್ಟಿ..ಚಿಟ್ಟಿ..!
ಮೊಗ್ಗು ಹೂವಾಗಿ ನಗುವ ಸೊಬಗು ನಿನ್ನ ಮೊಗದಲ್ಲಿ
ಸದಾ ಇರಲಿ ಧೇನಿಸುತ ನಿಂತಿಹೆ ನಾನಿಲ್ಲಿ..
ನಿನ್ನ ನಾಳೆಗಳಲ್ಲಿ ಗೆಲುವಿರಲಿ ಗೆಲ್ಲುವೆನೆಂಬ ಹುಂಬತನವಿರಲಿ..
ಬರಿ ಸಡಗರ ಸಿಗದು ಬಾಳಿನಲಿ..ಹೂವಿನ ಜೊತೆ ಮುಳ್ಳೂ ಸಿಕ್ಕೀತು...
ಸರಿಯಾದುದ ಎತ್ತಿ ಕೊಳ್ಳಿ..!
ಅಮ್ಮನಂತಹ ಮಗಳಿಗೆ ಒಳ್ಳೆಯ ಸಚಿತ್ರ ಕಾವ್ಯ ಉಡುಗೊರೆ. ಭಾಷಾ ಬಳಕೆಯಲ್ಲೂ ಲಾಲಿತ್ಯವಿದೆ.
ReplyDeletewow.. enta kavana sir... super
ReplyDeletetumba chennagi barediddira, good poem, -- shyam pandurangi, ksfc, gadag
ReplyDeleteದೇಸಾಯ್ ಸರ್,
ReplyDeleteಇಳಕಲ್ ಸೀರೆಯಲ್ಲಿ ನಿಮ್ಮ ಮಗಳು ತುಂಬಾ ಚೆಂದ ಕಾಣುತ್ತಾಳೆ. ಅದಕ್ಕೆ ತುಂಬ ಚೆಂದದ ಕವನದ ಗಿಪ್ಟ್ ಕೊಟ್ಟಿದ್ದೀರಿ..
ಚಂದದ ಕವನ ದೇಸಾಯಿ ಸರ್,
ReplyDeleteದೇಸಾಯರ,
ReplyDeleteಗಣಕಯಂತ್ರ ಕೈಕೊಡ್ತಾ ಇದೆ. ಅದಕ್ಕಾಗಿ ಪ್ರತಿಕ್ರಿಯೆಯಲ್ಲಿ ವಿಳಂಬ. ನಿಮ್ಮ ಮಗಳೇ ಒಂದು ಸುಂದರ ಕಾವ್ಯದಂತೆ ಕಾಣುತ್ತಿದ್ದಾಳೆ. ಅವಳಿಗೆ ಶುಭಾಶಯಗಳು. ಭಾವಪೂರ್ಣ ಕವನಕ್ಕಾಗಿ ನಿಮಗೆ ಅಭಿನಂನಗಳು.
ದೇಸಾಯಿಯವರೆ...
ReplyDeleteನಿಮ್ಮ ಪುಟ್ಟಿಯ ಫೋಟೊಗಳು ತುಂಬಾ ಚೆನ್ನಗಿ ಬಂದಿವೆ..
ಅದಕ್ಕೆ ತಕ್ಕ ನಿಮ್ಮ ಸಾಲುಗಳು...
ಜುಗಲ್ ಬಂದಿ ಸೂಪರ್ರು !!