Saturday, July 9, 2011

ಅವಳು..

ಅವಳು..
-------
ಅವಳು ದೂರಾದ ಸಂಜೆ
ಮಿಂಚಿನ ತಾಳಕ್ಕೆ ಹೆದರಿದ ಮೋಡ
ಅಳುತ್ತಿತ್ತು..

ಅವನಿಯ ಮೈ ತುಂಬ ಶಿಶಿರ ಹೊದಿಸಿದ್ದ
ತರಗೆಲೆಗಳ ಚಾದರ..
ಅವಳು ನಡೆದು ಹೋದಾಗ ಎಲೆಗಳ ಸಂಗ್
ನನ್ನ ಮನವೂ ಚೀತ್ಕರಿಸಿತ್ತು
ಎಲೆಗಳ ನರಳುವಿಕೆಯಲ್ಲಿ ನನ್ನ
ಆರ್ತನಾದ ಅವಳಿಗೆ ಕೇಳಲೇ ಇಲ್ಲ


ಹಗಲು ಅಂಗಳಕ್ಕಿಳಿದು ಸುಡುತ್ತಿತ್ತು
ಮಲಗಿದ್ದಳವಳು ನಿಶ್ಚಲವಾಗಿ..
ಸುಟ್ಟಾಗ ಅವಳ ಉಳಿದಿದ್ದು ಹಿಡಿ ಬೂದಿ..
ತುಂಗೆಯಲಿ ತೇಲಿಬಿಟ್ಟು
ಆಪೋಷನ ತಗೊಂಡೆ ನೀರು ಉಪ್ಪಾಗಿತ್ತು
ಬೆರೆತಿದ್ದ ಕಣ್ಣೀರು ನನ್ನದೋ ಅವಳದೋ
ತಿಳಿಯಲೇ ಇಲ್ಲ..

ವಾಡೆಯ ತೊಲೆಗೆ ತೂಗುಬಿಟ್ಟ
ಕಂದೀಲ ವದು
ನಿರರ್ಥಕ ಭಾವಗೀತೆ ಹೇಳಿತು..

೧೦/೦೭---- ೧೫ ಮಳೆಗಾಲ ಕಳೆದಿವೆ ನನ್ನ ಅವ್ವ ತೀರಿಹೋಗಿ.ಅವಳಿಗಾಗಿ ಬರೆದ ಸಾಲುಗಳಿವು..

9 comments:

  1. ಉಮೇಶ್ ಸರ್......
    "ಆಪೋಷನ ತಗೊಂಡೆ ನೀರು ಉಪ್ಪಾಗಿತ್ತು
    ಬೆರೆತಿದ್ದ ಕಣ್ಣೀರು ನನ್ನದೋ ಅವಳದೋ
    ತಿಳಿಯಲೇ ಇಲ್ಲ.."

    ReplyDelete
  2. ಮನುಷ್ಯ ಸಹಜ ಭಾವನೆಗಳ ದೊಡ್ಡ ಅಲೆಗಳನ್ನು ನಿಮ್ಮ ಕವನದಲ್ಲಿ ಕಂಡೆ. ತಾಯಿ ಎಲ್ಲರಿಗೂ ಮಮತಾಮಯಿ. ನಮ್ಮ ಹುಟ್ಟಿನಿಂದ ನಮ್ಮ ಸಾವಿನವರೆಗೂ ನಾವು ಬಯಸುವುದು ಅವ್ವ ಇದ್ದರೆ ಬಹಳ ಲಾಯಕ್ಕಾಗಿರ್ತದ ಅಂತ. ನಮ್ಮ ಬೆಳವಣಿಗೆಯ ಜೊತೆಜೊತೆಗೇ ಅವ್ವ ಮುದುಕಾಗುತ್ತಾ ನಡೆದರೂ ನಮಗೆ ಹಾಗನ್ನಿಸುವುದಿಲ್ಲ. ಅವಳು ಮಾಡುವ ಅಡುಗೆಯನ್ನೇ ಮನಸ್ಸು ಬಯಸುತ್ತದೆ. ಎಷ್ಟೆಂದರೂ ಕರುಳು ಬಳ್ಳಿಯ ಸಂಬಧವಲ್ಲವೇ? ಕಣ್ಣುಗಳು ತೇವಗೊಂಡವು, ಮನಸು ತುಸು ಭಾರವಾಯಿತು. ಸ್ವರ್ಗದಲ್ಲಿರುವ ನಿಮ್ಮವಂಗೆ ನನ್ನ ನಮನಗಳು,ನಿಮಗೆ ಧನ್ಯವಾದಗಳು.

    ReplyDelete
  3. Emotion compressed into a few lines.

    ReplyDelete
  4. bhaavuka saalugaLu sir... very nice

    ReplyDelete
  5. ಅವರು ಎದ್ದು ಹೊರ ನಡೆದ ಮೇಲೆ ನೆನಪುಗಳಲ್ಲಿ ಮಾತ್ರ ಉಳಿದು ಹೋಗ್ತಾರೆ. ಒಂದಿಷ್ಟು ಮಧುರ, ಮತ್ತೊಂದಿಷ್ಟು ಹೊರಟೇ ಹೋದರಲ್ಲಾ ಅನ್ನುವ ಸಂಕಟ. very touching.

    ReplyDelete
  6. ನನ್ನ ಅವ್ವನ ನೆನಪಾಗಿ ಕಣ್ಣಾಲಿ ತುಂಬಿ ಬರಿಸಿದ ಆರ್ದ್ರ ಭಾವಭರಿತ ಕವನ

    ReplyDelete
  7. ಭಾವುಕ ಸಾಲುಗಳು ಸರ್

    ReplyDelete