ಓಸಾಮಾ ಸಾವಿನ ಬಗ್ಗೆ ಈಗಾಗಲೇ ಸುದ್ದಿ ಚರ್ವಿತಚರವಣ ಆಗಿ ಹರಿದಾಡುತ್ತಿದೆ. ನಾ ಮತ್ತೆ ಅದರ ಬಗ್ಗೆ
ಕೊರೆಯಲಾರೆ. ಸುಮಾರು ಅದೇ ವೇಳೆಯಲ್ಲಿ ಈ ಭುವಿಯಿಂದ ತಾರೆಯೊಂದು ಕಳಚಿಕೊಂಡಿತು. ಕೊಲ್ಹಾಪೂರದ
ಖಾಸಗಿ ದವಾಖಾನೆಯಲ್ಲಿ ಮರಾಠಿ ಸಾಹಿತ್ಯ ಇತಿಹಾಸದ ಪ್ರಮುಖ ಕೊಂಡಿ ಕಳಚಿಕೊಂಡಿತು. ಅದು ಜಗದೀಶ್
ಖೇಬುಡಕರ್ ರೂಪದಲ್ಲಿ. ಇತಿಹಾಸಕಾರರು ದಾಖಲಿಸುವಾಗ ಮರಾಠಿ ಚಿತ್ರಗೀತೆಗಳ ಖದರಿಗೆ ನೆರವಾದವರ ಬಗ್ಗೆ
ಹೇಳುತ್ತಾರೆ. ಅಲ್ಲಿ ಜಗದೀಶ್ ಖೇಬುಡಕರ್ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಸುಮಾರು ೫೦ ವರ್ಷ ಅವರು
ಮರಾಠಿ ಗೀತೆಗಳ ಬರೆದರು. ಸುಮಾರು ೨೫೦೦ ಚಿತ್ರಗೀತೆ,೩೫೦೦ ಕವಿತೆಹಾಗೂ ೨೫ಕ್ಕೂ ಹೆಚ್ಚು ಕತೆ ನಾಟಕ
ಹೀಗೆ ಅವರ ಪ್ರತಿಭೆ ಟಿಸಿಲೊಡೆದಿತ್ತು.
೧೯೩೨ ರಲ್ಲಿ ಜನಿಸಿದ ಜಗದೀಶ್ ಲೇಖನಿಯೆಡೆ ಹೊರಳಿದ್ದು ವಿಚಿತ್ರ ಸನ್ನಿವೇಶದಲ್ಲಿ. ಅದು ೧೯೪೮ ರ ಕಾಲ. ದೇಶ
ಮಹಾತ್ಮನ ಸಾವು ಅದು ತಂದ ನೋವಿನಲ್ಲಿ ಬೇಯುತ್ತಿತ್ತು. ಕೆಲ ದುರುಳರು ಆ ಬೆಂಕಿಯಲ್ಲಿ ತಮ್ಮ ಬೇಳೆಬೇಯಿಸಿಕೊ
ಳ್ಳುತ್ತಿದ್ದರು.ಮಹಾತ್ಮನನ್ನು ಕೊಂದವ ಗೋಡ್ಸೆ--ಅವ ಮರಾಠಿಗ--ಹೀಗಾಗಿ ಮರಾಠಿಗರು ಕಿಚ್ಚಿಗೆ ಬಲಿಯಾಗಬೇಕಾಗಿತ್ತು.
ಜಗದೀಶ್ ಖೇಬುಡಕರ್ ವಾಸಿಸುತ್ತಿದ್ದ ಮನೆಗೆ ಬೆಂಕಿ ಹಾಕಲಾಯಿತು. ತನ್ನ ಪೂರ್ವಜರ ಮನೆ ಹೀಗೆ ಮತಾಂಧರ ಕಿಚ್ಚಿಗೆ
ಬಲಿಯಾಗಿದ್ದುದು ನೋಡಿ ಅವರಲ್ಲಿ ರೋಷ ತಂದಿತ್ತು.ಕಲ್ಲು,ಪಿಸ್ತೂಲು ಹಿಡಿಯದೇ ಲೇಖನಿ ಕೈಗೆತ್ತಿಕೊಂಡ ಜಗದೀಶ್ ತನ್ನ
ಒಡಲ ದನಿಗೆ ಅಕ್ಷರದ ರೂಪ ಕೊಟ್ಟರು.ಆ ಕವಿತೆ ಅದು ಅವರ ಮೊದಲ ಕವಿತೆ . ಆಕಾಶವಾಣಿಯಲ್ಲಿಯೂ ಅದು ಪ್ರಸಾರವಾಯಿತು.
ಮರಾಠಿ ಚಿತ್ರಗೀತೆಗಳಲ್ಲಿ ಅವರದು ಅಪರಿಮಿತ ಕೆಲಸ. ಅವರು ಬರೆಯದೇ ಇರದ ಹಾಡೇ ಇರಲಾರದು. ಅದು ಲಾವಣಿಯಾಗಿರಲಿ, ಭಕ್ತಿಭಾವದ್ದಾಗಿರಲಿ,ವಿರಹ ಅಥವಾ ನೋವಿನ ಗೀತೆಯಾಗಿರಲಿ ಎಲ್ಲದರಲ್ಲೂ ಅವರ ಛಾಪು ಕಾಣುತ್ತಿತ್ತು.
ಅವರ ಪ್ರತಿಸ್ಫರ್ಧಿ ದೈತ್ಯ ಪ್ರತಿಭೆಯ ಗದಿಮಾ. ಆ ಪ್ರತಿಭೆಯ ಮುಂದೆ ಹೆಣಗುವುದು ಸುಲಭವಾಗಿರಲಿಲ್ಲ. ಆದರೆ
ಜಗದೀಶ್ ಅದನ್ನು ಆಹ್ವಾನವಾಗಿ ತಗೊಂಡರು. ಈಸಿದರು ಗೆದ್ದರು ಕೂಡ. ಅವರು ಬರೆದ "ಸಾಧಿಮಾಣಸ.." ಚಿತ್ರದ ಹಾಡಿನ
ಸಾಲು ಹೀಗಿದೆ...
"ಸುಖ ಥೋಡ ದುಃಖ ಭಾರಿ ದುನಿಯಾ ಹೀ ಭಲಿಬುರಿ
ಘಾವ ಬಸಲ್ ಘಾವಾವರಿ,ಸೋಸಾಯಲಾ ಝುಂಝಾಯಲಾ
ಅಂಗಿ ಬಳ್ ಏವೂ ದೇ.."
ಎಷ್ಟು ಸರಳ ಶಬ್ದಗಳು..ನೇರವಾಗಿ ದೇವರ ಎದೆ ಕಲಕುವ ಹಾಗೆ.ಈ ಹಾಡು ಲತಾ ಹಾಡಿದ್ದು ಅವಳೇ ಸಂಗೀತಕೊಟ್ಟಿದ್ದು
ಈ ಚಿತ್ರಕ್ಕೆ."ಆನಂದ ಘನ್" ಎಂಬ ಹೆಸರಿನಿಂದ.
ಲಾವಣಿ ಅಥವಾ ತಮಾಶಾ ಹಾಡು ಮರಾಠಿ ಚಿತ್ರಗೀತೆಗಳ ಸಂಜೀವಿನಿ. ಶೃಂಗಾರ ಭರಿತ ನೃತ್ಯ ತಕ್ಕಂತೆ ಹಾಡು ಇರಲೇ
ಬೇಕಾದದ್ದು ಗರಜು. ಖೇಬುಡಕರ್ ಅದರಲ್ಲೂ ಎತ್ತಿದ ಕೈ. ಅನೇಕ ಲಾವಣಿ ಹಾಡು ಅವರು ಬರೆದಿದ್ದರು..
"ಕಸ್ ಪಾಟೀಲ್ ಬರ ಆಹೇ ಕಾ ಕಾಲ್ ಕಾಯ್ ಐಕಲ ಖರ್ ಆಹೇ ಕಾ.."
"ಕುಣ್ಯಾ ಗಾವಾಚ್ ಆಲಾ ಪಾಖರೂ ಬಸಲಾಯ್ ಡೌಲಾತ್ ಕುದಕುದು ಹಸತೊಯ್ ಗಾಲಾತ್.."
ಲಾವಣಿ ಅಥವಾ ತಮಾಶಾದ ಮೇಲೆಯೇ ಕೇಂದ್ರಿಕೃತವಾಗಿತ್ತು ಶಾಂತಾರಾಮ್ ರ "ಪಿಂಜರಾ" ಚಿತ್ರ.
ಅಲ್ಲಿ ಹಾಡು ಕುಣಿತ ಚಿತ್ರದ ಜೀವಾಳ. ಈ ನಿಟ್ಟಿನಲ್ಲಿ ಶಾಂತಾರಾಮ್ ಆರಿಸಿದ್ದು ಜಗದೀಶ್ ಅವರನ್ನು.
ಪ್ರತಿಕೆಲಸದಲ್ಲೂ ಪರಫೆಕ್ಷನ್ ಬಯಸುತ್ತಿದ್ದ ಶಾಂತಾರಾಮ್ ಜೊತೆ ಕೆಲಸ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ.
ಆ ಚಿತ್ರದಲ್ಲಿ ಹತ್ತು ಹಾಡುಗಳಿದ್ದವು.ಜಗದೀಶ್ ಖೇಬುಡಕರ್ ಬರೆದುಕೊಟ್ಟಿದ್ದು ೧೧೦ ಹಾಡುಗಳನ್ನು....!
ಅದರಲ್ಲಿ ಅತ್ಯುತ್ತಮವಾದದ್ದು ಆರಿಸಲಯಿತು.ಪಿಂಜರಾ ಚಿತ್ರದ ಹಾಡು ಜನರ ನಾಲಿಗೆ ಮೇಲೆ ನೆಲೆ ನಿಂತವು.
ಹೀಗೆ ಜಗದೀಶ್ ಖೇಬುಡಕರ್ ತಮ್ಮ ಹೆಸರನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿಸಿದ್ದಾರೆ. ಮರಾಠಿಗರ
ಸಾಂಸ್ಕೃತಿಕ ಗರಿಮೆ ಬಗ್ಗೆ ಹೇಳುವುದೇ ಬೇಡ. ಠಾಣೆಯ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಸತ್ಕರಿಸಲಾಯಿತು.
ಸಿನೇಮಾ ಸಾಹಿತಿ ಎಂದು ಅವರನ್ನು ಬ್ರಾಂಡ್ ಮಾಡದೇ. ನಮ್ಮ ಕರ್ನಾಟಕದಲ್ಲೂ ಸಾಹಿತ್ಯ ಸಮ್ಮೇಳನ
ಆಗುತ್ತವೆ ಎಂದಾದರೂ ನಾವು ಹಾಗೆ ಮಾಡಿರುವೆವೆ?
ಕನ್ನಡ ಸಿನೆಮಾಗಳಿಗೂ ಕೂಡ, ನಮ್ಮ ಸಿನೆಮಾ ಸಾಹಿತಿಗಳು ಕೆಲವು ಅತ್ಯುತ್ತಮ ಗೀತೆಗಳನ್ನು ಬರೆದು ಕೊಟ್ಟಿದ್ದಾರೆ. ಆದರೆ ಅವರಾರಿಗೂ ಈ ಮನ್ನಣೆ ಸಿಕ್ಕಿಲ್ಲ!
ReplyDeleteWhy there are some different language lines which i don't understand...i feel since it is ( i hope so )... kannada blog please write anything about kannada or kannada people. i am surprised by the lines in b/w.
ReplyDeleteI didn't even understand heading of blog,which is written in Kannada.
ReplyDeleteI saw all your blogs. all are Hindi headings & hindi related. please write it in that language!!!! with desire or hope entered your blog hoping there'll be something related to kannada. there is nothing.
ReplyDeleteಕಾಕಾ ಅನಿಸಿಕೆಗೆ ಧನ್ಯವಾದಗಳು. ನಾವು ಅಭಿಮಾನಶೂನ್ಯರು
ReplyDeleteಆತ್ಮೀಯ ರಮೇಶ್ ನಿಮ್ಮ ಅನಿಸಿಕೆ ಹೇಳಿದ್ದಕ್ಕೆ ಧನ್ಯವಾದಗಳು. ಇದು ನನ್ನ ಬ್ಲಾಗು. ಇದರಲ್ಲಿ ನನಗೇ ಅನಿಸಿದ್ದು ಬರೆದಿರುವೆ.
ReplyDeleteಇನ್ನು ಕನ್ನಡ ಕನ್ನಡತನ ಅಂತೆಲ್ಲ ಮಾತಾಡುವ ತಾವೇ ಇಂಗ್ಲೀಷಲ್ಲಿ ಬರೆದಿರುವಿರಿ ಇದು ಸರಿಯೇ . ನಿಮ್ಮ ಮಾತಿನಂತೆ
ನಾ ನಡೆದುಕೊಳ್ಳಲಾರೆ.