ಭಾರತರತ್ನ ಭೂಷಿತೆ, ಕೋಗಿಲೆ ಎಂದೇ ಪರಿಗಣಿಸಲ್ಪಡುವ ಲತಾ ಮಂಗೇಶ್ಕರ್ ತನಗೆ ಖುಷಿಕೊಟ್ಟ ಮೂವರು
ಸಂಗೀತನಿರ್ದೇಶಕರ ಹೆಸರು ಹೇಳುತ್ತಾಳೆ. ಮೊದ್ಲಿಗರಾಗಿ ಮದನ್ ಮೋಹನ್ , ಎರಡನೇಯವರಾಗಿ ಸಲೀಲ್ ದಾ, ಮೂರನೇಯವರೇ ಜೈದೇವ್.
ಯುಗಯುಗದಿಂದ ಕ್ವಾಲಿಟಿ ಹಾಗೂ ಕ್ವಾಂಟಿಟಿ ನಡುವೆ ಮೇಲಾಟದ ಹೋರಾಟವಿದೆ. ಅನೇಕ ಜನ ಕ್ವಾಂಟಿಟಿ ಮುಖ್ಯ
ಅಂತ ವಾದಿಸುತ್ತಾರೆ. ಇದೊಂಥರಾ ಗವಾಸ್ಕರ್-ವಿಶ್ವನಾಥ್ ನಡುವಿನ ಹೋಲಿಕೆ. ಮಾಡಿದ ಕೆಲಸದ ಪ್ರಮಾಣ ಸಣ್ಣದಿದ್ದರೂ ಆ ಕೆಲಸ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವಂತೆ ಮಾಡುವುದು ಕಲೆಗಾರನ ಗುರುತು. ಅಂತಹ
ಅಪರೂಪದ ಕಲೆಗಾರರಲ್ಲಿ ಜೈದೇವ್ ಹೆಸರು ಶಾಶ್ವತ. ಆತ ನೀಡಿದ ಗೀತೆಗಳು ನನಗೆ ಪರ್ವತದಿಂದಿಳಿದ ತೊರೆ
ಕಲರವಗುಡುತ್ತ ಹರಿಯುವ ಅನುಭೂತಿ ಕೊಡುತ್ತದೆ. ಒಂದರೆಕ್ಷಣ ಕಣ್ಣುಮುಚ್ಚಿಕೊಂಡು ಹಾಡುಗಳನ್ನು ಗುನುಗುನಿಸಿ.....
" ಯೇ ದಿಲ್ ಔರ್ ಉನಕಿ ನಿಗಾಹೊಂಕೆ ಸಾಯೆ..."
"ಎಕ್ ಮೀಠಿಸಿ ಚುಭನ್ ಠಂಡಿ ಠಂಡಿಸಿ ಅಗನ್..."
"ರಾತ್ ಭಿ ಕುಛ ಭೀಗಿ ಭೀಗಿ ಚಾಂದ್ ಭಿ ಹೈ ಕುಛ ಮದ್ಧಮ್ "
ಲತಾಳ ರೇಶಿಮೆ ಸ್ವರದ ಜೊತೆ ಜೊತೆಗೆ ಸಂಗೀತಗಾರನ ದೈವಿಸ್ಪರ್ಶದ ಅನುಭವವಾಗುತ್ತದೆ.
ಜೈದೇವ್ ನ ಜೀವನ ಚರಿತ್ರೆಯೂ ರೋಚಕ. ೧೯೧೯ ರಲ್ಲಿ ನೈರೋಬಿಯಲ್ಲಿ ಜನನ,೧೯೩೩ ರಲ್ಲಿ ಕುಟುಂಬದೊಡನೆ ಲುಧಿಯಾನಾದಲ್ಲಿ ವಾಸ. ಹದಿನೈದು ವರ್ಷದವನಿದ್ದಾಗ ಮುಂಬೈಗೆ ಓಡಿಹೋದವ ಹಿರೋ ಆಗಲಿಕ್ಕೆ. ಅನೇಕ
ಸಿನೆಮಗಳಲ್ಲಿ ಬಾಲಕಲಾವಿದನಾಗಿ ಅಭಿನಯ. ತಂದೆಗೆ ಹುಷಾರಿಲ್ಲದಾಗ ಮರಳಿ ಊರಿಗೆ ಹೋದವನ ಮೇಲೆ ಸಂಸಾರ ನಡೆಸುವ ಜವಾಬ್ದಾರಿ.ಸಂಗೀತದ ಸೆಳೆತ ಮತ್ತೆ ಮುಂಬೈಗೆ ಪಯಣ.ದಾದಾ ಬರ್ಮನ್ ಗೆ ಸಹಾಯಕನಾಗಿ ಕರಿಯರ್ ಸುರು.
೧೯೬೧ ಸುವರ್ಣಾಕ್ಷರದ ವರ್ಷ. "ಹಮ್ ದೋನೋ"ಗೆ ಬರ್ಮನ್ ದಾ ಸಂಗೀತ ನೀಡುವನಿದ್ದ. ಆದರೆಗೀತಕಾರ ಸಾಹಿರ್ ಜೊತೆ ದಾದಾನಿಗಿದ್ದ ವೈಮನಸ್ಯ ಜೈದೇವ್ ಬಾಗಿಲು ತೆರೆಯಿತು. ಇಡೀ ಜಗತ್ತು ಬೆರಗಾಯಿತು ಆ ಹಾಡುಗಳಿಗೆ.."ಅಲ್ಲಾ ತೇರೋ ನಾಮ್"," ಮೈ ಜಿಂದಗಿ ಕಾ ಸಾಥ ನಿಭಾತಾ.."," ಕಭಿ ಖುದ್ ಪೆ ಕಭಿ ಹಾಲಾತಪೆ..",
"ಅಭಿ ನ ಜಾವೊ ಛೋಡಕರ್.." ಜೈದೇವ್ ನ ಸಂಗೀತ ಮನೆಮಾತಾಯಿತು.
ಅವನ ಸಂಗೀತಯಾನ ಉತ್ತುಂಗಕ್ಕೇರಿದ್ದು ೧೯೬೩ರಲ್ಲಿ. "ಕಿನಾರೆ ಕಿನಾರೆ" ಎಂಬ ಚಿತ್ರದಲ್ಲಿ ತಲತ್,ಮುಕೇಶ್ ಹಾಗೂ
ಮನ್ನಾಡೆ ಹಾಡಿದ ಹಾಡು ಹಿಟ್ ಆದವು. ಅದರಲ್ಲಿ ಮುಕೇಶ್ ಹಾಡಿದ ಗಜಲ್ " ಜಬ್ ಗಮೆ ಇಶ್ಕ್ ಸತಾತಾ ಹೈ ತೊ
ಹಸ್ ಲೇತಾ ಹೂಂ..." ಅವ ಹಾಡಿದ ಅತ್ಯುತ್ತಮ ಹಾಡುಗಳಲ್ಲೊಂದು. ಅದೇ ವರ್ಷ ಸುನಿಲ್ ದತ್ ನ "ಮುಝೆ ಜೀನೇ ದೋ" ಬಂತು. ಅದರಲ್ಲಿ ಆಶಾ ಹಾಡಿದ "ನದಿ ನಾರೆ ನ ಜಾವ್ ಶಾಮ್ ಪೈಯಾ ಪಡೂಂ" . ಈ ಹಾಡಿನಲ್ಲಿ
ಆಶಾಳ ದನಿಯ "ನಖರಾ" ವರ್ಣಿಸಲು ಪದಗಳಿಲ್ಲ.
ಮೊದಲೇ ಹೇಳಿದಂತೆ ಜೈದೇವ್ ಕ್ವಾಲಿಟಿ ಮೇಲೆ ಹೆಚ್ಚು ಒತ್ತು ಕೊಟ್ಟವ. ಜಾನಪದ ಶೈಲಿಯನ್ನು ಸಿನೇಮಾದಹಾಡಿನ ಮಾಧುರ್ಯತೆಗೆ ಆತ ಎರಕ ಹೊಯ್ಯುತ್ತಿದ್ದ. "ದೋ ಬೂಂದ್ ಪಾನಿ" ಚಿತ್ರದ " ಪೀಪಲ್ ಕಿ ಮೋರಿ ಗಾಗರಿ..." ಇದಕ್ಕೊಂದು ಅತ್ಯುತ್ತಮ ಉದಾಹರಣೆ. ರೇಶ್ಮಾಔರ್ ಶೇರಾ ದ ಲತಾಹಾಡಿದ "ತು ಚಂದಾ ಮೈ ಚಾಂದನಿ" ಯಲ್ಲಿ ರಾಜಸ್ಥಾನದ ಮರುಭೂಮಿಯ ನಿನಾದವಿದೆ. ಜೈ ದೇವ್ ಗೆ ಹಟ ಇರಲಿಲ್ಲ.ತನ್ನ ಹಾಡು ಇವರೇ ಹಾಡಬೇಕು ಅಂತ. ಪ್ರಯೋಗಕ್ಕೆ ಆತ ಸದಾ ಸಿದ್ಧನಿದ್ದ. ಎಪ್ಪತ್ತರ ದಶಕದಲ್ಲಿ ಅನೇಕ ಹೊಸಗಾಯಕರ
ಜತೆ ಕೆಲಸ ಮಾಡಿದ. ಅದು ಬಂಗ್ಲಾದೇಶದ ರೂನಾ ಲೈಲಾ ಇರಬಹುದು.ಭುಪಿಂದರ್, ಅನುರಾಧಾ ಪೊಡ್ವಾಲ್, ಹಾಗೂ ಸುರೇಶ್ ವಾಡಕರ್ ಹೀಗೆ ಅವ ಒಂದೇ ತೆರನಾದ ಗೀತೆಗಳಿಗೆ ಒಡ್ಡಿಕೊಂಡಿರಲಿಲ್ಲ.
ಕೆಲವು ಹಾಡು ಹೀಗಿವೆ...
" ಜಿಂದಗಿ ಮೇರೆ ಘರ್ ಆನಾ ಮೇರೆ ಘರ್ ಆನಾ " (ದೂರಿಯಾಂ ಚಿತ್ರ)
"ಜಿಂದಗಿಮೆ ಜಬ್ ತುಮಾಃರೆ ಗಮ್ ನಹಿ ಥ" (ದೂರಿಯಾಂ ಚಿತ್ರ)
" ದೋ ದಿವಾನೆ ಶೆಹರ್ ಮೆ " (ಘರೋಂದಾ ಚಿತ್ರ)
" ತುಮೆಃ ಹೋ ನ ಹೋ ಹಮೇ ತೋ"(ಘರೋಂದಾ ಚಿತ್ರ)
" ಚಾಂದ್ ಅಕೇಲಾ ಜಾಯೇ ಸಖಿರಿ.." (ಆಲಾಪ್ ಚಿತ್ರ)
" ಕೋಯಿ ಗಾತಾ ಮೈ ಸೋ ಜಾತಾ.." (ಆಲಾಪ್ ಚಿತ್ರ)
" ಸೀನೆ ಮೆ ಜಲನ್ ..." ( ಗಮನ್ ಚಿತ್ರ)
ಎಲ್ಲ ಹಾಡುಗಳನ್ನು ಉಲ್ಲೇಖಿಸಲಾರೆ. ಮೂರು ಸಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ.ಭೀಮಸೇನ್ ಜೋಶಿ ಇವರ ಕೈಯ್ಯಲ್ಲಿ
ಅನ್ ಕಹಿ ಚಿತ್ರಕ್ಕೆ ಹಾಡಿದ್ದರು. ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು.
ಜೈದೇವ್ ಮದುವೆಯಾಗಲಿಲ್ಲ. ತನ್ನ ೬೮ ನೇ ವಯಸ್ಸಿನಲ್ಲಿ ಅಗಲಿದ.
ಹಿಂದೆ ಬಿಟ್ಟು ಹೋಗಿದ್ದು ಅನೇಕ ಮಧುರ ಗೀತೆಗಳನ್ನು.

ಉಮೇಶ್ ದೇಸಾಯಿಯವರೆ...
ReplyDeleteಬೆಳಿಗ್ಗೆ ಬೆಳಿಗ್ಗೆ ಮಧುರ ಹಾಡುಗಳ ನೆನಪು ಮಾಡಿ
ದಿನವಿಡಿ ಅವುಗಳನ್ನು ಗುನುಗುವಂತೆ ಮಾಡಿ ಬಿಟ್ಟಿದ್ದೀರಿ...
ನಿಜಕ್ಕೂ ಅವೆಲ್ಲ "ಎವರ್ ಗ್ರೀನ್" ಹಾಡುಗಳು..
ನನಗೆ ಆ ಹಾಡುಗಳ ರಚನೆ, ಸಂಗೀತನೀಡಿದವರ ಹೆಸರುಗಳು ಸರಿಯಾಗಿ ಗೊತ್ತಿಲ್ಲವಾಗಿತ್ತು...
ಇಂದಿನ ದಿನವನ್ನು ಸುಂದರ ಹಾಡುಗಳೊಂದಿಗೆ ಶುರುಮಾಡಿದ್ದಕ್ಕೆ ಜೈ ಹೋ..!
ತುಂಬಾ ತುಂಬಾ ಧನ್ಯವಾದಗಳು... ಉಮೇಶ್ ಜೀ...
ದೇಸಾಯರ,
ReplyDeleteಜಯದೇವರ ಸಂಗೀತ ಅಬ್ಬರವಿಲ್ಲದ ಮಾಧುರ್ಯ ಹೊಂದಿತ್ತು. ಅವರ ಸಂಗೀತದ ಹಾಡುಗಳ ವಿಡಿಯೊ ಕೊಟ್ಟಿದ್ದಕ್ಕಾಗಿ ನಿಮಗೆ ತುಂಬ ಧನ್ಯವಾದಗಳು
ದೇಸಾಯ್ ಸರ್,
ReplyDeleteಹಳೆಯ ಮಧುರ ಗೀತೆಗಳನ್ನು ನೆನಪಿಸಿಕೊಟ್ಟು ನಮಗೆ ಖುಷಿಯನ್ನುಂಟು ಮಾಡಿದ್ದೀರಿ. ಆಗಿನ ಮಾಧುರ್ಯ ಈಗೆಲ್ಲಿ ಬರಬೇಕು.
ದೇಸಾಯ್ ಸರ್;ಹಳೆಯ ಮಾಧುರ್ಯ ಭರಿತ ಗೀತೆಗಳ ಜನ್ಮ ಜಾಲಾಡಿ ಬಿಟ್ಟಿದ್ದೀರಿ.ಅಭಿನಂದನೆಗಳು.
ReplyDeleteದೇಸಾಯಿ ಸರ್,
ReplyDeleteಧನ್ಯವಾದ ಸರ್... ಅಮರ ಗೀತೆಗಳ ನೆನಪು ಮತ್ತು ಅದರ ಹಿಂದಿನ ಮಾತುಗಳನ್ನು ತಿಳಿಸಿದ್ದಕ್ಕೆ.....
WOW. esTu khushiyaaytu gottaa?? Love all the songs you mentioned. also sang a line or two from all the songs. my teenage girls love those songs of yesteryears.
ReplyDeleteThanks for taking me down the memory lane.
:-)
malathi S
do deevaane shaharame nanna ishtada haadu adu bittu bereyaddu nimma listnalliruvante keliddu nenapilla. hindi getakaararu mattu sangeetakaarara bagge nanna jnana ashtakashtte. tamma lekhana nanage hechchina maahiti dorakissi koduttide.
ReplyDeletesitaram