ಇದೊಂಥರಾ ಭಾವ ಸಂಗಮ.ನನ್ನ ತಮ್ಮ ಚಾರುದತ್ತ ದೇಸಾಯಿಗೂ ಈ ಕತೆ ಕವಿತೆ ಬರೆಯುವ ಹುಚ್ಚಿದೆ
ಅವ ಕೆಲಸ ಮಾಡುವ ಬಿಇಎಲ್ ನ ಕನ್ನಡ ಸಂಘದ ಉತ್ಸಾಹಿ ಸದಸ್ಯ . ಈಗಾಗಲೆ ಅನೇಕ ಕತೆ ಕವಿತೆ ಬರೆದಿದ್ದಾನೆ
ಆದರೆ ಪ್ರಕಟಣೆಗೆ ಕಳಿಸಿಕೊಟ್ಟಿಲ್ಲ. ಹೀಗೆ ಅವ ಬರೆದ ಈ ಹಿಂದಿ ಕವಿತೆಯ ಪ್ರತಿ ನನಗೆ ಕಳಿಸಿಕೊಟ್ಟಿದ್ದ. ಓದಿ ನೋಡಿದ
ನಾನು ಅದನ್ನು ಕನ್ನಡದಲ್ಲಿ ಅನುವಾದಿಸಲು ಹರಸಾಹಸ ಪಟ್ಟೆ ವಿಫಲತೆಯಿಂದ ಕಂಗೆಟ್ಟು ಶ್ರೀ ಪರಾಂಜಪೆ ಅವರ
ಮೊರೆ ಹೋದೆ . ಪ್ರತಿಭಾಶಾಲಿ ಪರಾಂಜಪೆ ಅವರು ಸರಾಗವಾಗಿ ಭಾವಾನುವಾದ ಮಾಡಿಕೊಟ್ಟರು.
ಪ್ರಸ್ತುತ ಕವಿತೆಯ ಕೊನೆಯ ಪ್ಯಾರಾ ಮಾತ್ರ ನನ್ನದು ಉಳಿದೆಲ್ಲ ಶ್ರೀ ಪರಾಂಜಪೆ ಅವರದು.
ಈ ಇಬ್ಬರ ಪ್ರತಿಭಾ ಸಂಗಮಕ್ಕೆ ನನ್ನ ಬ್ಲಾಗು ವೇದಿಕೆಯಾಗಿದೆ ಇದು ನನ್ನ ಸೌಭಾಗ್ಯ.
मां
------------
लॊगॊंकॊ इतनाहि पता है के आप हमारी माता हो
मेरे लिये तुम जीवनदाई बस एक मात्र ही देवी हॊ
धन्य हूं मै इस जीवन से तॊ श्रेय तुम्हे ही जाता है
मुझ मे जॊ प्रेम कि धारा वो कल-बल तुम ही से बहति है
ऐसा कुछ-कुछ लगता है पर, तुम इससे अधिक कुछ और ही हॊ..
पद्मिनि,सीता, सावित्रि नहि, मेरे लिये झांसि रानि है वो
पीठ पे हम को बांध के हसते, जीवन से कि थि लढाई वॊ
ऐसा कुछ - कुछ लगता है पर ,तुम इससे अधिक कुछ और हि हॊ
बनी रहि वो नीलकंठ जीवन का विष पी पी कर
भूल के हसदी सारे दुःखों कॊ अपनॊंकॊ हसता देख कर
ऎसा कुछ - कुछ लगता है पर,तुम इससे अधिक कुछ और ही हॊ
यार, दॊस्त,भारत भूमि, चंद्रमा और धरती माता
जब भि इनके प्यार कॊ पाऊं तेरा ही चेहरा याद है आता
ऎसा कुछ-कुछ लगता है पर, तुम इससे अधिक कुछ और ही हॊ
तेरे प्यार पाकर तॊ कॊइ कृष्ण बने या शीवाजी
कमी है मेरे कॊशिश मे, पर प्यार मे तेरा क्मी नहीं
ऎसा कुछ-कुछ लगता है पर, तुम इससे अधिक कुछ और ही हॊ
झॊली मेरी भर आती है अक्षय तॆरा प्यार है
तू तॊ बस देने मे खुश हॊ, क्भी तॊ मेरि बारी है
ऎसा कुछ-कुछ लगता है पर, तुम इससे अधिक कुछ और ही हॊ
अगले जनम मे पॊती बन जाओ, तुझे भि खिलता देख सकूं
तॆरा ही लाड-प्यार तुह्मि कॊ दॆकर, मै दुनिया से चलता बनू
ऎसा कुछ-कुछ लगता है पर, तुम इससे अधिक कुछ और ही हॊ
कवी : चारूदत्त दॆसाई
ಅಮ್ಮ
-------
ಲೋಕದ ಕಣ್ಣಿಗೆ ನೀನು ನನ್ನ ತಾಯಿ
ವಾಸ್ತವದಲ್ಲಿ ನೀನೆನಗೆ ಮಹದಾಯಿ
ನನ್ನೆಲ್ಲ ಶ್ರೇಯ ನಿನ್ನ ಪರಿಶ್ರಮದ ಫಲ
ನನ್ನೊಳಗಿರುವ ಸತ್ವ ನಿನ್ನ ಬದುಕಿನ ತತ್ವ
ಸೀತೆ ಸಾವಿತ್ರಿ ಝಾನ್ಸಿ ರಾಣಿ ಎಲ್ಲ ನೀನೇ
ನನ್ನ ಪಾಲಿಗೆ ಬೇರೊ೦ದು ದೈವವ ಕಾಣೆ
ನೀಲಕ೦ಠನ೦ತೆ ವಿಷವ ಹೀರಿ ಬದುಕಿದ್ದೆ
ದುಃಖದ ನಡುವೆಯೂ ನಗುತ ಸುಖವಿತ್ತೆ
ಭೂತಾಯಿ, ದೇಶ, ಭಾಷೆ ಮತ್ತು ಪ್ರಿಯಮಿತ್ರ
ಕಂಡಾಗಲೆಲ್ಲ ಮನದೆ ಮೂಡುವುದು ನಿನ್ನ ಚಿತ್ರ
ಕೃಷ್ಣ /ಶಿವಾಜಿ ಯ೦ಥ ಮಹಾಮಹಿಮರು
ನಿನ್ನ ಪ್ರೀತಿಯಿಲ್ಲದೆ ಅವರ್ಯಾರು ಭುವಿಗೆ ಬಾರರು
ನಿನ್ನ ಪ್ರೀತಿ ಅಕ್ಷಯ ನಿನ್ನ ಮಮತೆ ಅನುಪಮ
ಸ್ವಲ್ಪ ಶ್ರಮವ ಹಾಕಿದಲ್ಲಿ ನನ್ನ ಬಾಳು ಸುಗಮ
ಪ್ರೀತಿ ಮೊಗೆದು ಹಂಚುವಲ್ಲಿ ನಿನಗೆ ಇಲ್ಲ ಸರಿಸಮ
ನನ್ನ ಶ್ರೇಯ ಸಾಧನೆಯಲಿ ನಿನ್ನ ಪಾಲು ಮಹತ್ತಮ
ಮುಂದಿನ ಜನುಮದಲಿ ಮೊಮ್ಮಗಳಾಗಿ ಬಾರಮ್ಮ
ಹೂಎಸಳಿನ ಪಾದ ಸವರಿ ಧನ್ಯನಾಗುವೆನಮ್ಮ..
ನೀ ಉಣ್ಣಿಸಿದ ಅಮೃತದ ಋಣ ಹಾಗಾದರೂ ತೀರಲಮ್ಮ.
ನೀ ಅರಳುವುದ ನೋಡಿ ಮುದಿಮನ ಹಿಗ್ಗಲಮ್ಮ.
ಭಾವಾನುವಾದ --- ಪರಾಂಜಪೆ
ದೇಸಾಯರ,
ReplyDeleteನಿಮ್ಮ ಸೋದರ ಚಾರುದತ್ತರೂ ಸಹ ಕವಿ ಎನ್ನುವದು ಈಗ ತಿಳಿದಂತಾಯಿತು. ಅವರು ರಚಿಸಿದ ಉತ್ತಮ ಹಿಂದೀ ಕವನವನ್ನು, ಪರಾಂಜಪೆಯವರು ಅಷ್ಟೇ ಉತ್ತಮವಾಗಿ ಅನುವಾದಿಸಿದ್ದಾರೆ. ನಿಜವಾಗಿಯೂ ಇದು ಪ್ರತಿಭಾ ಸಂಗಮ.
‘ಮೃಚ್ಛಕಟಿಕಾ’ ನಾಟಕದ ನಾಯಕ ಚಾರುದತ್ತನ ಹೆಸರನ್ನು ನಿಮ್ಮ ಸೋದರನಿಗೆ ಇಟ್ಟಿರುವದು
ನಿಮ್ಮ ಕುಟುಂಬದ ಸಾಹಿತ್ಯದೊಲವನ್ನು ತೋರಿಸುತ್ತದೆ ಎಂದು ನನ್ನ ಭಾವನೆ.
ನಿಮಗೆ, ಕವಿ ಚಾರುದತ್ತರಿಗೆ ಹಾಗು ಅನುವಾದಕ ಪರಾಂಜಪೆಯವರಿಗೆ ನನ್ನ ಅಭಿನಂದನೆಗಳು.
ದೇಸಾಯಿಯವರೇ;ಸುಂದರ ಕವಿತೆ ಕೊಟ್ಟಿದ್ದಕ್ಕೆ ನಿಮ್ಮ ತಮ್ಮ ಚಾರುದತ್ತ ಅವರಿಗೂ,ಪರಾಂಜಪೆ ಸರ್ ಅವರಿಗೂ ಮತ್ತು ನಿಮಗೂ ಅನಂತ ಧನ್ಯವಾದಗಳು.
ReplyDeleteದೇಸಾಯ್ ಸರ, ಬಹಳ ಪಸಂದಾಗದ ! ಎಲ್ಲರಿಗೂ ಧನ್ಯವಾದ
ReplyDeleteದೇಸಾಯಿ ಸರ್,
ReplyDeleteಭಾವನಾತ್ಮಕವಾದ ದೇಶಭಕ್ತಿಯನ್ನು ಬಿಂಬಿಸುವ ಸುಂದರ ಗೀತೆಯನ್ನು ನಮಗೆ ಕೊಟ್ಟ ನಿಮಗೂ, ನಿಮ್ಮ ಸಹೋದರರಿಗೂ, ಹಾಗೂ ಪರಾಂಜಪೆ ಸರ್ ಅವರಿಗೂ ಧನ್ಯವಾದಗಳು.....
ದೇಸಾಯಿ ಸರ್,
ReplyDeleteಪರಾಂಜಪೆ ಸರ್ ಪ್ರತಿಭೆ ತಿಳಿದಿತ್ತು..... ಈಗ ನಿಮ್ಮ ತಮ್ಮನ ಪ್ರತಿಭೆ ತಿಳಿಯಿತು..... ಭಾವಾನುವಾದ ತುಂಬಾ ತುಂಬಾ ಸೊಗಸಾಗಿದೆ.....
ದೇಸಾಯಿಯವರೆ...
ReplyDeleteನಿಮ್ಮ ಸಹೋದರರ ಪ್ರತಿಭೆಗೂ..
ಪರಾಂಜಪೆಯವರ ಅನುವಾದ ಕಲೆಗೂ ಅಭಿನಂದನೆಗಳು..
ಕನ್ನಡದವರಾಗಿದ್ದು ಹಿಂದಿಯಲ್ಲಿ ಪ್ರಭುತ್ವವಿರುವ ಇಬ್ಬರೀಗೂ ನನ್ನ ಸಲಾಮ್...
ಚೆನ್ನಾಗಿದೆ...
ReplyDeleteಕಾಕಾ ತಮ್ಮ ಚಾರುದತ್ತ ನಮ್ಮ ಹಣಮುಕಾಕಾನ ಮಗ. ಹಣಮುಕಾಕಾನ ಬಗ್ಗೆ ಈಗಾಗಲೇ ಬದೆದಿದ್ದೆ. ಹಣಮುಕಾಕಾನೇ
ReplyDeleteಮಗನಿಗೆ ಹೆಸರು ಸೂಚಿಸಿದ್ದು. ನಿಜ ಹಣಮುಕಾಕಾನಿಗೆ ಮರಾಠಿ ನಾಟಕ,ಅಭಂಗ ಹೀಗೆ ಅನೇಕ ಆಸಕ್ತಿ ಇದ್ವು.
ನಮ್ಮದೇಸಾಯಿ ಮನೆತನದಾಗ ಒಂದಿಬ್ರು ಔರಂಗಜೇಬ್ರೂ ಸಿಗತಾರ ಆದ್ರ ಭಾಳ ಮಂದಿಗೆ ಹಾಡು,ಸಂಗೀತದ ಒಲವಿತ್ತು. ಏನೋ ನಮ್ಮ ಮುಂದಿನ ಪೀಳಿಗಿದೂ ಗೊತ್ತಿಲ್ಲ ಕವಿತಾ ಮೆಚ್ಚಿದ್ದಕ್ಕೆ ಧನ್ಯವಾದಗಳು
ಡಾಕ್ಟರ್ ಸಾಬ್ ನಿಮ್ಮ ಮೆಚ್ಚುಗೆಯ ಮಾತು ಹುದಿದುಂಬಿಸಿವೆ ಧನ್ಯವಾದಗಳು
ReplyDeleteಭಟ್ ಸರ್ ನಿಮಗ ಪಸಂಗಾಗಿದ್ದು ಕೇಳಿ ಮನಪಸಂದಾತು
ReplyDeleteಮೊದಲಬಾರಿ ಬಂದ ಪ್ರವೀಣ್ ಅವರಿಗೆ ಸ್ವಾಗತ ಆಗಾಗ ಬರ್ರಿ ತಪ್ಪಿದ್ರ ಹೇಳ್ರಿ ತಿದ್ಕೊಳ್ಳೋಣು
ReplyDeleteದಿನಕರ್ ನಿಮ್ಮ ಮೆಚ್ಚುಗೆಯ ಮಾತು ಕೇಳಿ ಸಂತೋಷವಾಯಿತು ನಾನು ಬರೀ ವೇದಿಕೆ ಮಾತ್ರ ಇಬ್ಬರ ಪ್ರತಿಭೆ ಅನಾವರಣಗೊಂಡು ನೀವು ಮೆಚ್ಚಿದ್ದು ಖುಷಿಯಾಗಿದೆ
ReplyDeleteಹೆಗಡೇಜಿ ನಿಮ್ಮ ಸಲಾಮ್ ಗೆ ಪ್ರತಿ ಸಲಾಮು
ReplyDeleteಗೋರೆಸಾಬ್ ಚುಟುಕಾದ ಮೆಚ್ಚುಗೆಗೆ ಧನ್ಯೋಸ್ಮಿ
ReplyDeleteಉಮೇಶ್ ಸರ್, ಚಾರುದತ್ತ, ಉಮೇಶ್, ಪರಾಂಜಪೆ ಎಲ್ಲರಿಗೂ ದೊಡ್ಡದೊಂದು ಧನ್ಯವಾದ...ತಾಯಿ, ಅಮ್ಮ ಮಮತಾಮಯಿಯ ಬಗ್ಗೆ ಬರೆದಷ್ಟೂ ಕಡಿಮೆಯೇ...
ReplyDeleteಆಜಾದ್ ನಲುಮೆಯ ಪ್ರತಿಕ್ರಿಯೆ ನೀಡಿದ್ದಕ್ಕೆ ವಂದನೆಗಳು
ReplyDeleteನಿಮ್ಮ ತಮ್ಮನವರು ಕವಿಯೆಂದು ತಿಳಿದು ಸಂತೋಷವಾಯಿತು. ಅವರ ಸುಂದರ ಹಿಂದಿಕವನವನ್ನ ಪರಾನ್ಜಾಪೆಯವರು ಅದ್ಭುತವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ನಿಮ್ಮೆಲ್ಲರಿಗೂ ನನ್ನ ವಂದನೆಗಳು.
ReplyDelete