Monday, January 11, 2010
ಸದಾ ಕಾಡುವ ಹಾಡು---೫
ಬಹಳ ದಿನಗಳ ನಂತರ ಹಾಡುಗಳ ಬಗ್ಗೆ ಹೇಳಹೊರಟಿರುವೆ.ಕಾಡುವ ಹಾಡು ಅನೇಕ ಅದರಲ್ಲಿ
ಮರಾಠಿ ಹಾಡುಸಹ ಸೇರಿವೆ. ನವಿರಾದ ಹಾಡು ಹಳೆ ಚಿತ್ರಗೀತೆ ಅಥವಾ ಭಾವಗೀತೆ ಯಾಗಬಹುದು ನನ್ನ ಮನಸ್ಸಿಗೆ ಮುದ ನೀಡಿವೆ. ನನ್ನ ಮೆಚ್ಚಿನ ಗಾಯಕ ಸುಧೀರ ಫಡಕೆ(ಬಾಬುಜಿ-ಇದು ಅವರಿಗೆ ಮರಾಠಿಗರು ಪ್ರೀತಿಯಿಂದ ಇಟ್ಟ ಹೆಸರು ) ಸ್ಪಷ್ಟ ಉಚ್ಚಾರ, ಹಾಗೂ
ಮರಾಠಿಗರು ಹೇಳೋ ಹಾಗೆ precie "ಶಬ್ದ ಫೇಕ್" ಒಲಿದವ.ಇಂದೂ ಸುಧೀರ್ ಫಡಕೆ ಹಾಡಿದ
ಗೀತರಾಮಾಯಣದ ಹಾಡು ಅಮರಎನ್ನಿಸಿವೆ.
ಈಗ ಹೇಳಹೊರಟಿರುವ ಹಾಡು ಸುಧೀರ್ ಮೋಘೆ ಎಂಬ ಕವಿ ಬರೆದಿದ್ದು. ವೃತ್ತಿಯಿಂದ ಲೆಕ್ಕಪತ್ರ ಬರೆಯುವವನಾದರೂ ಗಣಿತದ ಗದ್ದಲದಲ್ಲಿ ಸಾಹಿತ್ಯ ಮರೆತವನಲ್ಲ. ಚಿತ್ರಗೀತೆಗಳಿಗೂ
ಹೊಸ ಜೀವ ತಂದವ. ಈ ಹಾಡು ಓರ್ವ ಪ್ರೇಮಿಯ ಚಡಪಡಿಕೆಯಾಗಿದೆ ಪ್ರೇಯಸಿಯ ಬರುವಿಗೆ ಕಾದ ಪ್ರೇಮಿ ಅವಳ ಬಾರದಿರುವಿಕೆಗೆ ಕೊರಗುತ್ತಾನೆ ನವಿರಾಗಿ ಛೇಡಿಸುತ್ತಾನೆ..ಈ ಹಾಡು ಕೇಳಿದ ಕಲ್ಲಿನ ಎದೆಯೂ ಕರಗೀತು ಹಾಗಿದೆ ಇದರ ಗಮ್ಮತ್ತು. ಹಾಡು " ಸಖಿ ಮಂದ ಝಾಲಾ ತಾರಕಾ...". ಈ ಗೀತೆಗೆ ರೋಚಕ ಇತಿಹಾಸವಿದೆ. ಮೊದಲಬಾರಿ ಪುಣೆರೇಡಿಯೋ ಸ್ಟೇಶನ ನಲ್ಲಿ ಹಾಡಲಾಯಿತು. ಹಾಡಿದವರು ಭೀಮಸೇನ್ ಜೋಶಿ. ಮುಂದೆ ಇದೇ ಹಾಡನ್ನು ಸುಧೀರಫಡಕೆ ಹಾಡಿದರು. ಸಂಗೀತ ನೀಡಿದವರು ರಾಮ ಫಾಟಕ್ .
ಹಾಡಿನ ಮೊದಲ ಸಾಲು ಗಮನಿಸಿ----
सखि मंद झाल्या तारका , आता तरी यॆशील का ?
ಈಗಾಗಲೇ ತಾರೆಗಳು ಕುಂದಿವೆ ಅಂದರೆ ರಾತ್ರಿ ಇನ್ನೇನು ಮುಗಿಯುತಿದೆ ಇನ್ನಾದರೂ ಬರಲಾರೆಯಾ..? ಆ ರಾತ್ರಿ ಅಂತಿತಹುದಲ್ಲ ಅದು "ಮಧುರಾತ್ರಿ" ಯಾಗಿತ್ತು ಕಳೆದು ಹೊರಟಿದೆ.
ಎರಡನೇ ನುಡಿಯಲ್ಲಿ ಕವಿ ಬಳಸುವ ಜಾಣ್ಮೆ ನೋಡಿ.. ಗೀತೆ,ಪ್ರೀತಿ ಇದೆ ಆದರೆ ಪ್ರೇಮದ ಸ್ವರಬೆರೆತರೆ ಅದರ ಸೊಬಗೇ ಬೇರೆ ಅಲ್ಲವೆ...ಹೃದಯದಲ್ಲಡಗಿದ ಪ್ರೀತಿ ,ತುಟಿಯಮೇಲಿನ ಗೀತೆ ಪ್ರೇಮದ ಸ್ವರ ಬೆರೆತರೆ ಮಾತ್ರ ಸಾರ್ಥಕ.ಇಲ್ಲಿ ಸಖಿಯ ಬರುವಿಕೆಯನ್ನು ಪ್ರೇಮಸ್ವರಕ್ಕೆ ಹೋಲಿಸಬಹುದು. ಅವಳು ಬಂದರೆ ಎದೆಯ ಭಾವ ,ತುಟಿಯ ಮೇಲಿನ ಗೀತೆ ಪ್ರೇಮಗೀತೆಯಾದೀತು...!
हृदयात आहे प्रीत अन ओठात आहे गीतही
ते प्रेम गाणे छेड्णारा, सूर तू हॊशील का....?
ಬಯಸಿದ್ದೆಲ್ಲ ಸಿಕ್ಕಾಗ ಆಗೋ ಸಂತೋಷ ಮಜವಾಗಿರುತ್ತದೆ ಆದರೆ ಬಯಕೆ ಕೇವಲ ಭೌತಿಕವಾದ ವಸ್ತುಗೆ ಮಾತ್ರ ಸೀಮಿತ.ಪ್ರೀತಿ ಅದರ ಅನುಭೂತಿ ದೊರೆತಾಗ ಮನುಷ್ಯ
ಪರಿಪೂರ್ಣ ಆಗುತ್ತಾನೆ. ಮರಾಠಿ ಶಬ್ದಗಳು ಕೇಳಲಿಕ್ಕೆ ಹಿತ ಅನಿಸುತ್ತವೆ ಇಲ್ಲಿ ಎರಡು ಪದಗಳಿವೆ
" ಉರೆ.." ಹಾಗೂ "ಉಣೆ.." ಉರೆ ಅಂದರೆ ಶೇಷ ಇನ್ನು ಉಣೆ ಅಂದ್ರೆ ವ್ಯವಕಲನ ಅಂದ್ರ
ಬೆಂಗಳೂರು ಕನ್ನಡದಲ್ಲಿ "ಮೈನಸ್ಸು.."!. ಸಾಲು ಗಮನಿಸಿ..
जे जे हवेसे जीवनी, ते सर्व आहे लाभले
तरिही उरे काही उणे, तू पूर्तता हॊशील का..?
ಕೊನೆನುಡಿ ಇಡೀ ಹಾಲಿನ ಹೈಲೈಟು . ಪ್ರೀತಿಯ ತುರೀಯಾವಸ್ಥೆ ಇಲ್ಲಿದೆ .ಸಾವು ನಿಶ್ಚಿತ ಎಲ್ಲರಿಗೂ..ಪ್ರೇಮಿಗೂ. ಆದರೆ ಇಲ್ಲಿ ಕವಿ ಹೇಳುತ್ತಾನೆ ಆ ಸಾವು ನಿಂತೀತು ಅಥವ ಕಾದೀತು
ಕ್ಷಣ... ನೀನು ಬಂದು ನನ್ನ ಭೇಟಿಯಾಗಲಿರುವಿ ಅಂತ ಗೊತ್ತಾದರೆ. ಅಂದ್ರೆ ಪ್ರೀತಿಗೆ ಸಾವನ್ನೂ ತಡೆಹಿಡಿಯುವ ಶಕ್ತಿ ಇದೆ ..!
बोलावल्यावाचूनही मृत्यु जरी आला इथे
थांबेल तॊ ही पळ भरी, पण सांग तू यॆशील का..?
ಮೇಲಿನ ಗೀತೆ ನಾ ಸದಾ ಗುನುಗುನಿಸುವ ಹಾಡು. ಎದೆ ತಟ್ಟಿದ ಗೀತೆ ನಿಮಗೂ ಸೇರೀತು
ಎಂದು ಅಂದುಕೊಳ್ಳುವೆ...!
Subscribe to:
Post Comments (Atom)
chennaagide
ReplyDeleteದೇಸಾಯರ,
ReplyDeleteಒಂದು ಉತ್ತಮ ಮರಾಠಿ ಗೀತೆಯನ್ನು ನಮಗ ತೋರಿಸಿದಿರಿ.
ಗೀತೆಯ ಸಾಹಿತ್ಯ ಛಂದದ. ಇನ್ನು ಹಾಡಿದ ರೀತಿಯನ್ನು ಬರೆ
ಊಹಿಸಿಕೊಂಡು, ಸಂತೋಷಪಟ್ಟೆ.
ನನ್ನ ಪಾಲಿಗೆ ಮರಾಠಿ ಅಂದರೆ ನನ್ನ ರೂಂ ಮೇಟ್ ನನಗೆ ಕಾಡಲು ಬಯ್ಯುವ ಬೈಗುಳಗಳು ಮಾತ್ರ. :)
ReplyDeleteಹಾಗಾಗಿ, ನಿಮ್ಮ ವಿವರಣೆಯೊಂದಿಗೆ ಸಾಧ್ಯವಾದಷ್ಟು ಹೊಂದಿಸಿಕೊಳ್ಳುತ್ತಾ ಓದಿದೆ. ಪೂರ್ತಿಯಾಗಿ ಅರ್ಥವಾಯ್ತು ಅಂತ ಹೇಳಲಾರೆ, ಆದರೆ ಅರ್ಥವಾದಷ್ಟು ಇಷ್ಟವಾಯ್ತು.
ಹಾಡಿನ ಸ೦ಗೀತದ ತುಣುಕುಗಳನ್ನ ಹಾಕಿದ್ದರೇ ಚೆನ್ನಾಗಿರುತ್ತಿತ್ತು.
ReplyDeleteಚೆನ್ನಾಗಿತ್ತು... ಮರಾಠಿ ಹಾಡು ಅರ್ಥಮಾಡಿಕೊಳ್ಳಬಲ್ಲೆ... ಆದರೆ ಇಂತಹ ಹಾಡು ಕೇಳಿರಲಿಲ್ಲ... ಭೀಮಸೇನ್ ಜೋಷಿಯವರ ಅಭಂಗ್ ತುಂಬಾ ಇಷ್ಟ... ಹಾಗೆ ನಾನು ಚಿಕ್ಕವನಿರುವಾಗ ಅಮ್ಮ ಹೇಳುತ್ತಿದ್ದ ಮರಾಠಿ ಭಜನೆಗಳು ತುಂಬಾ ಇಷ್ಟವಾಗುತ್ತಿದ್ದವು... ಅದರಲ್ಲೂ ನನಗೆ ತುಂಬಾ ಹಿಡಿಸಿದ್ದು ಅಂದರೆ "ಕೇಶವಾ ಮಾಧವಾ" ಅನ್ನೋ ಹಾಡು...
ReplyDeleteದೇಸಾಯ್ ಸರ್,
ReplyDeleteನನಗೇ ಮರಾಠಿ ಗೆಳೆಯರಿದ್ದರು. ಆದ್ರೆ ಹಾಡು ಗೊತ್ತಿರಲಿಲ್ಲ. ಅದರ ಪರಿಚಯ ಮಾಡಿಸಿದಿರಿ...ಈಗಲೂ ನನ್ನ ಗೆಳೆಯರು ಕೆಲವು ಭಜನೆಗಳನ್ನು ಹೇಳುವಾಗ ಕೇಳಲು ಚೆನ್ನ...
ಧನ್ಯವಾದಗಳು.
ದೇಸಾಯಿಯವರೆ...
ReplyDeleteಎಷ್ಟು ಚಂದದ ಸಾಲುಗಳು...!!
ವಾಹ್...!
ಇವುಗಳ ಪೂರ್ತಿ ಭಾವಾನುವಾದ ಕೊಡಿ ಪ್ಲೀಸ್...
ನಮ್ಮ "ಉದಯ ಇಟಿಗಿ ಯವರ ಹಾಗೆ (ಬಿಸಿಲ ಹನಿ)
ನನಗೂ ಸಹ ಮರಾಠಿ "ಅಭಂಗಗಳು ಇಷ್ಟ....
ಸೊಗಸಾಗಿರುತ್ತದೆ...
ನಾನು ನಿಮ್ಮ ಬ್ಲಾಗಿಗೆ ಬಹಳ ದಿನ ಬರಲಾಗಲಿಲ್ಲ
ದಯವಿಟ್ಟು ಬೇಸರಿಸ ಬೇಡಿ... ಕ್ಷಮಿಸಿರಿ...
ಮತ್ತೆ ಯಾವುದಾದರೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭೇಟಿಯಾಗೋಣ...
ನನ್ನ ಮೊಬೈಲ್ ನಂಬರ್ 9449053412
ಪರಾಂಜಪೆ ಸರ್ ಧನ್ಯವಾದಗಳು
ReplyDeleteಕಾಕಾ ಹಾಡಿದ ರೀತಿನೂ ಛಂದ ಅದ ಮುಂದ ಹಾಡಿನ ಲಿಂಕೂ ಕೊಡತೇನಿ
ReplyDeleteಧನ್ಯವಾದಗಳು ಕೇಳುತ್ತ ಹೋದಂತೆ (ಬೈಗುಳ ಅಲ್ಲ) ಭಾಷೆ ಬರುತ್ತದೆ ನಾನೂ ಮರಾಠಿ ಕಲಿತಿದ್ದಿಲ್ಲ ಆದರೆ ಅವಕಾಶ ಸಿಕ್ಕಾಗ
ReplyDeleteಉಪಯೋಗ ಮಾಡಿಕೊಂಡೆ
ಸೀತಾರಾಮ್ ಸರ್ ಇನ್ನೊಮ್ಮೆ ಹಾಡಿನ ಲಿಂಕು ಹಾಕುವೆ..ಧನ್ಯವಾದಗಳು...
ReplyDeleteಗೋರೆ ಸರ್ ನಾನೂ ಅಭಂಗಗಳ ಅಭಿಮಾನಿ ಅವು ಹಚ್ಚುವ ಭಕ್ತಿಯ ಕಿಚ್ಚು ಬೇರೆಯೇ..
ReplyDeleteಶಿವು ಪ್ರತಿಕ್ರಿಯೆಗೆ ಧನ್ಯವಾದಗಳು..
ReplyDeleteಹೆಗಡೇಜಿ ಹುಟ್ಟುಹಬ್ಬದ ಶುಭಾಶಯಗಳು ಭಾವಾನುವಾದ ಪ್ರಯತ್ನ ಮಾಡುವೆ ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ
ReplyDelete