Saturday, June 16, 2012

ಬಾ ಸಖಿ....

ಬಾ ಸಖಿ....
--------------
ಬಾ ಸಖಿ ಮತ್ತೊಮ್ಮೆ ಹಿಂದೆ ಸಾಗೋಣ..
ಮುಚ್ಚಿದ ಮನದ ಕಿಟಕಿ ತೆರೆದುಬಿಡೋಣ....

ಪುಟಗಳ ನಡುವೆ ಬಾಡಿದ ನವಿಲುಗರಿ ನಲುಗಿದೆ..
ಬಾ ಅದ ಎತ್ತಿ ಸವರಿ ಮತ್ತೆ ಚುಂಬಿಸೋಣ...

ಕನಸು ತುಂಬಿಕೊಂಡು ನಾವು ಪಯಣ ಹೊರಟೆವು..
ವಾಸ್ತವದ ಧೂಳು ಅಡರಿದೆ..ಕೊಡವಿ ಹೊಸದ ನೋಡೋಣ..

ಬಾಳತೋಟದಿ ಹೂ ಅರಳದಿರೆ ಅಳಲ್ಯಾಕೆ..
ತಾನೇ ಬೆಳೆದ ಗರಿಕೆ ಇದೆ ಅದನೊಮ್ಮೆ ಸವರಿ ನೋಡೋಣ

ಜಂಜಡದ ಬದುಕಿದು ಹೌದು ನಿತ್ಯವೂ ತೆರೆದಿದೆ ನರಕ
ಉದುರುವ ಹನಿಗಳ ಬೊಗಸೆಯಲಿ ಹಿಡಿದಿಡೋಣ....

ಸಾಗಿಬಂದ ದಾರಿತುಂಬ ಮುಳ್ಳು ಮನ,ಕಂಗಳು ಒದ್ದೆ..
ಆದರೂ ಮಗದೊಮ್ಮೆ ಮತ್ತದೇ ದಾರಿ ತುಳಿಯೋಣ....

ತೇದಾಗಿದೆ ಗಂಧ.. ಬೆಳಗಾಗಿದೆ ಧೂಪ ದೀಪ ಆ ಕಲ್ಲಿಗೆ..
ಒಳಗಣ ಬೆಳಕು ಹರಡಿದೆ..ಬೆಳದಿಂಗಳಲಿ ಮೀಯೋಣ..

7 comments:

  1. ದೇಸಾಯ್ ಸರ್;ಚೆಂದದ ಕವನ.ತುಂಬಾ ಇಷ್ಟವಾಯಿತು.ಮತ್ತೊಮ್ಮೆ 'ಕಾಲ ಯಂತ್ರ'ದಲ್ಲಿ ಹಿಂದೆ ಹೋಗಿ ಕಳೆದ ಬದುಕನ್ನು ಮತ್ತೊಮ್ಮೆ ಬದುಕುವಂತಿದ್ದರೆ ,ಎಷ್ಟು ಚೆನ್ನಾಗಿರುತ್ತಿತ್ತು!ಅಲ್ಲವೇ?

    ReplyDelete
  2. ಭಾಳ ಚಂದ ಬರ್ದಿರಿ ದೇಸಾಯರ. ಓದುಗರನ್ನು ಫ್ಲಾಶ್ ಬ್ಯಾಕ್ ಗೆ ಕರೆದೊಯ್ಯುವ ತಾಕತ್ತು ನಿಮ್ಮ ಈ ಕವಿತೆಗಿದೆ!

    ReplyDelete
  3. ಪ್ರೇಮ ಪಾನಕ್ಕೆ ಹೊಸ ಯಾನಕ್ಕೆ ಮಿಡಿಯುವ ನಿಮ್ಮ ಆಶಯಕ್ಕೆ ಜೊತೆಗಾತಿ ಸದಾ ಸಾಥ್ ಕೊಡಲಿ.

    ReplyDelete
  4. ದೇಸಾಯರ,
    ಅದ್ಭುತ ಕವನವನ್ನು ಬರೆದೀರಿ. ಬಾಳಪಯಣದಲ್ಲಿ ಸಾಗಿದ ಪ್ರತಿಯೋರ್ವ ಪಥಿಕನೂ ತನ್ನ ನಲ್ಲೆಯೊಡನೆ ಮತ್ತೊಮ್ಮೆ ಬದುಕಿಗೆ ಮುಖ ಮಾಡುವ ಕವನವಿದು.

    ReplyDelete
  5. ಕನಸುಗಳಿಗೆ ವಾಸ್ತವದ ದೂಳು ತುಂಬಿದ ಜೀವನ ಯಾನದ ಮಜಲನ್ನು ಎತ್ತಿ ತೋರಿದೆ ನಿಮ್ಮ ಕವನ, ಇಷ್ಟ ಆಯಿತು ದೇಸಾಯಿ ಸಾರ್,
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  6. ಚಂದದ ಕವನ................
    ಇಷ್ಟವಾಯ್ತು,

    ReplyDelete