Sunday, May 22, 2011

ದೆವ್ವಗಳ ಹಾಡುಗಳು...!!




ಈ ಶೀರ್ಷಿಕೆ ಓದಿ ಆಶ್ಚರ್ಯಗೊಳ್ಳಬಹುದು ಆದರೆಇದು ವಾಸ್ತವ ಹೌದು ನಮ್ಮ ಸಿನೇಮಾಗಳಲ್ಲಿ ಬಹಳ

ಹಿಂದಿನಿಂದಲೂ ದೆವ್ವ ಹಾಡುತ್ತಿವೆ..ಹಾಗೂ ಆ ಹಾಡು ಹಿಟ್ ಸಹ ಆಗಿವೆ. ಇಲ್ಲಿ ಸಿನೇಮಾಜನ ಅವುಗಳಿಗೆ

ದೆವ್ವ ಅನ್ನುವ ಬದಲು ಅತೃಪ್ತ ಆತ್ಮ ಅಂತ ಕರೆದರು. ಈ ಹಾಡುಗಳ ವಿಶೇಷತೆ ಅನೇಕ ಇವೆ..

ಕೃತಕವಾಗಿ ಹಾಕಿದ ಸೆಟ್ಟು.., ಬಿಳಿಸೀರೆ ಧರಿಸಿದ ನಾಯಕಿ ,ಆ ನೀರವತೆಯಲ್ಲೂ ಸುಶ್ರಾವ್ಯವಾಗಿ ಕೇಳಿಬರುವ

ಹಿನ್ನೆಲೆ ಸಂಗೀತ, ಭಯ ಬೆವರು ಹೀಗೆ ಹತ್ತು ಹಲವು ಭಾವ ಮುಖದಲ್ಲಿ ತೋರುವ ನಾಯಕ. ಹೀಗೆ ಈ

ಹಾಡುಗಳಿಗೆ ಒಂದು ಫಾರ್ಮುಲಾ ಇತ್ತು. ಹಾಗೂ ಆ ಫಾರ್ಮುಲಾ ಯಶಸ್ವಿಯೂ ಆಗಿತ್ತು. ನಮ್ಮ ಭಾರತೀಯ

ಯಾವ ಭಾಷೆಯ ಚಿತ್ರವನ್ನೇ ತಗೊಂಡರೂ ಅಲ್ಲಿ ಈ ಬಗೆಯ ಹಾಡು ಇದ್ದೇ ಇರುತ್ತವೆ.


ರಾತ್ರಿವೇಳೆ ಯಾಕಾಗಿ ಈ ಹಾಡು ಅವುಗಳ ಉದ್ದೇಶ ಏನು ? ಮುಖ್ಯವಾಗಿ ನಾಯಕನಿಗೆ ದಿಗಿಲು ಹುಟ್ಟಿಸುವುದು

ನಾಯಕ ಟಾರ್ಚು ಹಿಡಿದುಕೊಂಡು ಹಾಡಿನ ಜಾಡು ಬೆಂಬತ್ತಿ ಬಿಳಿಸೀರೆ ಧರಿಸಿದ ಮೋಹಿನಿಯನ್ನು ಬೆನ್ನತ್ತುತ್ತಾನೆ.

ರಹಸ್ಯ ಭೇದಿಸದೆ ದಿಗಿಲುಗೊಳ್ಳುತ್ತಾನೆ. ಚಿತ್ರ ವೀಕ್ಷಿಸುತ್ತಿದ್ದ ಪ್ರೇಕ್ಷಕನೂ ನಾಯಕನ ಜೊತೆಗೂಡುತ್ತಾನೆ.

ಈ ಅತೃಪ್ತ ಆತ್ಮ ಅವುಗಳ ಮೇಲೆ ಚಿತ್ರಿತವಾದ ಹಾಡು ಹಿಟ್ ಅಂತ ಮೊದಲೇ ಹೇಳಿರುವೆ. ಇನ್ನೊಂದು ವಿಶೇಷ

ಅಂದರೆ ಹೆಚ್ಚಿನವುಗಳು ಲತಾ ಹಾಡಿದ್ದು. ಸುಮಾರು ಅರವತ್ತು ವರ್ಷಗಳ ಹಿಂದೆ ತೆರೆಕಂಡ "ಮೆಹಲ್" ಚಿತ್ರದ

"ಆಯೇಗಾ ಆಯೇಗಾ ಆನೇವಾಲಾ ಆಯೇಗಾ.."ಹಾಡು. ಲತಾಳ ದನಿ ತೀರ ಎಳಸು ಅನಿಸುತ್ತದೆ ಈ ಹಾಡಿನಲ್ಲಿ.

ಮಧುಬಾಲಾಳ ಮಾದಕ ಚೆಲುವು, ಅಶೋಕ್ ಕುಮಾರನ ದಿಗಿಲು ತುಂಬಿದ ಮುಖ ಒಟ್ಟಿನಲ್ಲಿ ಈ ಹಾಡು ಒಂಥರಾ

ಟ್ರೆಂಡ್ ಸೆಟರ್. ಹಾಡಿನ ಸಾಲು ಸಹ ಎಷ್ಟು ಚಂದ..."ತರಸಿ ಹುಯಿ ಜವಾನಿ ಮಂಜಿಲ್ ಕೋ ಢುಂಡತಿಹೈ

ಮಾಜಿ ಬಗೈರ್ ನೈಯ್ಯಾ ಸಾಹಿಲ್ ಕೊ ಢುಂಡತಿಹೈ.."



ಅನೇಕ ಹಾಡಿವೆ. ಒಂದು ವಿಶೇಷದ್ದು. ಮುಬಾರಕ್ ಬೇಗಂ ಎನ್ನುವ ಗಾಯಕಿ ಹಾಡಿದ್ದು--"ಹಮಾರಿ ಯಾದ್ ಆಯೇಗಿ"

ಚಿತ್ರದ್ದು. "ಕಭಿ ತನಹಾಯಿಮೆ ಯೂಂ ಹಮಾರಿ ಯಾದ್ ಆಯೇಗಿ..." ಮುಬಾರಕ್ ಬೇಗಂಳದ್ದು ಒಂಥರಾ ಶೀರು ದನಿ.

ಈ ಹಾಡಿಗೆ ಅವಳು ಜೀವತುಂಬಿದ್ದಳು. ಇದು ಒಂಥರಾ ಸೇಡಿನ ಹಾಡೇ..ಸಾಲು ಗಮನಿಸಿ.."ಯೇ ಬಿಜಲಿ ರಾಖ

ಕರಜಾಯೇಗಿ ತೇರೆ ಪ್ಯಾರ್ ಕಿ ದುನಿಯಾ ನ ತೂ ಜೀ ಸಕೇಗಾ ಔರ್ ನ ತುಜಕೊ ಮೌತ್ ಆಯೇಗಿ..".



ಹೇಮಂತ ಕುಮಾರ್ ಆರ್ಥರ್ ಕಾನನ್ ಡಾಯಲ್ ನ ಕಾದಂಬರಿ ಆಧರಿಸಿ ಒಂದು ಚಿತ್ರ ತೆಗೆದ--"ಬೀಸ್ ಸಾಲ್ ಬಾದ್".

ಈ ಚಿತ್ರದ ಥೀಮ್ ಸಾಂಗ್ "ಕಹಿ ದೀಪ್ ಜಲೆ ಕಹಿ ದಿಲ್ ಜರಾದೇಖಲೆ ಆ ಕರ್ ಪರವಾನೆ.."ಲತಾಳ ಅಧ್ಭುತ ಹಾಡು ಇದು.

ಅವಳ ದನಿಗೆ ಮಾರುಹೋಗಿ ಆ ದನಿ ಬಂದ ದಿಕ್ಕಿಗೆ ಹೋಗಿಬಿಡಬೇಕು ..ಅಂಥಾ ಸಮ್ಮೋಹಕ ಹಾಡು ಇದು.

ಈ ಚಿತ್ರದ ಯಶಸ್ಸಿನ ನಂತರ ಹೇಮಂತ್ ದಾ ಮತ್ತೆರಡು ಚಿತ್ರ ತೆಗೆದ-- "ಕೋಹರಾ" ಹಾಗೂ "ಬಿನ್ ಬಾದಲ್ ಬರಸಾತ್'.

ಕೋಹರಾ ಚಿತ್ರದ ಲತಾಳ ದನಿಯ "ಜುಂ ಜುಂ ಢಲತಿ ರಾತ್ .." ಹಾಡು ಕೇಳಿದರೆ ರೋಮಾಂಚನ ಆಗುವುದು ನಿಜ.

ಲತಾ ಮದನ್ ಮೋಹನ್ ಸಂಗೀತದಲ್ಲಿ ಹಾಡಿದ "ನೈನಾ ಬರಸೆ ರಿಮಝಿಮ್ ನೈನಾ ಬರಸೆ.." ಹಾಡು ಚಿತ್ರದ ಜೀವಾಳ.

ಅಂತೆಯೇ "ತು ಜಹಾಂ ಜಹಾಂ ಚಲೇಗಾ ಮೇರಾ ಸಾಯಾ ಸಾಥ್ ಹೋಗಾ.." ಹಾಡು ಆ ಸಿನೇಮಾಗಳಿಗೆ ಒಂದು

ಮೆರುಗು ಕೊಟ್ಟಿದ್ದವು. ಕೊಲೆ ಯಾರು ಮಾಡಿದ್ದು, ಕೊಲೆಗಾರ ಯಾರು ಎಂದು ನಾಯಕ ಮನೋಜ್ ಕುಮಾರ್

ತಲೆಕೆಡಿಸಿಕೊಳ್ಳುತ್ತಿರುವಾಗ ಶೂನ್ಯದಿಂದ ತೇಲಿ ಬರುವ ಹಾಡು "ಗುಮನಾಮ್ ಹೈ ಕೋಯಿ ಬದನಾಮ್ ಹೈ ಕೋಯಿ.."

ಪ್ರೇಕ್ಷಕನಲ್ಲಿ ನಡುಕ ಹುಟ್ಟಿಸುತ್ತದೆ. ಲತಾಳ ಕಂಠಸಿರಿ ಕೇಳಿಯೇ ಅನುಭವಿಸಬೇಕು..!


ಕೇವಲ ನಾಯಕಿ ಮಾತ್ರ ಹೀಗೆ ಅತೃಪ್ತಳಲ್ಲ. ಪ್ರೇಯಸಿಯನ್ನು ಪಡೆಯದ ನೋವಿನಲ್ಲಿಯೇ ಸಾಯುವ ನಾಯಕ ಅವನ

ತೃಷೆ ಹಾಡಾಗಿ ಮಾರ್ಪಟ್ಟು ನಾಯಕಿಯನ್ನು ಕರೆಯುತ್ತದೆ.." ಆ ಜಾ ತುಜ್ ಕೊ ಪುಕಾರೆ ಆ ಜಾ ಮೈ ತೋ ಮಿಟಾ ಹುಂ

ತೇರಿ ಚಾಹ್ ಮೇ.."
ರಫಿಯ ಈ ಹಾಡು ನೀಲಕಮಲ್ ಚಿತ್ರದ್ದು. ಹಾಗೆಯೇ ಕಿಶೋರ್ ಹಾಡಿದ "ಮೇರೆ ಮೆಹಬೂಬ್

ಕಯಾಮತ್ ಹೋಗಿ ಆಜ್ ರುಸವಾ ತೇರಿ ಗಲಿಯೊಂಮೆ ಮೊಹಬ್ಬತ್ ಹೋಗಿ...."
. ಕಿಶೋರ್ ಆ ಅತೃಪ್ತ ಆತ್ಮದ ನೋವಿಗೆ

ದನಿಯಾಗಿದ್ದ.

ಕನ್ನಡದಲ್ಲೂ ಇಂತಹ ಹಾಡುಗಳಿವೆ. ನನಗೆ ನೆನಪಿಗೆ ಬರುವುದು ಮೂರು ಹಾಡುಗಳು--

"ದೇವರಕಣ್ಣು" ಚಿತ್ರದ್ದು ಪಿ. ಸುಶೀಲಾ ಹಾಡಿದ ಹಾಡು "ಓ ಇನಿಯಾ ನೀ ಎಲ್ಲಿರುವೆ ನಿನಗಾಗಿ ನಾ ಕಾದಿರುವೆ..."

ಹಾಗೆಯೇ ಶಂಕರನಾಗ್ ನಿರ್ದೇಶನದಲ್ಲಿನ "ಜನ್ಮಜನ್ಮದ ಅನುಬಂಧ" ಚಿತ್ರದ ಎಸ್. ಜಾನಕಿ ಹಾಡಿದ

"ತಂಗಾಳಿಯಲ್ಲಿ ನಾನು ತೇಲಿ ಬಂದೆ ನಿನ್ನನ್ನು ಪ್ರೀತಿಯಿಂದ ಸೇರಲೆಂದೆ...". ಇನ್ನೊಂದು ಹಾಡಿದೆ ಅದೂ ಕೂಡ

ಜಾನಕಿ ಅವರೇ ಹಾಡಿದ್ದು "ಈ ಗುಲಾಬಿಯು ನಿನಗಾಗಿ ಅದು ಚೆಲ್ಲುವ ಪರಿಮಳ ನಿನಗಾಗಿ..." , ಇದು "ಮುಳ್ಳಿನಗುಲಾಬಿ"

ಚಿತ್ರದ್ದು.

ಇನ್ನೂ ಅನೇಕ ಹಾಡುಗಳಿರಬಹುದು. ನಾ ಮರೆತಿರಬಹುದು.

ಈ ಬಗೆಯ ಹಾಡುಗಳಿಗೆ ಅದರದೇ ಆದ ಛಂದ ಇದೆ ಲಾಲಿತ್ಯ ಇದೆ. ಅಂತೆಯೇ ಅವು ಅಮರ ಗೀತೆಗಳಾಗಿವೆ.

9 comments:

  1. ಹಿಂದೀ ಸಿನೆಮಾಗಳ ಭೂತಗೀತೆಗಳ ಬಗೆಗೆ ಸಮಗ್ರವಾಗಿ ಬರೆದಿರುವಿರಿ. ತುಂಬ ಉತ್ತಮ ಲೇಖನ. ಕನ್ನಡ ಸಿನೆಮಾಗಳು ಮೊದಮೊದಲು ಹಿಂದೀ ಭೂತಗೀತೆಗಳನ್ನು ರಾಗ ಹಾಗು ವಿಷಯಗಳಲ್ಲಿ ಹೂಬೇಹೂಬ ನಕಲು ಮಾಡಿದವು. ತನ್ನಂತರ ನಮ್ಮ ಗೀತಕಾರರು ಸ್ವತಂತ್ರ ರಚನೆಗಳನ್ನೂ ಮಾಡಿದ್ದಾರೆ.
    ಕನ್ನಡದ ಒಂದು ಅತ್ಯಂತ ಯಶಸ್ವಿ ಭೂತಗೀತೆ ಎಂದರೆ,‘ರತ್ನಮಂಜರಿ’ ಚಲನಚಿತ್ರದ "ಯಾರು ಯಾರು ನೀ ಯಾರು?/ ಎಲ್ಲಿಂದ ಬಂದೆ ಯಾವೂರು?"

    ReplyDelete
  2. bala chalo ada desayara, uttama lekhana !

    ReplyDelete
  3. ದೇಸಾಯಿಯವರೆ..

    ಬಹಳದಿನಗಳಿಂದ ಇಂಥಹದೊಂದು ಲೇಖನ ನಿಮ್ಮಿಂದ ಬರಲಿಲ್ಲ ಅಂತ ಅಂದುಕೊಂಡಿದ್ದೆ..

    ಕಹೀ ದೀಪ್ ಜಲೆ..

    ತು ಜಹಾ ಜಹಾ ಚಲೇಗಾ..

    ಎಲ್ಲವೂ ಎಷ್ಟು ಸುಂದರ ಹಾಡುಗಳು ಅಲ್ಲವಾ?

    ಆದರೆ ಹೆದರಿಕೆ ಇರುವ ನಾಯಕ ಅಥವಾ ನಾಯಕಿಯರು ...
    ರಾತ್ರಿ ಕತ್ತಲಲ್ಲಿ ಮನೆ ಬಿಟ್ಟು ಪಕ್ಕದ ಕಾಡಲ್ಲಿ ಟಾರ್ಚ್ ತಗೊಂಡು ಹೋಗ್ತಾರಲ್ಲ.. ಇದು ಸೋಜಿಗ.. !!

    ಇದು ಓಂದು ಸಂಗ್ರಹ ಯೋಗ್ಯ ಲೇಖನ ಧನ್ಯವಾದಗಳು..

    ಒಂದು ಕುಟುಂಬ ಒಂದಾಗಿರುವಾಗ ಎಲ್ಲರೂ ಸೇರಿ ಒಂದು ಹಾಡು ಹೇಳ್ತಾರೆ..
    ಮಧ್ಯದಲ್ಲಿ ಎಲ್ಲರೂ ಬೇರೆ ಬೇರೆ ಆಗ್ತಾರೆ..
    ಮತ್ತೆ ಅದೇ ಹಾಡಿನೊಂದಿಗೆ ಸೇರುತ್ತಾರೆ..

    ಈ ರೀತಿಯ ಹಾಡುಗಳೂ ಬಹಳ ಇರಬಹುದಲ್ಲವೆ?

    ಜೀತ್ ಜಾಯೇಂಗೆ ಹಮ್... ತು ಅಗರ್ ಸಂಗ ಹೇ...
    ಜಿಂದಗಿ.. ಹರ್ ಕದಮ್ .. ಎಕ್ ನಯಿ ಜಂಗ ಹೆ.." ಕೇಳಿದ್ದೀರಾ?

    ReplyDelete
  4. ದೇಸಾಯ್ ಸರ್,
    ಹಿಂದಿ ಸಿನಿಮಾಗಳ ಈ ಹಾಡುಗಳನ್ನು ಕೇಳುತ್ತಿದ್ದೆ. ಆದ್ರೆ ಅದರ ಬಗ್ಗೆ ಇಷ್ಟು ಮಾಹಿತಿ ನನಗೆ ಗೊತ್ತಿರಲಿಲ್ಲ. ಅದನ್ನೆಲ್ಲಾ ವಿವರಣೆ ಸಹಿತ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಸರ್.

    ReplyDelete
  5. ಕಾಕಾ ಧನ್ಯವಾದಗಳು. ನೀವು ಪ್ರಸ್ತಾಪಿಸಿದ ಹಾಡು ಆವಾಗ ನೆನಪಿಗೆ ಬಂದಿರಲಿಲ್ಲ..

    ReplyDelete
  6. ಭಟ್ ಸರ್ ಮೆಚ್ಚಿಗೆಯ ನುಡಿಗೆ ಧನ್ಯವಾದಗಳು

    ReplyDelete
  7. ಹೆಗಡೇಜಿ ಧನ್ಯವಾದಗಳು. ನೀವು ಹೇಳಿದ ರೀತಿಯ ಹಾಡುಗಳು ವಿಚಾರ ಮಾಡಬಹುದು..ರಿಸರ್ಚ ಬೇಕು

    ReplyDelete
  8. ಶಿವು ಅವರಿಗೆ ಧನ್ಯವಾದಗಳು ಹಾಡು ಅಮರ ಅದರ ಬಗ್ಗೆ ಹೇಳುವುದು ಹೆಚ್ಚುಗಾರಿಕೆ ಅಲ್ಲ

    ReplyDelete
  9. ee hale haadugalanna sangrahisi " HAUNTING MELODIES" anthaa ondu cassette/CD/DVD maadidaare- namma maneyavara ishttaddu. Tangaliyalli maatra nanna favourite.

    ReplyDelete