Saturday, April 9, 2011

ಅಗಲಿದ ಸಖನಿಗೆ...












ಜೀವನದ ಪಯಣದಲಿ ಸ್ನೇಹ ಅಥವಾ ಗೆಳೆತನ ನನಗೆ ಒದಗಿಬಂದಿದ್ದು ಕ್ವಚಿತ್ತೇ ಸರಿ. ನನ್ನದೇ ವಿಚಿತ್ರ ಸ್ವಭಾವ,
ಸಂಕೋಚ ಇತ್ಯಾದಿ ಸೇರಿ ಭಾಳ ಕಮಿ ಗೆಳೆಯರು ನನಗೆ.ಆದರೆ ಯಾರ ಜೊತೆ ಗೆಳೆತನ ಬೆಳೆಯಿತೋ ಅದು
ಬಿಡಿಸಲಾರದ ಬಂಧವಾಗಿತ್ತು. ನಾನಾಗಲಿ ಅಥವಾ ಗೆಳೆಯನಾಗಲಿ ಹತ್ತಿರ ಇಲ್ಲದಿದ್ದರೂ ಸ್ನೇಹದ ಬೆಸುಗೆ ಸೊಗಸಾಗಿಯೇ ಇತ್ತು. ನಾ ಅದು ಎಂದೂ ಮುರಿಯಲಾರದು ಅಂದುಕೊಂಡಿದ್ದೆ. ಆದರೆ ಅದು ಮುರಿದುಬಿದ್ದಾಗ
ನೋವು ಖಂಡಿತಆಗುತ್ತದೆ. ಹೀಗೆ ನನ್ನ ಗೆಳೆಯನೊಬ್ಬ ಬಂಧತೊರೆದು ಮುಕ್ತನಾಗಿದ್ದಾನೆ. ಅವನ ಸಾವಿಗೆ ನಮ್ಮ
ಸ್ನೇಹ ಮುರಿಯುವ ಶಕ್ತಿ ಬಂತಾದರೂ ಹೇಗೆ?

ರಮೇಶ್ ಪಾಚಲಗ್ ಈ ಹೆಸರಿನ ವ್ಯಕ್ತಿ ಮೊದಲಿಂದಲೂ ಪರಿಚಯದವನಲ್ಲ. ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವೂ ಇತ್ತು. ನಮ್ಮ ಹುಬ್ಬಳ್ಳಿ ಅರ್ಬನ್ ಬ್ಯಾಂಕಿಗೆ ಬಂದ ಹೊಸ ಹುಡುಗರ ದಂಡಿನಲ್ಲಿ ಕೆಂಪಗೆ,
ಇತ್ತು. ನಮ್ಮ ಹುಬ್ಬಳ್ಳಿ ಅರ್ಬನ್ ಬ್ಯಾಂಕಿಗೆ ಬಂದ ಹೊಸ ಹುಡುಗರ ದಂಡಿನಲ್ಲಿ ಕೆಂಪಗೆ, ಟೋಮಾಟೋ ಹಣ್ಣಿನಂತಿರುವ ಹುಡುಗ ಹತ್ತಿರವಾದ. ವಯಸ್ಸಿಗೆ ಹೋಲಿಸಿದರೆ ಸ್ಥೂಲಕಾಯ ಎನ್ನಬಹುದು.
. . ಓದಿದ್ದು ಬಿ ಎಸ್ ಸಿ ಆದರೂ ಆಧ್ಯಾತ್ಮ,ಫಿಲಾಸಫಿ,ಓಷೋ, ವಿವೇಕಾನಂದ
ಓಷೋ, ವಿವೇಕಾನಂದ ಹೀಗೆ ಹತ್ತು ಹಲವು ವಿಷಯದಲ್ಲಿ ಮಾತನಾಡುತ್ತಿದ್ದ.ಅವನ ಜೊತೆ ವಾದ ಚರ್ಚೆ ಮಾಡುವುದು ಒಂಥರಾ ಫಾಯದೆಯ ವಿಚಾರವಾಗಿತ್ತು.
. ನಮಗೆ ತಿಳಿಯದಿದ್ದ ಅನೇಕ ವಿಷಯ ತಿಳಿದುಕೊಳ್ಳಬಹುದಾಗಿತ್ತು. ಹಾಗೆಯೇ
ಎಂದೂ ತನ್ನ ಮಾತೇ ನಡೆಯಬೇಕು ಎಂಬ ಅಹಂ ಅವನಲ್ಲಿರಲಿಲ್ಲ. ನನ್ನ ಅನೇಕ ಖಾಸಗಿ ಸಂಗತಿ ಅವನೊಡನೆ ಚರ್ಚಿಸುತ್ತಿದ್ದೆ. ಸಮಾಧಾನ ಪಡೆಯುತ್ತಿದ್ದೆ. ಅವನ ತಂದೆ ಆಯುರ್ವೇದದ ಪುಣೆಯ ಫಾರ್ಮಸಿ--ಆಯುರ್ವೇದ ಅರ್ಕಶಾಲಾ--ಕೊಪ್ಪಿಕರ್ ರಸ್ತೆಯಲ್ಲಿತ್ತು--ಅಲ್ಲಿ ಕೆಲಸಕ್ಕಿದ್ದರು.ರಮೇಶನಿಗೆ ತಮ್ಮನಿದ್ದ. ಕಿಲ್ಲೆಯಲ್ಲಿ ಹಳೆಯ ಕಾಲದ ಮನೆ. ಬಾದಾಮಿನಗರದಲ್ಲಿ
ರಮೇಶನ ತಂದೆ ಈ ಹಿಂದ ಪ್ಲಾಟ್ ಖರೀದಿಸಿದ್ದು. ಅವರು ಅಲ್ಲಿ ಮನೆ ಕಟ್ಟಿದ್ದು, ಅವನ ಮದುವೆ,ಹಾಗೂ ಮುದ್ದಾದ
ಮಗಳನ್ನೆತ್ತಿಕೊಂಡು ಅವ ತಿರುಗಾಡಿದ್ದು ಎಲ್ಲ ಭಾಳ ವೇಗದಾಗ ಆಗಿ ಹೋದ್ವು. ಅವನ ಮನೆ ಫರ್ನೀಚರ್ ಖರೀದಿ,
ಟಿವಿ ಖರೀದಿ ಹೀಗೆ ನಾ ಹಲವು ಕಾರ್ಯದಲ್ಲಿ ಭಾಗಿಯಾಗಿದ್ದೆ. ಅಂತೆಯೇ ನನ್ನ ಮಗಳ ನಾಮಕರಣ,ಹುಟ್ಟಿದ ಹಬ್ಬ
ಹೀಗೆ ಅವನೂ ನನ್ನ ಸಂತೋಷದಲ್ಲಿ ಭಾಗಿಯಾಗಿದ್ದ.

ಬರೀ ಅವನ ಗುಣಗಾನ ಮಾಡಲಾರೆ.ಸ್ವಲ್ಪ ದುಸ್ಸಾಹಸಿ ಕೂಡ. ವಿಪರೀತ ಬೆವರುತ್ತಿದ್ದ, ಬೈಕ್ ಖರಿದೀಸಿ ಒಂದೆರಡು
ಚಿಕ್ಕ ಅಪಘಾತ ಮಾಡಿದರೂ ಹುಮ್ಮಸ್ಸಿನಿಂದ ಓಡಿಸುತ್ತಿದ್ದ. ಅನೇಕವೇಳೆ ಅವನ ಬೈಕ್ ಹಿಂದೆ ಕುಳಿತಿದ್ದೆ--ಜೀವ ಕೈಯಲ್ಲಿ ಹಿಡಕೊಂಡು. ಒಂಥರಾ ಮೂಡಿ ಮನುಷ್ಯ.ಒಮ್ಮೆಲೆ ಗರಮ್ ಆಗುತ್ತಿದ್ದ ಮರುದಿನ ಸಾರಿ ಕೇಳುತ್ತ ಎಲ್ಲ
ಮರೆಯುತ್ತಿದ್ದ. ನಾ ಬ್ಯಾಂಕ್ ನೌಕರಿ ಬಿಟ್ಟು ಬೆಂಗಳೂರು ಸೇರುವ ವಿಷಯ ಅವನಿಗೆ ಬೇಜಾರು ತಂದಿತ್ತು. ಆದರೂ
ಹೊರಡುವ ದಿನ ಸ್ಟೇಶನ್ನಿಗೆ ಬಂದಿದ್ದ. ಆಮೇಲೂ ಫೋನ್, ಎಸ್ಸೆಮೆಸ್, ಹೀಗೆ ಚಾಲೂ ಇದ್ದವು. ನಡುವೆ ಹುಬ್ಬಳ್ಳಿಗೆ
ಹೋದಾಗ ಭೇಟಿನೂ ಆಗಿತ್ತು.

ಹೋದವರ್ಷವಿಡೀ ಅವನ ಬಗ್ಗೆ ಬೇರೆಬೇರೆಯವರಿಂದ ಥರಥರದ ಸುದ್ದಿ ಕೇಳಿದೆ. ಅವನನ್ನು ಈ ಬಗ್ಗೆ ಕೇಳಬೇಕು
ಸಮಾಧಾನ ಹೇಳಬೇಕು ಇದು ಹಂಬಲವಾಗಿಯೇ ಉಳಿಯಿತು.ವಿಷಯ ತೀರ ವೈಯುಕ್ತಿಕವಾಗಿತ್ತು. ಹೀಗಾಗಿ ಕೆದಕಲು ನನಗೂ ಪೂರ್ತಿ ಮನಸ್ಸಿರಲಿಲ್ಲ.ಒಂದು ವೇಳೆ ನಾ ಚರ್ಚಿಸಿದ್ದಿದ್ದರೆ ಒಳ್ಳೆಯದಿತ್ತೇನೋ ಹೀಗೂ ವಿಚಾರ
ಬಂದಿತ್ತು. ೨೦೧೦ ರ ದೀಪಾವಳಿ---ನರಕ ಚತುರ್ದಶಿ--ದಿನ ಅವನೊಡನೆ ಕೊನೆ ಬಾರಿ ಮಾತಾಡಿದ್ದೆ.
ನಾವು ಕರೆದಾಗ ಕೊಸರಾಡಿ ಕೊಸರಾಡಿ ಬಂದರೂ ಉಪದೇಶ ಹೇಳಿ ಪಾರ್ಟಿಯ ಮಜಾ ಕೆಡಿಸುತ್ತಿದ್ದ ರಮೇಶ
ಕುಡಿತಕ್ಕೆ ದಾಸ ಅಂತ ಹೇಳಲಾಗದಿದ್ದರೂ ವಿಪರೀತ ಕುಡಿಯುತ್ತಿದ್ದನಂತೆ. ಜೀವನ ಅನೇಕ ಸವಾಲು ಒಡ್ಡುತ್ತದೆ
ಹೇಗೆ ಎದುರಿಸಬೇಕು ಹಿಮ್ಮೆಟ್ಟಿಸಬೇಕು ಇದನ್ನು ಉಪದೇಶಿಸುವುದು ಸುಲಭ ಆದರೆ ಸ್ವತಃ ಸವಾಲಿಗೆ ಎದೆಯೊಡ್ಡುವುದು ಹಗುರಲ್ಲ.ರಮೇಶನೂ ಈ ಸ್ಥಿತಿ ಅನುಭವಿಸಿದ್ದ. ಸವಾಲು ಎದುರಿಸದೇ ಕುಗ್ಗಿದ್ದ.
ಅವ ಯಾವಾಗಲೂ ಹೇಳುತ್ತಿದ್ದ ಮಾತು "ಐಕಾವೆ ಜಗಾಚೆ ಕರಾವೆ ಮನಾಚೆ" ಅದನ್ನು ಅವ ಯಾಕೆ ಪಾಲಿಸಿದನೋ
ಗೊತ್ತಾಗಲೇ ಇಲ್ಲ.


ಅಪಘಾತ ನೆವವೇ,  ಸಾವಿಗೆ ನೆನಪೂ ಬೂದಿಮಾಡುವ ಶಕ್ತಿ ಇದೆಯೇ...?

7 comments:

  1. ದೇಸಾಯರ,
    ಮನಕ್ಕೆ ಹತ್ತಿರವಾದವರನ್ನು..ಅವರು ಬಳಗದವರೇ ಆಗಿರಲಿ, ಗೆಳೆಯರೇ ಆಗಿರಲಿ...
    ಕಳೆದುಕೊಳ್ಳುವದು ತುಂಬ ದುಃಖದ ಸಂಗತಿ. ಇದು ಕೊನೆಯವರೆಗಿನ ನೋವು. ನಿಮಗೆ ಸಮಾಧಾನ ಹೇಳಲು ಆದೀತೆ?
    ನಾನೂ ಸಹ ನಿಮ್ಮಂತೆಯೇ ಮಿತ್ರದುಃಖಭಾಗಿ.

    ReplyDelete
  2. "ಜೀವನ ಅನೇಕ ಸವಾಲು ಒಡ್ಡುತ್ತದೆ. ಹೇಗೆ ಎದುರಿಸಬೇಕು ಹಿಮ್ಮೆಟ್ಟಿಸಬೇಕು ಇದನ್ನು ಉಪದೇಶಿಸುವುದು ಸುಲಭ ಆದರೆ, ಸ್ವತಃ ಸವಾಲಿಗೆ ಎದೆಯೊಡ್ಡುವುದು ಹಗುರಲ್ಲ."
    ದೇಸಾಯಿಯವರೇ.. ಇದು, ನನಗೆ ಬಹಳ ಬಾರಿ ಅನ್ನಿಸಿದೆ.. ಸದಾ ಇದರ ಬಗ್ಗೆ ಯೋಚನೆ ಮಾಡುತ್ತಿರುತ್ತೇನೆ.. ನಿಮ್ಮ ಸ್ನೇಹಿತನ ರೀತಿಯಲ್ಲಿ, ನನ್ನ ನಾ ಕಳಕೊಳ್ಳಬಾರದು, ನನ್ನ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಅಂತ ನಾನು ಬಹಳನೇ ಪ್ರಯತ್ನ ಮಾಡ್ತಾನೇ ಇರುತ್ತೇನೆ.. ನೀವೆಂದಂತೆ ಅದು ಸಲೀಸಲ್ಲ..

    ನಿಮ್ಮೊಲವಿನ,
    ಸತ್ಯ.. :)

    ReplyDelete
  3. ಉಮೇಶ್ ಸರ್,

    ನಮಗೆ ಹತ್ತಿರವಾದ ಗೆಳೆಯರನ್ನು ಕಳೆದುಕೊಂಡಾಗ ಆ ನೋವು ಬರಿಸಲು ಸಾಧ್ಯವಾಗದು..ನಿಮಗೆ ಆ ಶಕ್ತಿ ಬರಲಿ..ಗೆಳೆಯನ ಆತ್ಮಕ್ಕೆ ಶಾಂತಿ ಸಿಗಲಿ..

    ReplyDelete
  4. Aatana aatmakke shaanti sigali.. Dukha bharisuva shakti aatana maneyavarige devaru karunisali..

    ReplyDelete
  5. avara aatmakke shaanti sigali...
    mitrana agalikeyinda hora banni...

    ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......

    ReplyDelete
  6. avara aathmakke shaanti sigali...hattiradavarannu kaledukondaaga nijavaagalu besaravaaguttade...

    ReplyDelete
  7. Desai sir,

    namma hridayakke hattiravaagiddavara agalike tumbaa dukhavannu needuttade..Nimage aa dukhavannu tadedukolluva shaktiyannu deveru karunisali..Nimma snehitana aatmakke shaanti sigali..

    ReplyDelete