ಇದೊಂಥರಾ ಭಾವ ಸಂಗಮ.ನನ್ನ ತಮ್ಮ ಚಾರುದತ್ತ ದೇಸಾಯಿಗೂ ಈ ಕತೆ ಕವಿತೆ ಬರೆಯುವ ಹುಚ್ಚಿದೆ
ಅವ ಕೆಲಸ ಮಾಡುವ ಬಿಇಎಲ್ ನ ಕನ್ನಡ ಸಂಘದ ಉತ್ಸಾಹಿ ಸದಸ್ಯ . ಈಗಾಗಲೆ ಅನೇಕ ಕತೆ ಕವಿತೆ ಬರೆದಿದ್ದಾನೆ
ಆದರೆ ಪ್ರಕಟಣೆಗೆ ಕಳಿಸಿಕೊಟ್ಟಿಲ್ಲ. ಹೀಗೆ ಅವ ಬರೆದ ಈ ಹಿಂದಿ ಕವಿತೆಯ ಪ್ರತಿ ನನಗೆ ಕಳಿಸಿಕೊಟ್ಟಿದ್ದ. ಓದಿ ನೋಡಿದ
ನಾನು ಅದನ್ನು ಕನ್ನಡದಲ್ಲಿ ಅನುವಾದಿಸಲು ಹರಸಾಹಸ ಪಟ್ಟೆ ವಿಫಲತೆಯಿಂದ ಕಂಗೆಟ್ಟು ಶ್ರೀ ಪರಾಂಜಪೆ ಅವರ
ಮೊರೆ ಹೋದೆ . ಪ್ರತಿಭಾಶಾಲಿ ಪರಾಂಜಪೆ ಅವರು ಸರಾಗವಾಗಿ ಭಾವಾನುವಾದ ಮಾಡಿಕೊಟ್ಟರು.
ಪ್ರಸ್ತುತ ಕವಿತೆಯ ಕೊನೆಯ ಪ್ಯಾರಾ ಮಾತ್ರ ನನ್ನದು ಉಳಿದೆಲ್ಲ ಶ್ರೀ ಪರಾಂಜಪೆ ಅವರದು.
ಈ ಇಬ್ಬರ ಪ್ರತಿಭಾ ಸಂಗಮಕ್ಕೆ ನನ್ನ ಬ್ಲಾಗು ವೇದಿಕೆಯಾಗಿದೆ ಇದು ನನ್ನ ಸೌಭಾಗ್ಯ.
मां
------------
लॊगॊंकॊ इतनाहि पता है के आप हमारी माता हो
मेरे लिये तुम जीवनदाई बस एक मात्र ही देवी हॊ
धन्य हूं मै इस जीवन से तॊ श्रेय तुम्हे ही जाता है
मुझ मे जॊ प्रेम कि धारा वो कल-बल तुम ही से बहति है
ऐसा कुछ-कुछ लगता है पर, तुम इससे अधिक कुछ और ही हॊ..
पद्मिनि,सीता, सावित्रि नहि, मेरे लिये झांसि रानि है वो
पीठ पे हम को बांध के हसते, जीवन से कि थि लढाई वॊ
ऐसा कुछ - कुछ लगता है पर ,तुम इससे अधिक कुछ और हि हॊ
बनी रहि वो नीलकंठ जीवन का विष पी पी कर
भूल के हसदी सारे दुःखों कॊ अपनॊंकॊ हसता देख कर
ऎसा कुछ - कुछ लगता है पर,तुम इससे अधिक कुछ और ही हॊ
यार, दॊस्त,भारत भूमि, चंद्रमा और धरती माता
जब भि इनके प्यार कॊ पाऊं तेरा ही चेहरा याद है आता
ऎसा कुछ-कुछ लगता है पर, तुम इससे अधिक कुछ और ही हॊ
तेरे प्यार पाकर तॊ कॊइ कृष्ण बने या शीवाजी
कमी है मेरे कॊशिश मे, पर प्यार मे तेरा क्मी नहीं
ऎसा कुछ-कुछ लगता है पर, तुम इससे अधिक कुछ और ही हॊ
झॊली मेरी भर आती है अक्षय तॆरा प्यार है
तू तॊ बस देने मे खुश हॊ, क्भी तॊ मेरि बारी है
ऎसा कुछ-कुछ लगता है पर, तुम इससे अधिक कुछ और ही हॊ
अगले जनम मे पॊती बन जाओ, तुझे भि खिलता देख सकूं
तॆरा ही लाड-प्यार तुह्मि कॊ दॆकर, मै दुनिया से चलता बनू
ऎसा कुछ-कुछ लगता है पर, तुम इससे अधिक कुछ और ही हॊ
कवी : चारूदत्त दॆसाई
ಅಮ್ಮ
-------
ಲೋಕದ ಕಣ್ಣಿಗೆ ನೀನು ನನ್ನ ತಾಯಿ
ವಾಸ್ತವದಲ್ಲಿ ನೀನೆನಗೆ ಮಹದಾಯಿ
ನನ್ನೆಲ್ಲ ಶ್ರೇಯ ನಿನ್ನ ಪರಿಶ್ರಮದ ಫಲ
ನನ್ನೊಳಗಿರುವ ಸತ್ವ ನಿನ್ನ ಬದುಕಿನ ತತ್ವ
ಸೀತೆ ಸಾವಿತ್ರಿ ಝಾನ್ಸಿ ರಾಣಿ ಎಲ್ಲ ನೀನೇ
ನನ್ನ ಪಾಲಿಗೆ ಬೇರೊ೦ದು ದೈವವ ಕಾಣೆ
ನೀಲಕ೦ಠನ೦ತೆ ವಿಷವ ಹೀರಿ ಬದುಕಿದ್ದೆ
ದುಃಖದ ನಡುವೆಯೂ ನಗುತ ಸುಖವಿತ್ತೆ
ಭೂತಾಯಿ, ದೇಶ, ಭಾಷೆ ಮತ್ತು ಪ್ರಿಯಮಿತ್ರ
ಕಂಡಾಗಲೆಲ್ಲ ಮನದೆ ಮೂಡುವುದು ನಿನ್ನ ಚಿತ್ರ
ಕೃಷ್ಣ /ಶಿವಾಜಿ ಯ೦ಥ ಮಹಾಮಹಿಮರು
ನಿನ್ನ ಪ್ರೀತಿಯಿಲ್ಲದೆ ಅವರ್ಯಾರು ಭುವಿಗೆ ಬಾರರು
ನಿನ್ನ ಪ್ರೀತಿ ಅಕ್ಷಯ ನಿನ್ನ ಮಮತೆ ಅನುಪಮ
ಸ್ವಲ್ಪ ಶ್ರಮವ ಹಾಕಿದಲ್ಲಿ ನನ್ನ ಬಾಳು ಸುಗಮ
ಪ್ರೀತಿ ಮೊಗೆದು ಹಂಚುವಲ್ಲಿ ನಿನಗೆ ಇಲ್ಲ ಸರಿಸಮ
ನನ್ನ ಶ್ರೇಯ ಸಾಧನೆಯಲಿ ನಿನ್ನ ಪಾಲು ಮಹತ್ತಮ
ಮುಂದಿನ ಜನುಮದಲಿ ಮೊಮ್ಮಗಳಾಗಿ ಬಾರಮ್ಮ
ಹೂಎಸಳಿನ ಪಾದ ಸವರಿ ಧನ್ಯನಾಗುವೆನಮ್ಮ..
ನೀ ಉಣ್ಣಿಸಿದ ಅಮೃತದ ಋಣ ಹಾಗಾದರೂ ತೀರಲಮ್ಮ.
ನೀ ಅರಳುವುದ ನೋಡಿ ಮುದಿಮನ ಹಿಗ್ಗಲಮ್ಮ.
ಭಾವಾನುವಾದ --- ಪರಾಂಜಪೆ
Saturday, September 25, 2010
Sunday, September 12, 2010
"ಮಾಮರವೆಲ್ಲೊ ಕೋಗಿಲೆ ಎಲ್ಲೋ.."

ಉದಯಶಂಕರ್ ಬರೆದ ಬಾಲು ಅವರಿಗೆ ಕನ್ನಡದಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟ್
ಗೀತೆ ಇದು.ತುಂಬಾ ಜನಪ್ರಿಯವೂ ಆಗಿತ್ತು. ಈ ಹಿಂದೆಯೂ ಅನೇಕ ಮಹನೀಯರು ತಮ್ಮ ಕಂಠಸಿರಿಯಿಂದ
ನಮ್ಮ ಕನ್ನಡ ಸಿನೇಮಾಕ್ಕೆ ಸೇವೆ ಸಲ್ಲಿಸಿದ್ರು. ಅದು ಟಿ.ಎಮ್ ಸೌಂದರ್ ರಾಜನ್ , ಪೀಠಾಪುರಂ, ಘಂಟಸಾಲ
ಅಥವಾ ಶಿರ್ಕಾಳಿ ಗೋವಿಂದರಾಜನ್ ("ರಾಮನ ಅವತಾರ.." ಹಾಡು ನೆನಪಿದೆಯೇ) ಈ ಎಲ್ಲ ಮಹನೀಯರಲ್ಲಿ
ಒಂದು ವಿಷಯ ಸಾಮಾನ್ಯ ಅಂದರೆ ಇವರಾರಿಗೂ ಕನ್ನಡ ಸುಲಲಿತವಾಗಿ ಬರುತಿರಲಿಲ್ಲ ಆದ್ರೂ ಇವರು ಕನ್ನಡದಲ್ಲಿ
ಹಾಡಿದರು ಕರ್ನಾಟಕದ ಜನ ಮೆಚ್ಚಿಕೊಂಡ್ರು ಕೂಡ..! ಹಳೆ ಹಾಡು ಹಾಗೆಯೇ ಮೆಲುಕು ಹಾಕಿರಿ ಇವರು ಹಾಡಿದ
ಹಾಡುಗಳಲ್ಲಿ ಕನ್ನಡತನ ಇಣುಕುತ್ತದೆಯೇ....ಆದರೂ ಇವರು ಹಾಡಿದ ಗೀತೆಗಳು ಜನಪ್ರಿಯ ಆದವು. ಅದರಲ್ಲಿ
ಘಂಟಸಾಲ ಅಂತೂ ಕನ್ನಡದ ಮಟ್ಟಿಗೆ ಸೂಪರ್ ಸಿಂಗರ್. ಪಿ.ಬಿ.ಶ್ರೀನಿವಾಸ್ ಬಂದಾಗ ಮಾತ್ರ ಘಂಟಸಾಲ ಸ್ಥಾನ
ಸ್ವಲ್ಪ ಅಲುಗಾಡಿತು.ಪಿಬಿಎಸ್ ರ ಒಂದು ಉತ್ತಮ ಗುಣ ಅಂದರೆ ಸ್ಪಷ್ಟ ಉಚ್ಚಾರ ಹಾಗೂ ಅಗತ್ಯ ಬಿದ್ದ ಕಡೆ ಮಾಡುತ್ತಿದ್ದ " ಶಬ್ದಫೇಕ್". ರಾಜಕುಮಾರ ಶರೀರ ವಾದರೆ ಪಿಬಿಎಸ್ ಶಾರೀರ ಅನ್ನುವ ಮಟ್ಟಿಗೆ ಪ್ರಸಿದ್ಧಿಯಾದರು.
ಪಿಬಿಎಸ್ ಒಂಥರಾ ಸಮುದ್ರ ಇದ್ದ ಹಾಗೆ ಯಾಕೆಂದರೆ ಅವರಿಗೆ ಕನ್ನಡವಲ್ಲದೆ ಬೇರೆ ಭಾಷೆ ಸಹ ಸಲೀಸಾಗಿ ಬರುತ್ತಿದ್ದವು. ಅವರನ್ನು ಕನ್ನಡದ ಮೊದಲ ಹಿನ್ನೆಲೆ ಗಾಯಕ ಅನ್ನಬಹುದೇನೋ ಯಾಕೆಂದರೆ ಅವರಿಂದ ಹೊಮ್ಮಿದ
ಕನ್ನಡ ಸುಲಲಿತವೂ ಕೇಳಲು ಹಿತಕರವೂ ಆಗಿತ್ತು. ೬೦ರ ದಶಕ ಮುಗಿಯುತ್ತಿದ್ದ ವೇಳೆ ಕನ್ನಡಕ್ಕೆ ಇನ್ನೊಬ್ಬ ಪರಭಾಷಾ ಗಾಯಕ ಪರಿಚಯವಾದ. ಅವರೇ ಎಸ್ ಪಿ ಬಾಲಸುಬ್ರಹ್ಮಣ್ಯಂ....!
ನಾ ಸಣ್ಣವನಿದ್ದಾಗ ಧಾರವಾಡ ಸ್ಟೇಶನ್ನಿನ ಅಭಿಲಾಶಾ ಕಾರ್ಯಕ್ರಮ ಕೇಳುತ್ತಿದ್ದೆ. ಆಗೆಲ್ಲ ಅವಾಗಿನ ಹಿಟ್ ಹಾಡುಗಳಾದ " ಬಾಜಿ ಕಟ್ಟಿ ನೋಡು ಬಾರಾ", "ನಮ್ಮೂರ್ನಾಗ್ ನಾನೊಬ್ನೆ ಜಾಣ.." ,"ನಮ್ಮ
ಸಂಸಾರ ಆನಂದ ಸಾಗರ" ಹೀಗೆ ಹಾಡು ಕೇಳಿಬರುತ್ತಿದ್ದವು. ಒಂದು ವಿಶೇಷ ಅಂದರೆ ಮೇಲಿನ ಎಲ್ಲ ಹಾಡುಗಳಲ್ಲಿ
ಎಸ್ಪಿಬಿ ದನಿಯಿತ್ತು ಮತ್ತು ಆ ದನಿ ಕೇಳಲು ವಿಚಿತ್ರ ಅನಿಸುತ್ತಿತ್ತು.ಕನ್ನಡ ಬಹಳ ಕಷ್ಟಪಟ್ಟು ಹಾಡಿದ ಹಾಗೆ... ಕನ್ನಡ
ಸಿನೇಮಾ ಒಂಥರಾ ಕವಲಿನಲ್ಲಿತ್ತು ರಾಜಕುಮಾರ್ ಗೆ ನಿಧಾನವಾಗಿ ಸ್ಫರ್ಧಿಗಳು ಸಿಗಲಾರಂಭಿಸಿದ್ದರು. ವಿಷ್ಣು, ಶ್ರೀನಾಥ ಹೀಗೆ ಬೇರೆ ನಾಯಕರು ಬಂದರು. ಪಿಬಿಎಸ್ ಅವರಿಗೂ ದನಿ ಕೊಟ್ಟಿದ್ದರು ಹೊತೆಗೆ ಎಸ್ಪಿಬಿ ಅವರಿಂದಲೂ
ಹಾಡು ಹಾಡಿಸಿದರು."ಹಾವಿನ ದ್ವೇಷ ಹನ್ನೆರಡು ವರುಶ" ಹಾಡು ಹಿಟ್ ಆಯಿತು .ಎಸ್ಪಿಬಿ ಪರ್ಯಾಯ ದನಿಯಾಗಿ
ಹೊರಹೊಮ್ಮಿದರು.ಅವರಿಗೆ ಸಿಕ್ಕ ದೊಡ್ಡ ಬ್ರೇಕ್ ಅಂದರೆ "ಮಾಮರವೆಲ್ಲೋ.." ಹಾಡು. ರಾಜನ್ -ನಾಗೇಂದ್ರ ಮತ್ತು
ಎಸ್ಪಿಬಿ ಕಾಂಬಿನೇಶನ್ ಜನಪ್ರಿಯ ಆತು. ಅವರ ಜೋಡಿತನದಲ್ಲಿ ಬಂದ ಹಾಡುಗಳ ಪಟ್ಟಿಯಲ್ಲಿ ಕೆಲವು..
"ಆಸೆಯ ಭಾವ..", "ಚೆಲುವೆ ಎಲ್ಲಿರುವೆ...", "ನೋಟದಾಗೆ ನಗೆಯ ಮೀಟಿ.." ಹೀಗೆ ಎಸ್ಪಿಬಿ ಕನ್ನಡದಲ್ಲಿ ಬಲವಾಗಿ
ಬೇರೂರಲು ಕಾರಣಕರ್ತರು. ಈ ಮಾತು ಎಸ್ಪಿಬಿ ಅವರೂ ಒಪ್ಪಿಕೊಳ್ಳುತ್ತಾರೆ. ಎಸ್ಪಿಬಿ ದನಿಯಲ್ಲಿ modulation ಇತ್ತು..ಯಾವಹಿರೋ ಮೇಲೆ ಹಾಡು ಚಿತ್ರಿತವಾಗುತ್ತದೆ ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ದನಿ ಪರಿವರ್ತಿತವಾಗುತ್ತಿತ್ತು. ಹಾಗೆಂದು "ಆಫ್ ಬೀಟ್ " ಹಾಡುಗಳೂ ಅವರ ಕಂಠದಲ್ಲಿ ಸುಲಲಿತವಾಗಿ ಬರುತ್ತಿದ್ದವು.
"ಎಂಥಾ ಮರುಳಯ್ಯಾ ಇದು..","ನಮ್ಮೂರ ಮಂದಾರ ಹೂವೆ.."," ಎಲ್ಲಿದ್ದೆ ಇಲ್ಲಿ ತಂಕ.." . ಎಸ್ಪಿಬಿ ಅಭಿಜಾತಪ್ರತಿಭೆ.
ಇವರ ಜೊತೆಗೆ ಅನೇಕ ಹೊರಗಾಯಕರು ಬಂದರು--ಜೇಸುದಾಸ್, ಜಯಚಂದ್ರನ್, ಮಲೇಶ್ಯಾ ವಾಸುದೇವನ್ ಹೀಗೆ.
ನನ್ನ ಈ ಲೇಖನದ ಉದ್ದೇಶ ಬೇರೆ. ಈಗ ನಮ್ಮ ಕನ್ನಡ ಚಿತ್ರರಂಗ ಎಪ್ಪತ್ತೈದು ವರುಶ ಮುಗಿಸಿದೆ.
ಅನೇಕ ರೀತಿಯಲ್ಲಿ ಬದಲಾವಣೆ ಆಗಿದೆ.ಸಿನೇಮಾ ಈಗ ಒಂದು ದೊಡ್ಡ ಉದ್ಯಮವಾಗಿದೆ ಕೋಟಿ ಕೋಟಿ ಹಣ ಹರಿಯುತ್ತಿದೆ.ನಮ್ಮತನ ಮಾಯವಾಗಿದೆ. ನಾವು ನಮ್ಮ ಮಣ್ಣಸೊಗಡನ್ನು ಎಂದಿಗೂ ಬೆಳೆಯಗೊಡಲೇ ಇಲ್ಲ.ಹೀಗೆ
ಹಾಗೆ ನೆವ ಹೇಳಿ ಇಲ್ಲಿಯ ಸ್ವಪ್ರತಿಭೆಗಳನ್ನು ಚಿವುಟುತ್ತಲೇ ಇದ್ದೇವೆ.ಇತ್ತೀಚೆಗೆ ಅಂತೂ ಇದು ವಿಪರೀತ ಮಟ್ಟಕ್ಕೆ
ಹೋಗಿದೆ . ನಮ್ಮ ಪ್ರತಿಭೆಗಳು ಪ್ರೋತ್ಸಾಹ ಇಲ್ಲದೆ ಸೊರಗುತ್ತ ಇವೆ.ಅದೇನೋ ಅಂತಾರಲ್ಲ ಕಲೆಗೆ ಭಾಶೆಯ ಪರಿಮಿತಿ ಇಲ್ಲ ನಿಜವೇ ಆದರೆ ಭಾಶೆ
ಗೊತ್ತಿರದ ಉಚ್ಚಾರ ಮಾಡಲುಬಾರದ ಕಲಾವಿದರ ಕಡೆ ಕನ್ನಡ ಹಾಡು ಹಾಡಿಸುವುದು ಯಾವ ನ್ಯಾಯ?
ಈ ಹಿಂದೆ "ತಿರುಗುಬಾಣ" ಎಂಬ ಚಿತ್ರ ಬಂದಿತ್ತು ಅದರಲ್ಲಿ ಕನ್ನಡ ನಾಡಿನ ಹಿರಿಮೆಸಾರುವ " ಇದೇ ನಾಡು ಇದೇ ಭಾಶೆ..." ಅನ್ನುವ ಹಾಡಿತ್ತು.
ಲಂಕೇಶ್ ಪತ್ರಿಕೆಯಲ್ಲಿ ಈ ಹಾಡು ಪ್ರಸ್ತಾಪಿಸಿ ಈ ಹಾದು ಹಾಡಿದ ಎಸ್ಪಿಬಿ ತೆಲುಗರು ಎಂದು ಹೇಳಲಾಗಿತ್ತು.ಆ ಒಂದು ಕೆಟ್ಟ ಟ್ರೆಂಡ್ ಹಲವು
ಚಿತ್ರಗಳಲ್ಲಿ ಮುಂದುವರೆದಿದೆ. ಎಲ್ಲೋ ಪುಟ್ಟಣ್ಣ ಅಂಥವರು ಕನ್ನಡದ ಅಪ್ಪಟ ಪ್ರತಿಭೆಗಳಾದ ಸುಮಿತ್ರ, ಛಾಯಾ, ಕಸ್ತೂರಿ ಶಂಕರ್ ಇವರಿಗೆ ಚಾನ್ಸು
ಕೊಟ್ಟು ಪ್ರೋತ್ಸಾಹಿಸಿದ್ದರು.ಹೆಚ್ಚಿನ ಸಿನೇಮಾದವರಿಗೆ ಇಲ್ಲಿಯ ಸಂಸ್ಕೃತಿ ,ಇಲ್ಲಿಯ ಭಾಶೆಯ ಸೊಗಡು ಬೇಕಾಗಿಲ್ಲ. ಗೆಲ್ಲುವ ಕುದುರೆ ಮೇಲೆ ಹಣಸುರಿಯಲು
ಅವರು ತಯಾರು . ಅವರಿಗೆ ಕಿವಿ ಹಿಂಡಿ ಬುದ್ಧಿಮಾತು ಹೇಳುವ ಧೈರ್ಯ ಸಂಗೀತ ನಿರ್ದೇಶಕರಿಗಿಲ್ಲ ಅಂತೇಯೇ ಈಗ ಉದಿತ್ ನಾರಾಯಣ,ಹರಿಹರನ್ ,
ಸೋನು ನಿಗಮ್ ,ಶ್ರೇಯಾ ಘೋಶಾಲ್ , ಕೈಲಾಶ್ ಖೇರ್ ರ ಕಾರುಬಾರು. ಹರಿಹರನ್ ಅಂಥವರು "ಬಲೆಕಲೆ" ಎಂಬ ಶಬ್ದ ವನ್ನು "ಬಲೈ ಕಲೈ" ಅಂತ
ಹಾಡಿದರೂ ತಲೆದೂಗುವ ನಿರ್ದೇಶಕರಿದ್ದಾರೆ.ಕೇಳುಗನ ಪಾಡು ದೇವರಿಗೆ ಪ್ರೀತಿ. ಇನ್ನೊಂದು ಆಮದು ಪ್ರತಿಭೆ ಇದೆ ಅದೇ ಕುನಾಲ್ ಗಾಂಜಾವಾಲಾ
ರಾಜಕುಮಾರ್ ಇವರ ದನಿಮೆಚ್ಚಿಕೊಂಡಿದ್ದರು ಎಂದು ಹೇಳಲಾಗುತ್ತದೆ. ನಿಜವೇ ಇದು ಪ್ರಶ್ನೆ. ಮೇಲೆ ನಮೂದಿಸಿದ ಮಹಾನ್ ಆಮದು ಕಲಾವಿದರ ಎದಿರು
ನಮ್ಮ ಸ್ವಂತದ ಪ್ರತಿಭೆಗಳಾದ ರಾಜೇಶ್, ಹೇಮಂತ್ , ಶಾಸ್ತ್ರಿ, ಚಿನ್ಮಯ್ ಇವರೆಲ್ಲ ಟ್ರಾಕ್ ಹಾಡಿಗೆ ಮಾತ್ರ ಸೀಮಿತರಾಗಿದ್ದಾರೆ.
ಸ್ವಂತ ಪ್ರತಿಭೆಗಳನ್ನು ಕಡೆಗಣಿಸಿ ಆಮದು ಪ್ರತಿಭೆಗಳನ್ನು ತಲೆಮೇಲೆ ಮೆರೆಸಿದ ಕುಖ್ಯಾತಿ ಕನ್ನಡ ಚಿತ್ರರಂಗ ಬಿಟ್ಟರೆ ಬೇರೆ ಯಾವ ಭಾಶೆಗೂ ಇರಲಾರದು.
ಇಲ್ಲಿ ದೊಡ್ಡ ದೊಡ್ದ ಸ್ಟಾರ್ ಗಳಿದ್ದಾರೆ. ದುಡ್ಡು ಸುರಿಯಲು ನಿರ್ಮಾಪಕರಿದ್ದಾರೆ ಅವರಲ್ಲಿ ಅರಿವು ಮೂಡಬೇಕಾಗಿದೆ ನಮ್ಮವರನ್ನು ನಾವೇ ಕಡೆಗಣಿಸಬಾರದು
ಪ್ರತಿಭೆಯಲ್ಲಿ ಬಡತನವಿಲ್ಲ ಆದರೆ ಅವಕಾಶ ನೀಡುವ ದೊಡ್ಡತನ ಬೇಕು. ಆ ಅರಿವು ನಮ್ಮ ಕನ್ನಡಚಿತ್ರರಂಗಕ್ಕೆ ಬರಲಿ. ಇತ್ತಿಚೆಗೆ ಹಂಸಲೇಖ ಹಾಡಿಸಿದ
"ಒಂದು ಮಾಮರಾ ....ಚಿಂವ್ ಚಿಂವ ಗುಬ್ಬಿಯ ಗೂಡಲ್ಲಿ ಚಿಂವ್ ಚಿಂವಾ.." ನನ್ನ ಕಳಕಳಿ ಇಷ್ಟೇ ಮಾಮರದಲ್ಲಿ ಗುಬ್ಬಿ ಹಾಡಲಿ ಆದರೆ ಅಗುಬ್ಬಿ ಇಲ್ಲಿಯ
ಮಣ್ಣಿನದಾಗಿರಲಿ.....!
Saturday, September 4, 2010
ಕರಾಳ ಛಾಯೆ...

ಮತ್ತೊಮ್ಮೆ ಬಿಳಿ ತೊಗಲಿನ ಹೇಡನ್ ಅಬ್ಬರಿಸಿದ್ದಾನೆ..ಅಥರ್ಟನ್ ದನಿ ಸೇರಿಸಿದ್ದಾನೆ. ಅವರು ಟಾರ್ಗೆಟ್ ಮಾಡಿದ್ದು
ಭಾರತೀಯ ಉಪಖಂಡದವರನ್ನು .ಇವರ ಹಣೆಬರಹವೇ ಹೀಗೆ ಇದು ಅವರ ಮಾತಿನ ಸಾರಾಂಶ. ಅವರ ಕುಹಕಕ್ಕೆ
ಟೀಕೆಗೆ ತಕ್ಕಂತೆ ಪಾಕಿ ತ್ರಿವಳಿಗಳು ಕುಣಿದಿದ್ದಾರೆ. ಕ್ರಿಕೆಟ್ ಜಗತ್ತು ಮತ್ತೊಮ್ಮೆ ದಂಗು ಬಡೆದಿದೆ ನನ್ನಂಥ ಅದೆಷ್ಟೊ
ಅಭಿಮಾನಿಗಳು ಕಂಗಾಲಾಗಿದ್ದಾರೆ. ದುಡ್ಡು ತಗೊಂಡು ಆಡುವುದು ತಂಡ ಹೋಗಲಿ ದೇಶದ ಹಿತಾಸಕ್ತಿ ಸಹ ಅವರು
ಗಮನಿಸಲಿಲ್ಲ.ದುಡ್ಡು ಇಷ್ಟು ಮುಖ್ಯವೆ...?
ಈ ಮೂವರ ವರ್ತನೆಗೆ ಪಿಸಿಬಿ ತಲೆ ತಗ್ಗಿಸಬೇಕಾಗಿತ್ತು ಆದರೆ ಅದು ಭಾರತದ ಕೈವಾಡ ಇದೆ ಎಂಬ ಉಲಕೋಚಿತನದ ಹೇಳಿಕೆ ನೀಡುತ್ತಿದೆ.ಇದು ಮೂರ್ಖತನ ಅಲ್ಲದೇ ಮತ್ತೇನು ಅಂಗೈ ಹುಣ್ಣಿಗೇಕೆ ಕನ್ನಡಿ...?
ತನ್ನ ಮಾತು ಕೇಳುವ ಬಟ್ ನನ್ನು ಕಪ್ತಾನುಮಾಡಿದಾಗಲೆ ಅದು ಈ ಪ್ಲಾನ್ ಮಾಡಿತ್ತು ಈಗ ಪಿಸಿಬಿ ಜಗತ್ತಿನ ಇತರೇ
ಕ್ರಿಕೆಟ್ ಬೋರ್ಡಿಗೆ ಹೋಲಿಸಿದರೆ ಪಾಪರ್ ಹೀಗಾಗಿ ಅದು ಹಣ ಬಾಚಿಕೊಳ್ಳಲು ಈ ತಂತ್ರ ಹೂಡಿರಬಹುದು.
ಬುಕ್ಕಿ ಕೊಟ್ಟ ಹಣದಲ್ಲಿ ಪಿಸಿಬಿ ಯ ಶೇರು ಏನು ತ್ರಿವಳಿಗಳು ಬಾಯಿಬಿಡಬಹುದೇನೋ...!
ಏಸಿಯಾಕಪ್ ನಲ್ಲಿ ಅಮೀರ್ ಮೊಬೈಲ್ ನಲ್ಲಿ ಮಾತನಾಡುವಾಗ ಪಿಸಿಬಿ ಅವ ತನ್ನ ಹೆಲ್ಮೆಟ್ ಸರಿಪಡಿಸಿಕೊಳ್ಳುತ್ತಿದ್ದ ಎಂದು ತಿಪ್ಪೆ ಸಾರಿಸಿತ್ತು. ಸಿಡ್ನಿ ಯಲ್ಲಿ ಮ್ಯಾಚು ಅಂತೂ ಅಬ್ಬಬ್ಬಾ ಅದೆಷ್ಟು ಸಲ
ಬೇಕೂಂತಲೇ ಕ್ಯಾಚ್ ಬಿಡಬಹುದು..! ನೆಪಮಾತ್ರಕ್ಕೆ ವಿಚಾರಣೆ ಮಾಡಿ ಆಟಗಾರರನ್ನು ಆಜೀವ ಬಹಿಷ್ಕಾರ ಹಾಕುವ ನಾಟಕ ಆಡಲಾಯಿತು ಇವರ ವರ್ತನೆಗೆ ಬೇಜರಾದ ಯುಸುಫ್ ನಿವೃತ್ತಿ ಘೋಶಿಸಿದ .ಆದರೆ ಮತ್ತೆ
ಅವನ ಕಾಲು ಹಿಡಿದು ಮತ್ತೆ ಕರೆತರಲಾಯಿತು.
ಮೇಲಿನ ಎಲ್ಲ ಘಟನೆಗೆ ಕಲಶ ಪ್ರಾಯ ಎಂಬಂತೆ ನೋ ಬಾಲ್ ಹಗರಣ.ಈ ಮೀಡಿಯಾ ಅದೆಷ್ಟು ಶಕ್ತಿಶಾಲಿ ಅಂದರೆ ಏನೂ ಊಹಿಸಲು ಸಾಧ್ಯಇಲ್ಲ. ತ್ರಿವಳಿಗಳು ದುಡ್ಡುತಿಂದಿದ್ದಾರೆ ಸ್ವಲ್ಪ ಬೋರ್ಡಿನ ಬಾಯಿಗೂ ಮೆತ್ತಿದ್ದಾರೆ
ಎಲ್ಲ ಕೂಗಾಟ ಹಾರಾಟ ನಿಂತಿದೆ. ಲಾಕರ್ ನಲ್ಲಿ ದುಡ್ಡು ಸಿಕ್ಕಿ ಪ್ರಕರಣ ಅಂತ್ಯ ಕಂಡಿದೆ.ಆಜೀವ ನಿಷೇಧದ ಭೀತಿಯಲ್ಲಿದ್ದಾರೆ ತ್ರಿವಳಿಗಳು...! ದುಡ್ಡು ಎಷ್ಟು ದಿನಾ ಉಳಿಯುತ್ತದೆ ಗಳಿಸಿದ ಹೆಸರುಮಾತ್ರ ಧೂಳಾಗಿದೆ.
ಮೊಹ್ಮದ್ ಅಮೀರ್ ನಾ ಇತ್ತೀಚೆಗೆ ಬಹುವಾಗಿ ಮೆಚ್ಚಿಕೊಂಡ ಬಾಲರ್. ಅಗಾಧ ಪ್ರತಿಭಾವಂತಇನ್ನೂ ಮೀಸೆ ಸಹ ಮೂಡಿಲ್ಲ ಆದರೂ ಪ್ರಪಾತಕ್ಕೆ ಬಿದ್ದು ಬಿಟ್ಟಿದ್ದಾನೆ. ಮೇಲೆತ್ತಲು ಯಾರೂ ಮುಂದೆ ಬರುವುದಿಲ್ಲ
ತವರುನೆಲದಲ್ಲಿ ಆಡಲು ಪಾಕಿಸ್ತಾನಕ್ಕೆ ತಾಲಿಬಾನ್ ಕಾಟ ಬೇರೆಯವರ ನೆಲದಲ್ಲಿ "ಹೋಮ್ ಸಿರೀಸ್" ಆಡುವ
ಅನಿವಾರ್ಯತೆ. ಇಂಗ್ಲೆಂಡ್ ಆತಿಥ್ಯ ವಹಿಸಿತ್ತು ಕಾಂಗರೂಗಳ ನಡುವೆ ನಡೆದ ಪಂದ್ಯಗಳೂ ಸೊಗಸಾಗಿದ್ದವು.
ಆದರೆ ಉಂಡಮನೆಗೆ ಎರಡು ಬಗೆಯುವ ಪಾಕಿಸ್ತಾನದ ಹಳೇ ಚಾಳಿ..! ಸ್ವತಃ ಪಾಕಿಸ್ತಾನದಲ್ಲಿ ಅರಾಜಕತೆಇದೆ
ಮಹಾಪೂರ ಬಂದು ದೇಶ ದಿವಾಳಿಯ ಅಂಚಿನಲ್ಲಿದೆ ಮೇಲಾಗಿ ಈಗ ಇರೋದು ಪವಿತ್ರ ರಮಜಾನ್ ಮಾಸ ಬೇರೆ
ಆದರೆ ಇದಾವುದು ದುಡ್ಡು ಎಣಿಸೋವಾಗ ಅವರ ಅರಿವಿಗೆ ಬಂದಿಲ್ಲ ..! ಅದಕೆಂದೆ ದಾಸರು ಹಾಡಿದ್ದು
"ದುಗ್ಗಾಣಿ ಕೆಟ್ಟದು..." ಅಂತ. ಕ್ರಿಕೆಟ್ ಇಂತಹ ಕಲುಷಿತ ಜನರಿಂದ ಹಾಳಾಗುವುದಲ್ಲ ಅದರ ಶುಭ್ರತೆಗೆ ರಾಡಿ ರಾಚುವುದಿಲ್ಲ. ಸ್ವಾರ್ಥ ಸಾಧನೆಯೇ ಗುರಿಯಾಗಿಟ್ಟವ ಎಂದೂ "ಟೀಮ್" ಕಟ್ಟಲಾರ.
ಮತ್ತೊಮ್ಮೆ ಮಗದೊಮ್ಮೆ ಈ ಕಿರಾತಕ ತ್ರಿವಳಿಗೆ ಧಿಕ್ಕಾರ...!
Subscribe to:
Posts (Atom)