Saturday, May 8, 2010

ಅನುಭೂತಿ.


ತುಕ್ಕು ಹಿಡಿದು ಮೂಲೆ ಸೇರಿದ
ಟ್ರಂಕಿನಲಿ ಒಪ್ಪವಾಗಿ ಜೋಡಿಸಿಟ್ಟ
ಅವ್ವಳ ನೀಲಿ ಸೀರೆ..

ಕೈಗೆತ್ತಿಕೊಂಡಾಗಲೆಲ್ಲ ಭಾರದ
ಅರಿವಾಗುವುದಿದೆ..ನವಿರು ಸ್ಪರ್ಶ..
ತಲೆಗೂದಲಲ್ಲಿ ಅವ್ವ ಬೆರಳಾಡಿಸಿದಂತೆ..

ಆಗಾಗ ಸೀರೆ ಸವರುತ್ತೇನೆ..
ಆವರಿಸುತ್ತಾಳವಳು ಮೈ ತುಂಬ
ಈ ಸುಖಕ್ಕೆ ಅದಾವ ಒಡವೆ ವಸ್ತ ಸಾಟಿ..!

ಸೀರೆಯದು ಬತ್ತದ ಒರತೆ...
ಮೀಯುತ್ತೇನೆ...ನಾ ಮನದುಂಬಿ
ಅವ್ವಳ ತೊಡೆ ಮೇಲಾಡುವ ಕೂಸಾಗುತ್ತೇನೆ....