
೧) ವಿಚಿತ್ರ ದೃಶ್ಯವಿತ್ತಲ್ಲಿ...
ಮಧು ಇರಲಿಲ್ಲ..ಗಿಲಾಸಿಲ್ಲ..
ಆದರೂ ನಾ ಕುಡಿಯುತ್ತಿದ್ದೆ....
ನನ್ನ ಮುಂದೆ ನೀನಿದ್ದೆಯಲ್ಲ......!
೨) ನೊಂದ ಹೃದಯಗಳಿಗೆ
ಮಧುವೊಂದೆ ಸಾಲದು..
ಮಧುಶಾಲೆಯಲಿ..
ನಿನ್ನ ನಗೆಯ ಬೆಳಕೂ ಬೇಕು ಸಖಿ...!
೩) ಗುಡಿ ಗುಂಡಾರಗಳಲಿ
ಮಸೀದಿ ಮಠಗಳಲಿ...
ಶಾಂತಿ ಸಿಗುವಂತಿದ್ದರೆ....ಈ
ಮಧುಶಾಲೆಗೇಕೆ ಜನ
ಬರುತಿದ್ದರು.....?
೪) ವಿಪ್ಲವವದು..ಮಧು
ಬಟ್ಟಲಲಿ ತುಳುಕಿತೇಕೆ..
ಮಧು ಶಾಲೆಯಲೂ ನಿನ್ನ
ನೆನಪು ಬೆಂಬಿಡದೇಕೆ....?
೫) ಜಗದರಿವ ಮರೆಸುವ ಮಧು
ಬೇಡೆನಗೆ ಸಖಿ...
ಉಣ್ಣಿಸು ಮಧುವೊಂದ...
ಮನದಾಳದಿ ಇಳಿದ ಅವಳ
ನೆನಪು ಕೆದುಕುವಂತಹುದ.....!
೬) ನಾನಿಲ್ಲವಾದಾಗ ನನ್ನ ಗೋರಿ ಬಳಿ
ಬಂದು ಕಣ್ಣೀರಿಡಬೇಡ...
ಬರುವಿಯಾದರೆ ಮಧು ಬಟ್ಟಲ ತಾ
ಜೊತೆಗೆ...
ನರಕದಲಿ ಅದು ಸಿಗುವುದಿಲ್ಲ.....!