Monday, January 4, 2010

೩---ಈಡಿಯಟ್ಸ


ಈ ಚಿತ್ರ ನೋಡೋ ಉಮೇದಿತ್ತು.ಫ್ಯಾಮಿಲಿಜೊತೆ ಹೋಗಿದ್ದೆ.ವಿವಾದ ವಾದ
ಏನೆಲ್ಲ ಸುತ್ತು ವರೆದಿದ್ದವು ಈ ಚಿತ್ರದ ಸುತ್ತ. ರಾಜ್ ಹಿರಾನಿ--ವಿಧುಚೋಪ್ರಾ ಕಾಂಬಿನೇಷನ್ನನ ಎರಡು ಮುನ್ನಾಭಾಯಿ ಚಿತ್ರಗಳು ವಿಶೇಷವಾಗಿದ್ದವು. ಕಾಮೆಡಿ ಕತೆ ಹೇಳುತ್ತಲೇ ಬದುಕಿನ ಕರಾಳವಾಸ್ತವತೆ
ಯ ಚಿತ್ರಣ ತೆರೆದಿಡುವುದರಲ್ಲಿ ಹಿರಾನಿ ಎಕ್ಸಪರ್ಟ. ಇಲ್ಲಿ ಬದುಕಿನ ಜಂಜಡಗಳ ಪ್ರಸ್ತಾಪವಿದೆ ಆದರೆ
ಅದಕ್ಕಾಗಿ ಗೋಳಾಡುವ ಪಾತ್ರಗಳಿಲ್ಲ. ಬದಲು ಕಪ್ಪು ಕತ್ತಲೆಯಲ್ಲೂ ಮಿನುಗೋ ನಕ್ಷತ್ರ ಹುಡುಕೋ
ಪಾತ್ರಧಾರಿಗಳಿದ್ದಾರೆ. ಪ್ರಸ್ತುತ ಚಿತ್ರ ನಮ್ಮ ಶಿಕ್ಷಣವ್ಯವಸ್ಥೆ ಬಗ್ಗೆ ಹೇಳುತ್ತೆ. ಮಾರ್ಕು ಹೇಗೆ ಈಗಿನ
ಯುವಕರ ಮೂಲಮಂತ್ರವಾಗಿದೆ ಹೆಚ್ಚಿನ ಮಾರ್ಕು ತೆಗೆಯಲು ಏನೆಲ್ಲ ಒತ್ತಡ ಎದುರಿಸಬೇಕಾಗುತ್ತದೆ ಹೀಗೆ ಎಳೆ ಎಳೆಯಾಗಿ ಚಿತ್ರ ನಮ್ಮುಂದೆ ವಾಸ್ತವ ತೆರೆದಿಡುತ್ತದೆ. ಈಗಿನ
ಬಹುಪಾಲು ಯುವಕರ ಮುಂದಿರುವ ಎರಡು ಗೋಲುಗಳು ವೈದ್ಯನಾಗೋದು,ಇಂಜಿನೀಯರ್
ಆಗೋದು ಅಮೆರಿಕಾಕ್ಕೆ ಹೋಗೋದು. ಈ ವಾಸ್ತವ ಇನ್ನೂ ಬದಲಾಗಿಲ್ಲ. ಎಲ್ಲ ತಂದೆ ತಾಯಂದಿರು ತಮ್ಮ ಮಕ್ಕಳಿಂದ ಡಾಲರ್ ಅಪೇಕ್ಷಿಸುತ್ತಾರೆ (ತಾವು ಹಾಕಿದ ಬಂಡವಾಳದ ಬಡ್ಡಿ)
ಮಗನ ಆಸಕ್ತಿ ಹವ್ಯಾಸಗಳು ಅವರಿಗೆ ಗೌಣವಾಗಿ ತೋರುತ್ತದೆ. ಇದು ಒಂದು ಸಮೂಹ ಸನ್ನಿಯಂತೆ ಆವರಿಸಿದೆ.

೩-ಈಡಿಯಟ್ಸ ಚಿತ್ರದ ಕೇಂದ್ರ ಬಿಂದು ರಾಂಚೋ. ನಂಬಿದ ಸಿದ್ದಾಂತ,
ಊರು ಹೊಡೆಯುವ ಪಾಠಗಳಿಗೆ ವಿರೋಧಿ. ಕಾಲೇಜಿನ ಮುಖ್ಯಸ್ಥ ಸಹಸ್ರಬುದ್ಧೆ ಸಿದ್ದಾಂತಗಳಿಗೆ
ಕಟಿಬದ್ದ.ಪ್ರಶ್ನಿಸುವವರನ್ನು ಕಂಡರೆ ಅವನಿಗಾಗದು. ರಾಂಚೋ ಆವಿಷ್ಕಾರದ ಬೆನ್ನು ಹತ್ತಿದವ
ಮಾರ್ಕು ಹೆಚ್ಚಾಗಿ ಬರಬೇಕೆಂದು ಓದುವ ರೂಢಿಗತ ನಂಬಿಕೆಗಳಿಗೆ ವಿರೋಧಿ. ವಿರೋಧ ಸುಲಭವಾಗಿ ಹುಟ್ಟುತ್ತದೆ ರಾಂಚೋ ಹಾಗೂ ಸಹಸ್ರಬುದ್ಧೆ ನಡುವೆ. ವಿರೋಧದ ಬೆಂಕಿಗೆ ತುಪ್ಪ
ಸುರಿಯಲು "ಬಲಾತ್ಕಾರ್ ಪ್ರವೀಣ" ಇರುತ್ತಾನೆ. ಸಹಸ್ರಬುದ್ಧೆಯ ಮಗಳು ಪ್ರಿಯಾ ರಾಂಚೋಗೆ
ತನ್ನ ತಂದೆಯ ವಿರೋಧದ ನಡುವೆಯೂ ಸಹಾಯಮಾಡುತ್ತಾಳೆ. ೩ ಜನ ಇಂಜಿನೀಯರ್ ಸೇರಿ
ಗರ್ಭಿಣಿಗೆ ನಾರ್ಮಲ್ ಡೆಲಿವರಿ ಮಾಡಿಸುವ ಸೀನು ಚಿತ್ರದ ಹೈಲೈಟು. ಇಡೀ ಚಿತ್ರ ನಗಿಸುತ್ತದೆ
ಆಗಾಗ ಗಂಟಲುಬ್ಬಿಸುತ್ತದೆ. ನಮ್ಮ ಒಳತೋಟಿಯಲ್ಲಿ ಹರಿಯುತ್ತದೆ. ನಮ್ಮಿಂದ ಉತ್ತರ ಬಯಸುತ್ತದೆ.

ಚಿತ್ರ ನೋಡಿ ಹೊರಬಂದಾಗ ತಲೆಯಲ್ಲಿ ಅನೇಕ ವಿಚಾರಗಳ ಮಂಥನ. ಯಾಕೆ ನಾವು ನಮ್ಮ ಮಕ್ಕಳಿಗೆ ಕೊಡಿಸೋ ಶಿಕ್ಷಣವನ್ನು ಇನ್ನೂ ಹಳೇ ರೀತಿಯಲ್ಲಿ ನೋಡುತ್ತೇವೆ...?
ಮಕ್ಕಳ ಸ್ವಂತ ಆಸಕ್ತಿ ಹವ್ಯಾಸಗಳಿಗೆ ನಾವು ಬೆಲೆ ಕೊಡುತ್ತೆವೆಯೇ ಅಥವಾ ಅದು ಮುಖ್ಯಅಂತ
ಅನಿಸೋದಿಲ್ಲವೆ...? ಚಿತ್ರ ನೋಡಿದ ಮೇಲೆ ಜ್ನಾನೋದಯ ಆತು ಅಂತಲ್ಲ. ಆದರೆ ಅಂತರಂಗ
ಕಲಕೋ ಚಿತ್ರ ಇದು. ಯೋಚನೆಗೆ ಹಚ್ಚಿದೆ. ತೊಳಲಾಟ ಇದೆ ನಿಮ್ಮೊಂದಿಗೆ ಹಂಚಿಕೊಳ್ಳೋ
ಮನಸ್ಸಾತು...! ಇಂಥಾ ಚಿತ್ರ ನೋಡಿ ಹುರಿದುಂಬಿಸಿ ಹೊಸಾ ಥರಾ ವಿಚಾರ ಮಾಡಾವ್ರಿಗೆ
ಚಪ್ಪಾಳಿ ಹೊಡೀರಿ....!

16 comments:

  1. ಉಮೇಶ್ ಜೀ,
    "ತ್ರೀ ಈಡಿಯೆಟ್ಸ್" ಬಗ್ಗೆ ಸ೦ಕ್ಷೇಪವಾಗಿ ನಿಮ್ಮ ಅಭಿಪ್ರಾಯ ದಾಖಲಿಸಿದ್ದೀರಿ. ನಾನು ಈ ಚಿತ್ರ ನೋಡಬೇಕೆ೦ದಿರುವೆ, ಇನ್ನು ನೋಡಲಾಗಿಲ್ಲ

    ReplyDelete
  2. ಸರ್,

    ನನಗೂ ಈ ಚಿತ್ರದ ಬಗ್ಗೆ ತುಂಬಾ ಕ್ರೇಜ್ ಇದೆ. ಬಿಡುವು ಮಾಡಿಕೊಂಡು ಖಂಡಿತ ನೋಡುತ್ತೇನೆ.

    ReplyDelete
  3. ದೇಸಾಯರೇ,

    ನಾನೂ ಈ ಚಿತ್ರ ನೋಡಿದ್ದೇನೆ. ತುಂಬಾ ಚೆನ್ನಾಗಿದೆ. ಬಹು ಇಷ್ಟವಾಯಿತು. ಪ್ರಸಿದ್ಧಿ ಇದ್ದಲ್ಲಿ ಮಾತ್ರ ವಿವಾದವಿರುತ್ತದೆ. ಇಲ್ಲಾ ಪ್ರಸಿದ್ಧಿಗೋಸ್ಕರ ವಿವಾದ ಸೃಷ್ಟಿಸಲಾಗುತ್ತದೆ. ಆದರೆ ಈ ಚಿತ್ರ ನೋಡಿದ ಮೇಲೆ ಅನಿಸಿತು ಇದು ಮೊದಲನೆಯ ಕೆಟಗರಿಗೆ ಸೇರುತ್ತದೆ ಎಂದು. ಉತ್ತಮ ಚಿತ್ರವನ್ನು ನೋಡು ವಿವಾದ ಹತ್ತಿರಕ್ಕೆ ಬಂದಿದೆ ಅಷ್ಟೇ :)

    ನಮ್ಮ ಪ್ರಸಕ್ತ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿವಂತಿದೆ ಚಿತ್ರ.

    ReplyDelete
  4. ದೇಸಾಯರ,
    ನೋಡುಗ ೪ನೆಯ ಈಡಿಯಟ್ ಆಗೋದಿಲ್ಲ ಅಂತ ನೀವು ಹೇಳಿದ್ಹಂಗಾತು. ಅಂದ ಮ್ಯಾಲ ನೋಡ್ತೀನಿ.

    ReplyDelete
  5. ಈ ಸಿನಿಮಾ ನೋಡಬೇಕೆಂಬ ಕುತೂಹಲ ನನಗೂ ಇದೆ. ಹೋಗಲಿಕ್ಕಿನ್ನೂ ಆಗಿಲ್ಲ. ನನ್ನ ಫ್ರೆಂಡ್ಸ್ ಎಲ್ಲಾ ನೋಡ್ಕೊಂಡು ಬಂದು ಚೆನ್ನಾಗಿದೆ ಅಂತ ಹೊಟ್ಟೆ ಉರಿಸ್ತಾ ಇದಾರೆ... :)

    ReplyDelete
  6. ಈ ಚಲನಚಿತ್ರ ತುಂಬಾ ಚೆನ್ನಾಗಿದೆ ದೇಸಾಯಿಯವರೇ..ಬಹಳ ದಿನಗಳ ನಂತರ, ಹೇರಾಫೇರಿ,,ಮುನ್ನಾಭಾಯಿ ಗಳ ನಂತರ ತುಂಬಾ ಇಷ್ಟವಾದ ಚಲನಚಿತ್ರವೆಂದರೆ ಇದು..ಸುಂದರವಾದ ವಿಮರ್ಶೆಗೆ ಧನ್ಯವಾದಗಳು..

    ReplyDelete
  7. ಪರಾಂಜಪೆ ಅವರಿಗೆಅನಿಸಿಕೆಗೆ ಧನ್ಯವಾದಗಳು ಚಿತ್ರ ನೋಡಿದಮೇಲೆನಿಮ್ಮಿಂದ ಒಂದು ಕವಿತಾ ಹೊರಬರಬಹುದು

    ReplyDelete
  8. ಶಿವು ಬಿಡುವು ಸಿಕ್ಕಿರಬಹುದಲ್ಲವೇ ಈಗ ನೋಡಿದ್ರಾ

    ReplyDelete
  9. ತೇಜಸ್ವಿನಿಮೇಡಮ್ ಧನ್ಯವಾದಗಳು . ಕರೆದಾಗಲೆಲ್ಲ ಬರತೀರಿ.. ನಿಮ್ಮ ಅನಿಸಿಕೆ ಹಂಚಿಕೋತಿರಿ

    ReplyDelete
  10. ಕಾಕಾ ೪ನೇ ಈಡಿಯಟ್ ಅಲ್ಲ ನಿಮಗೆ ಈಗಾಗಲೆ ಖಾತ್ರಿಯಾಗಿರಬೇಕು..

    ReplyDelete
  11. ಆನಂದ ಬೇಗನೆ ನಿಮ್ಮ ಹೊಟ್ಟೆಉರಿ ತಣ್ಣಗಾಗಲಿ...!

    ReplyDelete
  12. ಆಕಾಶಬುಟ್ಟಿ , ಪ್ರತಿಕ್ರಿಯೆಗೆ ಧನ್ಯವಾದಗಳು ಆದ್ರೆ ಹೇರಾಫೇರಿ ಒಂದು ಸಾಧಾರಣ ಚಿತ್ರ ಮುನ್ನಾಭಾಯಿ ಅಥವಾ ೩-ಈಡಿಯಟ್ಸ ಹೋಲಿಸಿದರೆ....

    ReplyDelete
  13. ನನಗೂ ಈ ಚಿತ್ರ ನೋಡಬೇಕೆನಿಸಿದೆ...

    ReplyDelete
  14. ಚಿತ್ರ ಚೆನ್ನಾಗಿದೆ ಖಂಡಿತ ನೋಡಿರಿ ಗೋರೆ.

    ReplyDelete
  15. namaskar sir.... 3 idiots film bagge chennagene baredidderi..... nimminda ade review kvit roopadalli bandre innu sogasagirodalva sir

    ReplyDelete
  16. namaskar sir.... 3 idiots film bagge chennagene baredidderi..... nimminda ade review kvit roopadalli bandre innu sogasagirodalva sir

    ReplyDelete