Wednesday, April 29, 2009
ಮಗಳ ಪ್ರಶ್ನೆ
ಅವನನ್ನು ಜೇಲಿನಿಂದ ಬಿಡುಗಡೆಗೊಳಿಸಿ ೨೬/೧೧ ರ ದಿನ ಮಡಿದ ಸಂಬಂಧಿಗಳಿಗೆ ಒಪ್ಪಿಸಲಿ..! ಸಲಹೆ ಅತಾರ್ಕಿಕ ಅನಿಸಬಹುದು ಆದರೆ ಅದರ ಹಿಂದೆ ಅಡಗಿದ ಕಳಕಳಿ ಮೆಚ್ಚಬೇಕು.ಎಷ್ಟು ದಿನ ಅವನನ್ನು ಜೈಲಿನಲ್ಲಿ ಕೂಡಿಸಿ ಕೂಳು ಹಾಕೋದು ..ಅವ ಒಂದು ನಮೂನಿ vipಕೈದಿ ಅವನ ಕಡೆ ಕೆಲಸ ಮಾಡಸುವ ಹಾಗಿಲ್ಲ ಜೈಲಿನ್ಯಾಗ ಇದ್ದರೂ ಒಂಥರಾ ರಾಜಾನ ದರಬಾರ...!
ಈಗ ಮಗಳು ಕೇಳಿದ ಪ್ರಶ್ನಿಗೆ ಬರ್ತೇನಿ ...ನಾ ಅಂದೆ ಬ್ಯಾರೆ ದೇಶದಾಗ ಆಗಿದ್ರ ಇಷ್ಟೊತ್ತಿನ್ಯಾಗ ಅವ ಹೆಣಾ ಆಗಿ ಹೋಗತಿದ್ದ . ಅದಕ್ಕ ಮಗಳು ಕೇಳಿದ್ಲು ನಮ್ಮ ದೇಶದಾಗ ಯಾಕ್ ಹಿಂಗ? ಉತ್ತರ ನಾ ಎಲ್ಲಿಂದ ಕೊಡಲಿ ಉತ್ತರ ಕೊಡಬೇಕಾದವರಿಗೆ ಅದರ ಚಿಂತಿ ಇಲ್ಲ..ಅವರು ನಾಳೆ ಸಿಗಲಿರುವ ವೋಟಿನ ಲೆಕ್ಕ ಹಾಕುತ್ತಿದ್ದಾರೆ...ಒಂದು ವೇಳೆ ಕಸಬ್ ನ
ವಿಚಾರಣೆ ಹೀಗೆ ಐದು ವರ್ಷ ಜಗ್ಗಿದರೆ(ಅದರ ಎಲ್ಲ ಸಾಧ್ಯತಾ ಅದ...!) ಮುಂದಿನ ಸಾರಿ ಸಹ ಅವರ ಕುರ್ಚಿ ಭದ್ರ ಆಗಿರ್ತದ.
ಪಾಪ ಮಗಳಿಗೇನು ಗೊತ್ತು ಇದು ಪ್ರಶ್ನಿ ಕೇಳಿದ್ಲು ಖರೇ ಉತ್ತರ ಕೊಡಲಿಕ್ಕೆ ನನಗೆ ಸಾಧ್ಯನ ಇಲ್ಲ ...ನೀವ್ಯಾರಾರು ಸಹಾಯ
ಮಾಡಬಹುದೇನೋ?
Sunday, April 26, 2009
ಸಹವಾಸ
ದಿನಗಳ ಕಮ್ಮಟ ಏರ್ಪಡಿಸಿದ್ದರು. ನಾನೂ ಭಾಗಿಯಾಗಿದ್ದೆ... .ಟಿ.ಪಿ. ಅಶೋಕ್ , ಕೀರಂ , ಅಕ್ಷರ, ಕೀರ್ತಿನಾಥ ಕುರ್ತಕೋಟಿ, ಪ್ರಭುಸ್ವಾಮಿ ಹಿರೇಮಠ ಹೀಗೆ ದಿಗ್ಗಜರೆಲ್ಲ ಅಲ್ಲಿದ್ದರು. ಅವರ ಒಡನಾಟ ಆ ಎರಡು ದಿನ ಎಂದಿಗೂ ಮರೆಯುವ ಹಾಗಿಲ್ಲ ಉದ್ಘಾಟನೆಗೆ ಸನದಿ ಅವರು ಬಂದಿದ್ದರು...ಸಮಾರೋಪಕ್ಕೆ ಶಾಂತರಸ ಬಂದಿದ್ರು....ಇರಲಿ ನಾ ಹೇಳಹೊರಟಿರುವುದು ಬೇರೆ ವಿಷಯ ಹಾಂ ಮರೆತಿದ್ದೆ ಶಿಬಿರದಲ್ಲಿ ಪಾದರಸದಂತೆ ಓಡಾಡಿ ಆಯೋಜಿಸಿದವರು ಡಿವಿ ಬಡಿಗೇರ್ ಅವರು.
ಶಿಬಿರದಲ್ಲಿ ಸುಮಾರು ಮುವ್ವತ್ತು ಭಾಗಿದಾರರು ನಮ್ಮನ್ನು ೭-೮ ಜನರ ಗುಂಪು ಮಾಡಿ ಒಂದು ಕವಿತೆ ಕೊಟ್ಟು ಅದರ ಬಗ್ಗೆ ಚರ್ಚೆ,
ವಾದ , ಅಬಿಪ್ರಾಯ ಹಂಚಿಕೊಳ್ಳಲು ತಿಳಿಸಿದ್ದರು.ನಮ್ಮ ಗುಂಪಿಗೆ ಬಂದ ಮೊದಲ ಕವಿತೆ "ಕಪ್ಪು ಹುಡುಗ" ಮೈಸೂರು ಮಲ್ಲಿಗೆ ಕವಿ
ಬರೆದದ್ದು......ಈ ಸಾಲು ಗಮನಿಸಿ...’ಮಳೆ ಸೋಕಿನ ಸಂಜೆಯಲ್ಲಿ ಜನ ತುಂಬಿದ ಬೀದಿಯಲ್ಲಿ ಯಾರೋ ನನ್ನ ಹಿಂದೆ ನುಡಿದ ಹಾಗೆ ಆಯಿತು..ಕಿಟಕಿಯಲ್ಲಿ ಹರಡಿಕೊಂಡ ದಾಳಿಂಬೆಯ ಮುಳ್ಳಿನಿಂದ,ಅದರ ಬಿರಿದ ಹಣ್ಣಿನಿಂದ ಆ ಕೆಳಗಿನ ಕಣ್ಣಿನಿಂದ ಎದ್ದು ಬಂದ
ಕಪ್ಪು ಹುಡುಗ...’ ಮೇಲಿನ ಸಾಲು ಗಮನಿಸಿದಾಗ ನನಗೆ ಅನಿಸಿದ್ದು ಇದು ಓರ್ವ ಯುವತಿಯ ಪ್ರಲಾಪ ಅಂತ...ಆದರೆ ಕೀರಂ ತಿಳಿಸಿದರು ಕವಿ ಕಪ್ಪು ಮಣ್ಣಿನ ಬಗ್ಗೆ ಬರೆದಿದ್ದಾರೆ...ಅದು ಪ್ರತಿಮಾ ರೂಪದಲ್ಲಿ ಇದೆ... ಆ ಥರಾ ವಿಚಾರ ಮಾಡಿದರೆ ಹೌದು ಅನಿಸಿತು....
ಇನ್ನೊಂದು ಕವನ ಪುತಿನ ಅವರದು "ನೆರಳು" ಶಿರ್ಷಿಕೆ. ಗಾಂಧಿ ಕುರಿತಾಗಿ ಬರೆದದ್ದು . ಈ ಸಾಲು ಗಮನಿಸಿ"ಇದ ನೋಡಿ ನಾನು ನೆನೆವೆನಿಂದು ಇಂಥ ನೆಳಲೇನು ಗಾಂಧಿಯೆಂದು ಹರಿದತ್ತ ಹರಿಯ ಚಿತ್ತ ಈ ಧೀರ ನಡೆವನತ್ತ" ಕೊನೆಯ ಸಾಲು ನನಗೆ ಅಪಥ್ಯ ಎನ್ನಿಸಿತು... ಹರಿ ಅಥವಾ ವಿಧಿ ಹೇಳಿದಂತೆ ನಡೆದರೆ ಅದೇಗೆ ಅವರು ದೊಡ್ಡ ಮನುಷ್ಯ ಆಗಬಹುದು ದೊಡ್ಡ
ವ್ಯಕ್ತಿ ತನ್ನ ನಸೀಬು ತಾನೇ ಬರೆದುಕೊಳ್ಳುತ್ತಾನೆ ಇದು ನನ್ನ ವಾದ...ಸ್ವಲ್ಪ ಗಲಿಬಿಲಿ ಸಹ ಉಂಟುಮಾಡಿತು ಪ್ರಭುಸ್ವಾಮಿ ಅವರಂತೂ ದೊಡ್ಡವರ ರಚನೆ ಪ್ರಶ್ನಿಸುವ ಹಕ್ಕು ನಿಮಗಿದೆಯೇ ಅಂತ ಕೇಳಿದರು....
ಮರುದಿನ ಬೇಂದ್ರೆ ಚರಮ ಗೀತೆ "ನೀ ಹಿಂಗ್ ನೋಡಬ್ಯಾಡ ನನ್ನ" ಈ ಸಾಲು ಗಮನಿಸಿ..." ಮಲಗಿರುವ ಕೂಸು ಮಲಗಿರಲಿ
ಅಲ್ಲಿ ಮುಂದಿನದು ದೇವರ ಚಿತ್ತ ನಾ ತಡೀಲಾರೆ ಅದು ಯಾಕ ನೋಡತೀ ಮತ್ತ ಮತ್ತ ನೀ ಇತ್ತ". ಮುಂದಿನದು ದೇವರ ಚಿತ್ತ
ಅಂತ ಹೇಳಿದ್ದು ತೀರ ಅಸಹಾಯಕತೆ ಇದು ನನ್ನ ವಾದ...ಪ್ರಯತ್ನ ಮಾಡದೇ ಕೈ ಯಾಕೆ ಚೆಲ್ಲಿ ಕೂಡಬೇಕು ಇದು ನನ್ನ
ವಾದ. ಯಾಕೋ ಏನೋ ನನ್ನ ವಾದ ಅಡ್ಡ ಅಂತ ನನಗೆ ಅನಿಸಲೇ ಇಲ್ಲ...! ಉಳಿದ ಶಿಬಿರಾರ್ಥಿಗಳು ವಾದ ಮಾಡಿದ್ರು ನನ್ನ
ಜೊತೆ ..ಅಶೋಕ ಸಂಭಾಳಿಸಿದ್ರು. ಮುಂದೊಂದು ದಿನ ಬೇಂದ್ರೆ ಅವರ ಆ ಕವಿತಾ ವಿರಾಮವಾಗಿ ಓದಿದೆ ಆ ಕವಿತಾದಲ್ಲಡಗಿದ ಅಪಾರ ಆಳ ಅರಿವಿಗೆ ಬಂತು... ಏನೂ ಮಾಡಲಾರದ ಹತಾಶೆ ಆ ಗೊಂದಲದಲ್ಲಿ ಮೂಡಿದ ಅದ್ಭುತ ಕವಿತಾ ಅದು.
ಆ ಶಿಬಿರ ನನಗೆ ಅನೇಕ ಸಾಧ್ಯತೆ ತೆರೆಯಿತು ಹೆಚ್ಚೆಚ್ಚು ಓದತೊಡಗಿದೆ...ಓದಿದಂತೆಲ್ಲ ಬೆಳೆಯತೊಡಗಿದೆ. ಆ ಎರಡು ದಿನ ನಾ ಎಂದಿಗೂ ಮರೆಯುವುದಿಲ್ಲ...!
Sunday, April 19, 2009
ಕವಿತೆ
ಶ್ರೀಮಂತನ ಸೊಕ್ಕಿನಿಂದ ಉಬ್ಬಿ ನಿಂತ ಪರ್ಸ್ ಅನ್ನು
ನಮ್ಮೂರ ಕರಿಯನ ಬತ್ತಲೆದೆಯಲ್ಲಿ ಅವನ ಮಕ್ಕಳು
ಸುರಿಸಿದ ಕಣ್ಣೀರು ರಕ್ತವಾಗಿ ಹೆಪ್ಪುಗಟ್ಟಿದುದರ
ಅರಿವಿಲ್ಲ ಅವಳಿಗೆ…..
ಹುಡುಗಿ ಪ್ರೀತಿಸುತ್ತಾಳೆ…..
ಹೊಂಡಾ ಸುಜುಕಿಗಳ ಸರದಾರರನ್ನು ,ತಮ್ಮದೇ
ಲೋಕದಲ್ಲಿ ವಿಹರಿಸುವ ಸಾಫ್ಟವೇರ್ ಎಡಿಕ್ಟ್ ರನ್ನು
ಚಪ್ಪಲಿಯಿಲ್ಲದೇ ಕಾಲೆಳೆಯುತ್ತ ಸಾಗಿದವ ಕಾಣುವುದಿಲ್ಲ
ಅವಳಿಗೆ…..
ಹುಡುಗಿ ಪ್ರೀತಿಸುತ್ತಾಳೆ…..
ಟಿವಿ, ಫ್ರಿಜ್,ಮೊಬೈಲ್ ಗಳ ಕ್ರುತಕತೆ ಯನ್ನು
ಆಭರಣಗಳ ಆಡಂಬರವನ್ನು..
ಈ ಮಣ್ಣ ಕಣಕಣವೂ ಬಡವನ ಎದೆಯಲ್ಲಿ
ಪ್ರೀತಿಯಾಗಿ ಹಸಿರಾದುದರ ಅರಿವಿಲ್ಲ
ಅವಳಿಗೆ….
ಹುಡುಗಿ ಪ್ರೀತಿಸುತ್ತಾಳೆ….
ಡೋನೆಶನ್ ಪೋಶಿತ ಡಾಕ್ಟರ್, ಇಂಜಿನೀಯರ್
ಲಂಚವಂತ ಪಿ ಎಸ್ ಐ ಗಳನ್ನು…. ಕೊಡಲು
ಫೀಸಿಲ್ಲದೆ ಮುಸುರೆ ತೊಳೆಯುವವ ಪಾಪ
ಕಾಣುವುದಿಲ್ಲ ಅವಳಿಗೆ….
ಹುಡುಗಿ ಪ್ರೀತಿಸುತ್ತಾಳೆ……
ಈಗಿನ ಹುಡುಗಿಯರು ಪ್ರೀತಿಸುವುದೇ ಹೀಗೆ……!
ನೆನಪು
ಮನೆಯಲ್ಲಿ ಮಾಡಿದ ಕೋಸಂಬರಿ,ಪಾನಕ ಜಡ್ಜ ಬಳಿ ತಗೊಂಡು ಹೋಗುತ್ತಿದ್ದೆವು. ಜಡ್ಜ ಅಂದರೆ ನಮ್ಮ ಹಣಮುಕಾಕಾ…!
ಹಣಮುಕಾಕಾನ ಕಡೆ ಶಾಭಾಸ್ ಅನಿಸಿಕೊಂಡರೆ ಅದೇನೋ ಸಾಧಿಸಿದ ಖುಷಿ ನಮಗೆ. ಅವ ಎಲ್ಲರ ಮನೆ
ಕೋಸಂಬರಿ,ಪಾನಕ ಇಷ್ಟಪಟ್ಟು ಸೇವಿಸುತ್ತಿದ್ದ. ಅದು ಹೆಸರು ಬೇಳೆ,ಕಡ್ಲಿಬೆಳೆಯದ್ದಾಗಿರಲಿ ಅವ್ ಡೀಲೆ ತಿನ್ನುತ್ತಿದ್ದ. ನಾವು ಅವ ತಿಂದು ಹೇಳುವ ನಿರ್ಣಯಕ್ಕೆ
ಕಾಯುತ್ತಿದ್ದೆವು. ಅನುಕೂಲಕರ ತೀರ್ಪು ಬಂದರೆ ಒಳಿತು..
ಇಲ್ಲವಾದರೆ ಬೇಸರ ಆಗುತ್ತಿತ್ತು. ಆದರೆ ನಿಜ ಫಲಾನುಭವಿ ಮಾತ್ರ ಹಣಮುಕಾಕಾ ಆಗಿದ್ದ.ಪುಕ್ಕಟೆಯಾಗಿ ತರತರದ ರುಚಿಕರ ಕೋಸಂಬರಿ ಸವಿಯುವ ಭಾಗ್ಯ ಅವನದು.ಆದರೇನು ಅವನಿಂದ ಹೊಗಳಿಸಿಕೊಳ್ಳುವ ಉಮೇದು ನಮ್ಮದು..ಅವ ಹೂಡಿದ
ಆಟ ಗೊತ್ತಾಗ್ ತಾ ಇರಲಿಲ್ಲ. ಅಥವಾ ಆ ವಯಸ್ಸಿಗೆ ಅದು ಸಹಜವೂ ಹೌದು.
ಕೋಸಂಬರಿ ,ಪಾನಕ ನೋಡಿದಾಗ ಹಣಮುಕಾಕಾ ನೆನಪಾಗುತ್ತಾನೆ…ವಾಡೆ ನೆನಪಾಗುತ್ತದೆ. ಎದೆ ಭಾರವಾಗುತ್ತದೆ.
Friday, April 17, 2009
ಮಾವು
ಮಾವಿನ ಹಣ್ಣ ಬಂದಾವ ಈ ಸುದ್ದಿ ಕೇಳಿನ ನಾವು ಸಣ್ಣಾವರಿದ್ದಾಗ ಜೊಲ್ಲು ಸುರಿಸಿಕೊಳ್ಳುತ್ತಿದ್ದೆವು. ಇನ್ನು ಮನ್ಯಾಗ ಶೀಕರಿಣಿ ಮಾಡಿದ್ರಂತೂ ಎಂದು ತಿಂದೆವೋ ಅಂತ ಹಪಾಪಿಸುತ್ತಿದ್ದೆವು. ಶೀಕರಿಣಿ ಮಾಡೂದು ಒಂದು ಕಲಾ ಅದ ಹಂಗ ಮಾವಿನ ಹಣ್ಣು ಹಿಂಡೂದು ಸಹ. ನಮ್ಮ ಹುಬ್ಬಳ್ಳ್ಯಾಗ ಶೀಕರಿಣಿಗೆ ಅಂತ ಸ್ಪೇಶಲಾಗಿ ’ಈಶಾಡಿ’ ಮಾವಿನಹಣ್ಣು ಸಿಗತಾವ. ದುರ್ಗದ ಬೈಲಿನ್ಯಾಗ
ಮಾರಾವ್ರು ಸಹ ಕೇಳೇ ಕೊಡ್ತಾರ..’ಹಣ್ಣು ಹಿಂಡೂದಕ್ಕೋ ಅಥವಾತಿನ್ನಲಿಕ್ಕೊ?’...ಇರಲಿ. ಈಶಾಡಿ ಹಣ್ಣು ಬಲೇ ಕಿಲಾಡಿ "ಇಳದಿದ್ದ" ಹಣ್ಣು ತಿನ್ನಬಾರದು ಅದು ಅಷ್ಟು ರುಚಿ ಇರೂದಿಲ್ಲ. ನೋಡಿ,ವಾಸನಿ ನೋಡಿ ಸರಿಯಾದ ಹಣ್ಣು ತರಬೇಕು. ಮಟಮಟ
ಮಧ್ಯಾಹ್ನ ಅವ್ವ ಹಂಚು ಕಾಸಿ ಚಪಾತಿ ಮಾಡಲಿಕ್ಕೆ ಶುರು ಮಾಡಿದ್ಲು ಅಂದ್ರ ಈಕಡೆ ಒಂದು ಪಾತೇಲಿ ಮುಂದ ಇಟಗೊಂಡು
ಹಣ್ಣು ಹಿಂಡಲಿಕ್ಕೆ ನಾ ಕೂಡತಿದ್ದೆ.... ತುಂಬು ಬಿಚ್ಚಿ ಮೊದಲ ಅದರೊಳಗ ಇದ್ದ ಕಹಿ ಹೊರಗೆ ಒಗೆದು ಸಿಪ್ಪಿ ಸೀಳಿ ಗೊಟ್ಟ ಪಾತೇಲಿಯೊಳಗ ಇಳಿಬಿಟ್ಟು ಸಿಪ್ಪಿಗ ಅಂಟಿದ ರಸ ಎಲ್ಲ ತೆಗೆದು ಆಮ್ಯಾಲ ಗೊಟ್ಟಕ್ಕ ಅಂಟಿಕೊಂಡ ಕರಣಿ ಎಲ್ಲಾ ಹಿಂಡಬೇಕು. ಛಲೋ ಜಾತೀದು ಹಣ್ಣಿತ್ತಂದ್ರ ಒಂದು ಹಣ್ಣು=ಒಂದು ಬಟ್ಟಲ. ಈ ಅಳತಿ ಸಾಮಾನ್ಯದ್ದು. ನಮ್ಮ ಕಡೆ ಹಣ್ಣಿನ ಬುಟ್ಟಿ ಲೆಕ್ಕ ಒಂದು
ಬುಟ್ಟಿಯೊಳಗ ಎರಡೂವರೆ ಡಜನ್ ಹಣ್ಣು... ಅಂದ್ರ ಮನ್ಯಾಗ ಮಂದಿ ಬಹಳ ಇದ್ರ ಬುಟ್ಟಿ ಒಂದ ದಿನದಾಗ ಖಾಲಿ ಆಗಬೇಕು...ಮಂದಿ ಕಮಿ ಇದ್ರ ಎರಡು ದಿನದಾಗ. ಶೀಕರಿಣಿಗೆ ಹೆರದ ಬೆಲ್ಲ (ಎಲ್ಲ ಮಾವಿನ ಹಣ್ಣು ಸಿಹಿ ಎಲ್ಲಿ ಇರ್ತಾವ?),
ಯಾಲಕ್ಕಿ ಪುಡಿ , ಮೆಣಸಿನ ಪುಡಿ(ಮಾವಿನ ಹಣ್ಣು ಬಹಳ ಹೀಟು) ಎಲ್ಲಾ ಸೇರಿ ಕಲೆಸಿ ವಾಗರೂಳಿಲೇ ಕೈ ಆಡಿಸಿದ್ರ ಮುಗೀತು
ಶೀಕರಿಣಿ ರೆಡಿ ತಿನ್ನಲಿಕ್ಕೆ...! ಬಟ್ಟಲ ತುಂಬಾ ಕೇಸರಿ ಬಣ್ಣದ ಶೀಕರಿಣಿ ಮ್ಯಾಲ ಕಾಯಿಸಿದ ತುಪ್ಪ ಇದ್ರ ಬಟ್ಟಲದ ಲೆಕ್ಕ ಯಾರು ಇಟ್ಟಾರು ಹಂಗ ಚಪಾತಿ ಲೆಕ್ಕರೇ ಯಾರಿಗೆ ಬೇಕು....?
ಅದ ಈ ಊರಾಗ ಮಾವಿನ ಹಣ್ಣ ಮಾರತಾರ ಕಿಲೊ ಲೆಕ್ಕದ ಮ್ಯಾಲ....ಸುಡ್ಲಿ ಒಂದು ರುಚೀನ ಒಂದು ಅಳತ್ಯ ಏನೂ ಇಲ್ಲ.
ಏನು ಮಾಡೂದು ಊರು ಬಿಟ್ಟು ಬಂದಾಗೆದ ನೆನಪು ತಕ್ಕೊತ ಕೂಡಬೇಕಾಗೇದ.....!
Wednesday, April 15, 2009
ಲಲ್ಲು ಯಾರು?
ತುರುಕಿಯೂ ಅವರು ಹೆದರಿದ್ದಾರೆ ಅಂದರೆ ಪ್ರಬಲವಾದ ಆಯುಧವೇ ಎದುರಾಳಿಗಳ ಕಡೆ ಇರಬೇಕು. ಆ ಆಯುಧವೇ ಅಭಿವೃದ್ದಿ ಎಂಬ ಸಂತಸದ ಸಂಗತಿ ನಿಜ ನಿತೀಶ್ ಕುಮಾರ್ ಅಸಾಧ್ಯವಾದದ್ದನ್ನು ಸಾಧಿಸುವತ್ತ ದಾಪುಗಾಲಿಟ್ಟಿದ್ದಾರೆ.... ಮೊದಲ ಸಲ ಮುಖ್ಯ
ಮಂತ್ರಿ ಆದಾಗ ಬಿಹಾರದ ರಸ್ತೆ ಗಳನ್ನು ಹೇಮಾಮಾಲಿನಿಯ ಕೆನ್ನೆ ಮಾಡುವುದಾಗಿ ಹೇಳಿದ್ದ ಲಾಲೂ ಈಗ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅಂತೆಯೇ ನಿದ್ದೆಯಲ್ಲಿದ್ದ ಪಾಸವಾನರನ್ನು ಅಪ್ಪಿ ಹಿಡಿದ ಲಾಲು ಒಂದುಕಾಲದ ವೈರಿ ಮುಲಾಯಂಜತೆಯೂ
ಹುಂ ಗುಟ್ಟಿದ್ದಾರೆ...ನಿನ್ನೆ ತಾನೇ ಲೆಫ್ಟ ಸಹ ರೈಟ್ ಎಂದಿದ್ದಾರೆ.
ಮೇಲಿನ ಬೆಳವಣಿಗೆ ನೋಡಿದ್ರೆ ಲಾಲೂಗೆ ಸೋಲಿನ ಭೀತಿ ಇದೆ. ಹೋದಸಾರಿ ೨೨ ಸೀಟು ಗೆದ್ದು ಅಧಿಪತ್ಯ ಚಲಾಯಿಸಿದ ಲಾಲೂಗೆ
ಮುಂದಿನ ದಿನಗಳು ಒಳ್ಳೆಯವೋ ಕೆಟ್ಟದ್ದೋ ಗೊತ್ತಿಲ್ಲ ಹೀಗಾಗಿ ಊಹಿಸಲಾರದ ನಡೆ ಯಿಡುತ್ತಿದ್ದಾರೆ. ಈ ನಡೆಗಳು ಮುಂದೆ ಅವರಿಗೇ ಮುಳುವು ಆಗಬಹುದು ಎಂದು ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಈಗಿನ ಪರಿಸ್ಥಿತಿ ಲಾಲೂಗೆ ಹೊಸದು
ರಾಜ್ಯದಲ್ಲಿ ವಿರೋಧಿ ಆಡಳಿತ ಇದೆ ಆಯಕಟ್ಟಿನ ಜಾಗೆಗಳಲ್ಲಿ ತನಗೆ ಬೇಕಾದ ಅಧಿಕಾರಿಗಳನ್ನು ನೇಮಿಸುವಂತಿಲ್ಲ ತಾನೇ ಹಾಲೆರೆದ ಭಾವ ಮೈದುನ ಸಹ ಸಡ್ಡುಹೊಡೆದು ನಿಂತಿದ್ದಾನೆ. ಮುಖ್ಯವಾಗಿ ಕಾಂಗ್ರೆಸ ಚುನಾವಣೆಯ ನಂತರ ಲಾಲೂನ ಜತೆ
ಯಾವ ರೀತಿ ಸಂಭಂದ ಇಟ್ಟುಕೊಳ್ಳಬಹುದು ಇದು ಚರ್ಚೆಯ ವಿಷಯ. ಹಾಗೆಯೇ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಲಾಲೂಗೆ ಮತ್ತೆ ಜೈಲೂಟ ಗ್ಯಾರಂಟಿ.... ಒಟ್ಟಿನಲ್ಲಿ ಲಾಲೂನ ಪರಿಸ್ಥಿತಿ ನಾಜೂಕಾಗಿದೆ....
Tuesday, April 14, 2009
ಪ್ರಸ್ತುತ
ಸರ್ವಧಾರಿಯ ಪ್ರಮಾದದ ಬೆಂಕಿ ಇನ್ನೂ ಆರಿಲ್ಲ
ವಕ್ಕರಿಸಿದ್ದಾನೆ ಅದಾಗಲೇ ವಿರೋಧಿ...
ತಂದಿದ್ದಾನೆ ಜತೆಯಲ್ಲಿ ಪೆಟಾರಿಯೊಂದ
ತುಂಬಿರಬಹುದು ಅದರಲ್ಲಿ ಬಣ್ಣಬಣ್ಣದ ಕನಸುಗಳ..!
ವಿಕ್ರಯಿಸಲೇ ಬದಂತಿದೆ ನಮ್ಮ ಇರುವನ್ನು..
ಹೇಳಿಕೇಳಿ ರಿಸೆಶನ್ನು.....
ಪ್ರಶ್ನೆಗಳಿವೆ ತುಸು ದ್ವಂದ್ವವೂ ಇದೆ ನನ್ನಲ್ಲಿ
ಫೂತ್ಕರಿಸಲಿದೆಯೇ ಮತ್ತೊಮ್ಮೆ ಕಾಲಸರ್ಪ
ಬೆಳ್ಳಿ ಹಿಮ ಹೊದೆಯಲಿದೆಯೇ ಕೆಂಪು ಚಾದರ
ಮತ್ತೆ ಬಿಸಿನೆತ್ತರು ಸುರಿಯುವುದೆ ತಂಪು ಕಾರಿಡಾರ್ ಗಳಲ್ಲಿ...
ಮತ್ತ್ಯಾರೋ ಕಸಬ್,ದಾರಾಸಿಂಗ ನೆರೆಮನೆಯಿಂದಲೇ
ಹೊರ ಬಂದು ಓಣಿಗೆ ಕೊಳ್ಳಿ ಇಟ್ಟಾನೆಯೇ....
ಉತ್ತರ ಹುಡುಕುತ ನಿಂತಿರುವೆ ನಾನಿಲ್ಲಿ
ಕಣ್ಣೀರು ಬತ್ತಿ ಎದೆ ಒಡೆದವರ ನಡುವಲ್ಲಿ.....!
Saturday, April 11, 2009
ಅಶಯ
-------
ನನ್ನ ನಿನ್ನ ನಡುವೆ
ಪ್ರಶ್ನೆಯೊಂದು ಮಲಗಿದೆ...
ಉತ್ತರ ಹುಡುಕುವ ಗೋಜಿನಲಿ
ಬಹಳ ದೂರ ಬಂದಾಗಿದೆ...
ಅಲ್ಲಿ ಹುಲ್ಲು ಹಾಸಿನ ಮೇಲೆ
ನವಿರಾದ ಇಬ್ಬನಿ..
ಸುಮ್ಮನೆ ಬೆರಳಾಡಿಸಿದರೆ ಸಾಕು
ದೊರೆತೀತು ನಿಧಿಯ ಖನಿ..
ಆ ನಿಧಿಯ ಮುಂದೆ ಉತ್ತರದ
ಗೊಡವೆ ಏಕೆ ನಮಗೆ....ಇರಲಿ
ಪ್ರಶ್ನೆ ಅದರ ಪಾಡಿಗೆ
ಸಿಕ್ಕು ಬಿಡಿಸೋಣ ಮುಂದಿನ ಬಾರಿ
ಅನುಭವಿಸೋಣ ಈಗ ಈ ಕ್ಷಣದ
ಆರ್ದತೆ ಯನ್ನು ಇಬ್ಬನಿ ಹನಿ
ತಂದಿರುವ ಅನುಭೂತಿಯನ್ನು....!
Friday, April 10, 2009
ಮತ
೧) ಬಿರು ಬಿಸಿಲಲ್ಲಿ ಬರಲಿದೆ
ಚುನಾವಣೆ....
ಆಗಲಿದೆ ಮತ್ತೆ ನೋ(ವೋ)ಟುಗಳ
ಚಲಾವಣೆ....!
೨) ಖಾಲಿ ಕೊಡ ಒಣಗಿದ ಹೊಟ್ಟೆ
ಕನಸು ಮುರುಟಿಕೊಂಡ ಕಂಗಳು
ಎಲ್ಲ ಅವೇ ಇರುತ್ತವೆ
ವೋಟಿನ ಮೊದಲೂ ಆಮೇಲೂ......!
Monday, April 6, 2009
ಮತ
ಕರ್ನಾಟಕದಲ್ಲಿ ಲಿಂಗಾಯತ ಒಳ ಪಂಗಡಗಳಲ್ಲಿ ಅಸಮಾಧಾನ ಇದ್ದೇ ಇದೆ. ಜಾತಿ ಸಮೀಕರಣ ಇಟ್ಟುಕೊಂಡೇ ಮತ ಯಾಚಿಸ ಬೇಕಾಗಿದೆ ಯಾಕೆಂದರೆ ಹೇಳಿಕೊಳ್ಳುವ ಯಾವ ಸಾಧನೆ ಇದೆ ಈ ಸರಕಾರದ್ದು....ಈ ಅಳುಕು ಹುಳುಕೂ ಕೂಡ..ಆಡಿ ತೋರಿಸುವಂತಿಲ್ಲ.ಮತದಾರ ಪ್ರಭು ಮತ್ತೊಮ್ಮೆ ದಯೆ ತೋರಬಹುದು ಎಂಬ ನಿರೀಕ್ಷೆ ಅವರದು.ಹಾಗೆ ನೋಡಿದ್ರೆ ಎದುರಾಳಿ ವೀಕ್
ಆಗಿದ್ದಾರೆ ಕಾಂಗ್ರೆಸ್ ತನ್ನೆಲ್ಲ ಹಿರಿತಲೆಗಳನ್ನು ಅಖಾಡಾಕ್ಕೆ ಇಳಿಸಿದೆ.ಬ್ಯಾಟರಾಯನಪುರದ ಹುಡುಗ ಕೃಷ್ಣ ಮಾತ್ರ ತರುಣ...ಆದರೆ
ಎದುರಾಳಿ ಅನಂತರನ್ನು ಸೋಲಿಸುವ ಛಾತಿ ಇದೆಯೇ...?
ನಿಲ್ಲುವವರೇ ಇಲ್ಲ ಆದರೂ ಒತ್ತಾಯದಿಂದ ನಿಂತುಕೊಂಡಿದ್ದಾರೆ ಏನು ಮಾಡುವುದು ಅಭ್ಯರ್ಥಿಗಳೆಇಲ್ಲವಲ್ಲ. ಸಾಂಗ್ಲಿಯಾನ ಅಂದು
ಮಾನ ಉಳಿಸಿದ್ದಕ್ಕೆ ಇಂದು ಬಡ್ಡಿ ವಸೂಲಿಮಾಡುತ್ತಿದ್ದಾರೆ. ಬದಲಾದ ಸ್ಥಿತಿ ನೋಡಿ ಒಂದೇ ವೇದಿಕೆಹಂಚಿಕೊಂಡವರು ಇಂದು
ಎದುರಾಳಿಗಳು. ಈ ರಾಜಕೀಯದಲ್ಲಿ ಬೇಳೆ ಬೇಯುವುದೇ ಮುಖ್ಯ.ಯಾವ ಮೌಲ್ಯಗಳಿಗೂಇಲ್ಲಿ ಬೆಲೆ ಇಲ್ಲ.ಏನೇ ಆಗಲಿ ಮತದಾರ
ಪ್ರಭು ಎಲ್ಲ ’ಎಕ್ಕಾ’ ಇಟ್ಟುಕೊಂಡಿದ್ದಾನೆ. ಯಾವಾಗ ಹಾಕಬೇಕು ಅವನಿಗೆ ಗೊತ್ತಿದೆ ಹಾಗೆಯೇ ರಾಜಕೀಯದವರಿಗೂ ಗೊತ್ತಿದೆ
ತಮ್ಮ ನಶೀಬು ಅವನ ಮುಷ್ಟಿಯಲ್ಲಿ ಬಂಧಿತ ವಾಗಿದೆ.