ಅಶ್ವಥ ವೃಕ್ಷ ಉರುಳಿದೆ
ಆಶ್ರಯ ಪಡೆದ ಹಕ್ಕಿಗಳೆಲ್ಲ
ಚೆಲ್ಲಾಪಿಲ್ಲಿ...
ಒಂಟಿ ಹಕ್ಕಿ ಆಕಾಶದಲಿ ಅನಂತ ಯಾತ್ರೆ
ಹೊರಟಿದೆ....
ಕವಿನುಡಿ ನಮ್ಮ ನಾಲಿಗೆಗಳ ಮೇಲೆ
ಸರಿದಾಡುವಂತೆ ಮಾಡಿದವ...
ಭಾವ ಜೀವ ಜತೆ ಜತೆಯಲ್ಲಿ ಕಲಿಸಿದವ
ಹಾಡುಗಳಿಗೆ ಭಾಷ್ಯಬರೆದವ ಈಗಿಲ್ಲ...
ನಂಬಬೇಕು ಇದು ಸತ್ಯ...
ಅಲ್ಲಲ್ಲ ಅಶ್ವಥ ಮಾತ್ರ ನಿತ್ಯ...
Tuesday, December 29, 2009
Wednesday, December 9, 2009
ಕಾದಿಹೆ ನಾನು...
ಕಾದಿರುವೆ ನಾನು ಆ ನಾಳೆಗಳ
ಎದಿರು ನೋಡುತ..
ಕಾಂಕ್ರೀಟು ಕಾಡಿನ ಅನುಭವವೂ
ಕವಿತೆಯಾಗಲೆಂದು
ಮೂಲೆಯಲ್ಲಿನ ಹೂ ಗಮಗಮಿಸಲೆಂದು
ನೆರೆ ಮನೆಯಾತ ಕೈ ಚಾಚಿದಾಗ
ಕರದಲ್ಲಿ ಚೂರಿಯ ಬದಲು ಗುಲಾಬಿ
ಇರಲೆಂದು....
ಒಂದು ಮನದ ನೋವಿಗೆ ಇನ್ನೊಂದು ಮನ
ಮಿಡಿಯಲೆಂದು..
ಕಾಯುವ ಈ ಪರಿ ನಿರರ್ಥಕವೆಂದು ತಿಳಿದಿದೆ..
ಈ ಕಾಯುವ ಕಾಯಕದಲ್ಲಿ ಅದೇನು ಸೊಗಸಿದೆ...
ಬರಲಿರುವ ನಾಳೆಗಳ ಹೊಳಪು ಬಿಂಬಿಸುವ
ಕಣ್ಣುಗಳಿಗೆ ವರ್ತಮಾನದ ಧೂಳು ರಾಚುತಿದೆ.
ಎದಿರು ನೋಡುತ..
ಕಾಂಕ್ರೀಟು ಕಾಡಿನ ಅನುಭವವೂ
ಕವಿತೆಯಾಗಲೆಂದು
ಮೂಲೆಯಲ್ಲಿನ ಹೂ ಗಮಗಮಿಸಲೆಂದು
ನೆರೆ ಮನೆಯಾತ ಕೈ ಚಾಚಿದಾಗ
ಕರದಲ್ಲಿ ಚೂರಿಯ ಬದಲು ಗುಲಾಬಿ
ಇರಲೆಂದು....
ಒಂದು ಮನದ ನೋವಿಗೆ ಇನ್ನೊಂದು ಮನ
ಮಿಡಿಯಲೆಂದು..
ಕಾಯುವ ಈ ಪರಿ ನಿರರ್ಥಕವೆಂದು ತಿಳಿದಿದೆ..
ಈ ಕಾಯುವ ಕಾಯಕದಲ್ಲಿ ಅದೇನು ಸೊಗಸಿದೆ...
ಬರಲಿರುವ ನಾಳೆಗಳ ಹೊಳಪು ಬಿಂಬಿಸುವ
ಕಣ್ಣುಗಳಿಗೆ ವರ್ತಮಾನದ ಧೂಳು ರಾಚುತಿದೆ.
Subscribe to:
Posts (Atom)