Sunday, August 30, 2009

ಸದಾ ಕಾಡುವ ಹಾಡು-----೪:

ಮನ್ನಾಡೆ ಹಾಡಿದ ಹಾಡುಗಳು ಹಿಂದಿಚಿತ್ರರಂಗದ ಇತಿಹಾಸದಲ್ಲಿ ಕಾಯಂ ಸ್ಥಾನ ಪಡೆದುಕೊಂಡಿವೆ...ರಫಿ,ಮುಕೇಶ ಹಾಗೂ ಕಿಶೋರ್ ಈ ತ್ರಿಮೂರ್ತಿಗಳ ನಡುವೆ ಮನ್ನಾಡೆ ಹಾಡಿದ ಹಾಡುಗಳು ವಿಶಿಷ್ಟ ಛಾಪು ಉಳಿಸಿವೆ...ದುರಂತ ಅಂದ್ರೆ ಮನ್ನಾಡೆ
ಹಾಡಿದ ಹೆಚ್ಚು ಹಾಡುಗಳು ಹಿರೋನ ಮೇಲೆ ಚಿತ್ರಿತವಾದುವಲ್ಲ...ಅವನ ಜನಪ್ರಿಯತೆ ಇದರಿಂದ ಕುಂದು ಆಗಿರಲಿಲ್ಲ. ಮುಖ್ಯವಾಗಿ
ಕೆಲ ಸಂಗೀತ ನಿರ್ದೇಶಕರು ಮನ್ನಾಡೆ ತಮ್ಮ ಹಾಡು ಹಾಡಿದರೆ ಕೃತಾರ್ಥರಾಗುತ್ತಿದ್ದರು. ಅದು ಎಸ್ ಡಿ ಬರ್ಮನ್ ನಿಂದ ಆರ್ ಡಿ ಬರ್ಮನ್ ವರೆಗೂ ವ್ಯಾಪಿಸಿತ್ತು. ಮನ್ನಾಡೆನ ಹೆಚ್ಚಿನ ಹಾಡು ಅಶೋಕಕುಮಾರ್, ಡೇವಿಡ್ , ಬಲರಾಜ್ ಸಹಾನಿ, ಮೆಹಮೂದ್ ಹಾಗೂ ಆಘಾ ಇವರ ಮೇಲೆ ಚಿತ್ರಿತವಾಗಿತ್ತು. ಪ್ರತಿ ಹಾಡಿಗೂ ಮನ್ನಾಡೆ ತನ್ನ ಆತ್ಮವನ್ನೇ ಧಾರೆಯುತ್ತಿದ್ದ.

ಪ್ರಸ್ತುತ ಆಯ್ದುಕೊಂಡ ಹಾಡು ಸೀಮಾ ಚಿತ್ರದ್ದು...ಶೈಲೇಂದ್ರ ಬರೆದದ್ದು ಶಂಕರ್ ಜೈಕಿಶನ್ ಸಂಗೀತ. ಇದು
ಪ್ರಾರ್ಥನೆ ಗೀತೆ.... ಶೈಲೇಂದ್ರ ಚಿತ್ರರಂಗದ ಅತ್ಯಂತ ಜನಪ್ರೀಯ ಗೀತಕಾರ. ಆರ್ ಕೆ ಬ್ಯಾನರ್ ನ ಕಾಯಂ ರತ್ನ. ಅವನಿಗೆ
ಒಂದು ವಿಶೇಷ ಕಲೆಯಿತ್ತು ..ತೀರ ಸರಳ ಭಾಷೆಯಲ್ಲಿ ಅತ್ಯಂತ ಗಹನವಾದ ವಿಚಾರ ಹೇಳುತ್ತಿದ್ದ...ಹಾಡಿನ ಸಾಲು ನೋಡಿಯೇ
ಇದು ಶೈಲೇಂದ್ರ ಬರೆದದ್ದು ಎಂದು ಗುರ್ತಿಸಬಹುದಾಗಿತ್ತು...ಉದಾಹರಣೆಗೆ......
"ಸಜನ್ ರೆ ಝೂಠ ಮತ್ ಬೋಲೋ....ಜಹಾಂ ಹಾಥಿ ಹೈ ನ ಘೋಡಾ ಹೈ ವಹಾಂ ಪೈದಲ್ ಹಿ ಜಾನಾ ಹೈ...."
" ದಿಲ್ ಕಾ ಹಾಲ್ಸುನೆ ದಿಲವಾಲ......ಆಂಧಿಯೊ ಮೆ ಜಲಿ ಜೀವನ್ ಬಾತಿ ಭೂಖ್ ನೆ ಹೈ ಬಡೆ ಪ್ಯಾರ್ ಸೆ ಪಾಲಾ...."
" ಯಾದ್ ನ ಜಾಯೆ ಜಿನಕೆ ದಿಲೊಂಸೆ....ದಿನ್ ಜೋ ಪಖೆರು ಹೋತೆ ಪಿಂಜಡೆ ಮೈ ರಖಲೆತಾ....."
ಎಷ್ಟು ಸರಳ ಶಬ್ದಗಳು ಆದರೆ ಹೊರಡಿಸುವ ಅರ್ಥಎಷ್ಟು ವಿಶಾಲ್....!

ಸೀಮಾ ಚಿತ್ರದ ಈ ಹಾಡು ಪ್ರಾರ್ಥನೆ ಗೀತೆ ಆದರೂ ಇಲ್ಲಿ ಕವಿ ಒಂದು ಬೇರೆ ಅಂದಾಜಿನಲ್ಲಿ ಮೊರೆ ಇಟ್ಟಿದ್ದಾನೆ.. ದೇವರು ಸರ್ವ ಶಕ್ತ ಮಾನವ ಸಂಕಟ ಬಂದಾಗ ಅವನಿಗೆ ಮೊರೆ ಇಡುತ್ತಾನೆ.. ಈ ಬೇಡಿಕೆಯಲ್ಲಿ ಭಾವ
ವಿಹ್ವಲತೆ ಇಲ್ಲ...ಆಕ್ರೋಶ ಇಲ್ಲ. ಒಂದು ಸಮರ್ಪಣಾ ಭಾವವಿದೆ ನೀನೆ ಎಲ್ಲ ನಾ ಏನೂ ಅಲ್ಲ ಇದನ್ನು ಹೇಳುತ್ತಲೆ ಕವಿ
ದೇವರಿಗೆ ತೀರ ಆತ್ಮೀಯವಾಗಿ ಮೊರೆ ಇಡುತ್ತಾನೆ.. ಈ ಸಾಲು ಗಮನಿಸಿ......
" ಇಧರ್ ಝೂಮತಿ ಗಾಯೇ ಜಿಂದಗಿ ಉಧರ್ ಹೈ ಮೌತ್ ಖಡಿ ಕೋಯಿಕ್ಯಾ ಜಾನೇ ಕಹಾಂ ಹೈ ಸೀಮಾ ಉಲಝನ್
ಆನ್ ಪಡಿ...ಕಾನೊಂಮೆ ಜರಾ ಕೆಹದೆ ಕೆ ಆಯೆ ಕೌನ್ ದಿಶಾಸೆ ಹಮ್..." ದೇವ ನನ್ನ ಮೊರೆ ಮುಟ್ಟಿಸಲು ಯಾವದಿಕ್ಕಿನಿಂದ
ನಿನ್ನೆಡೆ ಬರಲಿ ಕಿವಿಯಲ್ಲಿ ಹೇಳು...ಇದು ಆತ್ಮೀಯ ಸಂವಾದದ ಪರಿ. ಮಾನವ ಎಷ್ಟು ದುರ್ಬಲ ಅನ್ನೋದನ್ನು ಕವಿ ಹೇಳುವ
ಪರಿ ನೋಡಿ...." ಘಾಯಲ ಮನ್ ಕೆ ಪಾಗಲ ಪಂಚಿ ಉಡನೆಕೋ ಬೇಕರಾರ್ ಪಂಖ ಹೈ ಕೋಮಲ್ ಆಂಖ ಹೈ ಧುಂಧಲಿ
ಜಾನಾ ಹೈ ಸಾಗರ್ ಪಾರ್ ಅಬ ತೂ ಹಿ ಸಮಝಾ ರಾಹ್ ಭೂಲೆ ಥೆ ಕಹಾ ಸೆ ಹಮ್..." ಎಷ್ಟು ಮನಮುಟ್ಟುವ ಸಾಲುಗಳು...!
ಆದ್ರ ಭಾವ ಈ ಹಾಡಿನ ತುಂಬ ವ್ಯಾಪಿಸಿದೆ. ಹಾಡಿನ ಪಲ್ಲವಿ...."ತೂ ಪ್ಯಾರ್ ಕಾ ಸಾಗರ್ ಹೈ ತೇರಿ ಎಕ್ ಬೂಂದ್ ಕಿ ಪ್ಯಾಸೆ ಹಮ್ ..." ಹೌದು ದೇವನ ಕರುಣಸಾಗರದಲ್ಲಿ ಒಂದು ಹನಿಗಾಗಿ ಮಾನವ ಇಂದಿಗೂ ಎಂದಿಗೂ ಹಪಾಪಿಸುತ್ತಲೇ ಇದ್ದಾನೆ....!

ಈ ಹಾಡಿಗೆ ಮುಪ್ಪು ಇಲ್ಲ ಹಾಗೆಯೇ ಆ ಕಾಲದ ಎಲ್ಲ ಹಾಡುಗಳಿಗೂ ...!

11 comments:

  1. ಮನ್ನಾಡೆ ಬಗ್ಗೆ ಉತ್ತಮ ಬರಹ ಇಂಥ ಕಲಾವಿದರನ್ನು ನೆನೆಸಿಕೊಳ್ಳುವುದು ಅಂದ್ರೆ...ಅವರಿಗೆ ಗೌರವ ಸಲ್ಲಿಸಿದಂತೆ. ಅವರ ಹಾಡುಗಳು ನನಗೂ ಇಷ್ಟ.

    ReplyDelete
  2. ಹೊಸ ಹಾಡುಗಳ ಅಲೆಯಲ್ಲಿ ಕೊಚ್ಚಿ ಹೋಗದ, ಎ೦ದೂ ಮಾಸದೆ ಜನಮಾನಸದಲ್ಲಿ ಅಚ್ಚೊತ್ತಿರುವ ಹಳೆಯ ಹಾಡುಗಳನ್ನು ನೆನಪಿಸುವ ಮೂಲಕ, ಅ೦ತಹ ಹಾಡುಗಳೊ೦ದಿಗಿನ ಭಾವನಾತ್ಮಕ ಸ೦ಬ೦ಧಗಳ ಮೆಲುಕು ಹಾಕುವಿಕೆಗೆ ಅವಕಾಶವಾಗಿದೆ ನಿಮ್ಮ ಬರಹದಿ೦ದ. Thanks,.

    ReplyDelete
  3. ಮೊಹಮ್ಮದ ರಫಿಯ ಕಂಠಕ್ಕೆ wide range ಇತ್ತು. ಕಿಶೋರನದು deep ಕಂಠ. ಮುಕೇಶ passionate. ಆದರೆ ಮನ್ನಾ ಡೇನ ಮಧುರತೆ ಇವರಾರಿಗೂ ಬಾರದು. ಮನ್ನಾ ಡೇ ಹಾಡಿದ ಇತರ ಕೆಲವು ಮರೆಯಲಾಗದ ಗೀತೆಗಳೆಂದರೆ:
    (೧)ತೇರಿ ನೈನಾ ತಲಾಶ ಕರೆ ಗೋರಿ
    (೨)ಫುಲ ಗೇಂದುವಾ ನ ಮಾದೋ
    (೩)ತುಮ ಬಿನ ಜೀವನ ಕೈಸೆ ಜೀವನ
    (೪)ಲಾಗಾ ಚುನರೀ ಮೆ ದಾಗ
    (೫)ಕೇತಕಿ ಗುಲಾಬ ಜುಹಿ

    ಮನ್ನಾ ಡೇ ನೆನಪು ಮಾಡಿದಿರಿ. ಧನ್ಯವಾದಗಳು.

    ReplyDelete
  4. ಶಿವು ಪ್ರತಿಕ್ರಿಯೆಗಾಗಿ ಧನ್ಯವಾದಗಳು..ಮನ್ನಾಡೆ ಯಾಕೆ ಎಲೆಮರೆಕಾಯಿಯಾಗಿ ಉಳದ ಇದು ಸದಾ ಕಾಡುವ ಪ್ರಶ್ನೆ...

    ReplyDelete
  5. ಪರಾಂಜಪೆ ಸರ್ ಪ್ರಸ್ತುತ ಗೀತೆಗೆ ಐವ್ವತ್ತೈದರ ಹರೆಯ ಆದರೇನು ಸೊಗಸು ಮಾಸಿಲ್ಲ

    ReplyDelete
  6. ಕಾಕಾ ಪ್ರಸ್ತುತ ಲೇಖ ಮನ್ನಾಡೆ ಸ್ತುತಿಯಾಗುತ್ತದೆ ಎಂದು ನಾ ಅಂದುಕೊಂಡಿದ್ದೆ ಹಾಡು ಬರೆದ ಶೈಲೇಂದ್ರನಿಗೂ
    ಬೆನ್ನುತಟ್ಟಬೇಕಲ್ಲ( ಎಷ್ಟಂದರೂ ನಾನೂ ಕವಿ(ಪಿ) ನೋಡಿ...) ಅವನ್ನ ಯಾಕ ಶಾಭಾಶ ಅನ್ನಬಾರದು...!

    ReplyDelete
  7. ಉಮೇಶ್ ದೇಸಾಯಿಯವರೆ...
    ಮನ್ನಾಡೆಯವರ..

    "ನಮುಃ ಚುಪಾಕೆ ಜಿಯೊ..
    ನ.. ಸರ್ ಝುಕಾ ಕೆ ಜಿಯೊ..
    ಗಮೊ ಕಾ ದೌರ್ ಭೀ.. ಆಯೇ ತೊ ..."

    ಇನ್ನೊಂದು ಉಪಕಾರ್ ಫಿಲ್ಮಿನ ಹಾಡು ನೆನಪೇ ಆಗುತ್ತಿಲ್ಲ...

    ಹಾಂ... ನೆನಪಾಯಿತು...
    "ಕಸಮೆ ವಾದೆ ಪ್ಯಾರ್ ವಫಾ...
    ಬಾತೇ ಹೈ ... ಬಾತೋಂಕಾ ಪ್ಯಾರ್...!"

    ವಾಹ್...!!
    ದೇಸಾಯಿಯವರೆ...
    ಮತ್ತೆ ಹಳೆಯ ಹಾಡುಗಳ ಗುಂಗಿಗೆ ಹೋಗಿಬಿಟ್ಟೆ...

    ಸುನಾಥ ಸರ್ ಹೇಳಿದ ಹಾಡುಗಳೂ ಅಮೂಲ್ಯ....!

    ನಿಮಗೆ ಅನಂತ...ಅನಂತ ವಂದನೆಗಳು....

    ReplyDelete
  8. ದೇಸಾಯಿಯವರೆ...

    "ನಮುಃ ಚುಪಾಕೆ ಜಿಯೋ.." ಹಾಡು ಮಹೇಂದ್ರ ಕಪೂರ್ ಹಾಡಿದ್ದು ಇರಬಹುದಾ...?

    ನನಗೆ ನೆನಪಾಗುತ್ತಿಲ್ಲ...

    ReplyDelete
  9. ನಿಜ ಹೆಗಡೇಜಿ ಅದು ಮಹೇಂದ್ರ ಕಪೂರ್ ಹಾಡಿದ ಹಾಡು...ಪ್ರತಿಕ್ರಿಯೆನೀಡಿ ಅವಿರತ ಪ್ರೋತ್ಸಾಹಿಸುತ್ತಿದ್ದೀರಿ ಧನ್ಯವಾದಗಳು...

    ReplyDelete
  10. ಉಮೇಶ್ ದೇಸಾಯಿ ಸರ್,

    ಮನ್ನಾಡೇ ಹಾಡುಗಳ ಮೆಲುಕು ಓದಿ ತುಂಬಾ ಖುಷಿಯಾಯ್ತು. ನಾನೂ ಮನ್ನಾಡೇ ಹಾಡುಗಳನ್ನು ಕೇಳಿದ್ದೇನಾದರೂ ಇಷ್ಟೊಂದು ವಿಶ್ಲೇಷಿಸಲು ತಿಳಿದಿರಲಿಲ್ಲ. ಅಂತಹ ಮಹಾನ್ ಗಾಯಕರ ಹಾಡುಗಳ ವಿಶ್ಲೇಷಣೆ ನಮ್ಮಂತಾ ಕಿರಿಯ ಸಂಗೀತ ಪ್ರೇಮಿಗಳಿಗೆ ತುಂಬಾ ಉಪಯುಕ್ತ. ಧನ್ಯವಾದಗಳು.

    - ಉಮೇಶ್

    ReplyDelete
  11. ಉಮೇಶ ಪ್ರತಿಕ್ರಿಯೆಗೆ ಧನ್ಯವಾದಗಳು..ಸಂಗೀತಕ್ಕೆ ಪೀಳಿಗೆ ಹಂಗಿಲ್ಲ ಅದು ಎಂದಿಗೂ ಯೌವ್ವನಿಗ. ಏನಂತೀರಿ....

    ReplyDelete