Wednesday, August 12, 2009

ಪಯಣ----ಪುರಾಣ

ಮೊನ್ನೆ ಏರಿದ್ದೆ ಬಸ್ಸೊಂದ ಮಡದಿ,ಮಗಳ ಜೊತೆ
ಸಾಲು ಉಭಯ ಆಸನದ ವಾಹನ..
ಸ್ಥಾನ ಆಕ್ರಮಿಸಿದರು ಮಡದಿ,ಮಗಳು ಉಭಯತರರು
ನಾನೋ ಬಡಪಾಯಿ ಒಂಟಿ ಆಶ್ರಯಿಸಿದೆ ಆಸನ ಪಕ್ಕದ್ದು
ದೇವನಿಗೆ ಮೊರೆ ಕೇಳಿತೋ ಗೊತ್ತಿಲ್ಲ...
ತರಳೆ ನಿರ್ವಾಹಕನಿಗೆ ಮೊರೆ ಇಡುತಿದ್ದಳು ...
ನನ್ನ ಪಕ್ಕ ತೋರಿಸಿ
ಬಿಜಯಂಗೈ ಎಂದ ಆತ ತರಳೆಗೆ......
ತರುಣಿ ಸುಕುಮಾರಿ ಅರೆಬಿರಿದ ತುಟಿ
ಸಂಕೋಚದಿಂ ವರಿಸಿದಳಾಸನವ...
ವಾಹನ ಚಲಿಸಿತು ಮಾರ್ಗದಲ್ಲೋ ತೆಗ್ಗು ದಿನ್ನೆ
ತರಳೆಯ ತನು ತಾಗುತ್ತಿತ್ತು ಹೊಯ್ದಾಟಕ್ಕೆ
ನಾನೋ ಕಡಬು ಜಾರಿ ತುಪ್ಪದಲಿ ಬಿದ್ದ ಖುಷಿ
ಅ ಸಂಗ ಪಯಣವಿಡೀ ಸಾಗಲಿ ಹರಕೆ ಹೊತ್ತೆ ದೇವಗೆ....!
ಸಾಂಗತ್ಯದಿಂ ಪುಲಕಿತ ಮನ ಅದಾಗಲೆ ಕನಸು
ಕಸೂತಿ ಹಾಕುತ್ತಿತ್ತು ಬಾಳ ಬಟ್ಟೆಯ ಮೇಲೆ...
ಅದೋ ತೂರಿಬಂದಿತ್ತು ಅಂಜಲಿಯ ಅಂಬಿನಿಂದ ಕೂರಂಬು....!
"ಮಗು ನಿಮ್ಮ ಸಾಮಿಪ್ಯ ಬಯಸಿದೆ ಬದಲಾಯಿಸಿ ಜಾಗೆಯ..."
ಹೇ ವಿಧಿ ಈ ಪುರುಷಸಿಂಹಗಳಿಗೆ ಈ ಅಧೀರ ಹೃದಯವೇಕೆ
ಧಿಕ್ಕರಿಸಲುಂಟೆ ಈ ಪತಿ ಸತಿ ಯ ಆಣತಿಯ...!
ಮಗಳ ಕೆನ್ನೆ ನೇವರಿಸುತ್ತ ಆಗೀಗ ತರಳೆಯೆಡೆ ವಾರೆ ನೋಟ
ಬಿಡುತ್ತ... ನಗುತಿದ್ದಳವಳೂ ಪುರುಷಪುಂಗವನ ಪಾಡಿಗೆ....!
ನಿಟ್ಟುಸಿರು ಬಿಡುತ್ತ ಬರದಿರುವ ನಿದ್ದೆಯ ಕಾಯುತ್ತ ಕಳೆದೆ ರಾತ್ರಿ
ಕೇಳಿದೆ ಮರುದಿನ ಅಂಜಲಿಗೆ ಯಾಕೆಂದು
"ನೀವೋ ಚಪಲರು ನಿಮ್ಮ ಕೈ ಇನ್ನೂ ಚುರುಕು ಆದರೆ ಅವಳ
ಬೆರಳಗುರುತು ನಿಮ್ಮ ಕೆನ್ನೆ ಮೇಲೆ ಮೂಡದಿರಲಿ...
ನಿಮ್ಮ ರಕ್ಷಿಸಲು ನಾನಿಂತು ಮಾಡಿದೆ....." ಅವಳ ನುಡಿಯಲಿ
ಸತ್ಯ , ಸತ್ವ ಎರಡೂ ಇತ್ತು...
ಎಷ್ಟಿದ್ದರೂ ನಾನ್ ಅಂಜಲಿಪ್ರಿಯ, ಅಂಜಲಿ ದಾಸ, ಅಂಜಲಿ ವಿಧೇಯ.....!

15 comments:

  1. ಮಗು ನಿಮ್ಮ ಸಾಮೀಪ್ಯ ಬಯಸಿದ್ದು ಬಹುಶಃ ತಾಯಿಯ prompingದಿಂದಲೇ ಇರಬಹುದೇನೊ?

    ReplyDelete
  2. ಛೇ! ರಸಭಂಗ ಆತು ಅಂತ ಬೇಜಾರಾ ದೇಸಾಯಿ ಸರ್... ಹೋಗ್ಲಿ ಬಿಡ್ರಿ, ಎಲ್ಲಾ ನಿಮ್ ಒಳ್ಳೆಯದಕ್ಕ... :)

    ReplyDelete
  3. ದೇಸಾಯಿ ಸರ್,

    ಹೋಗ್ಲಿ ಬಿಡಿ ಸರ್, ಸಿಕ್ಕಷ್ಟೆ ಲಾಭ, ಅದನ್ನೇ ಮತ್ತೊಂದು ಅವಕಾಶ ಸಿಗೋವರೆಗೂ ಮೆಲುಕುಹಾಕ್ರಿ...

    ReplyDelete
  4. :):)ದೇಸಾಯಿ ಸರ್,
    ..ಅಂಜಿಕೆನು ಚೆನ್ನಾಗೆ ಇಟ್ಟಿದ್ದಾರಾ ಹೇಗೆ ? ವೈನಿಯವರು.:):)

    ReplyDelete
  5. ದೇಸಾಯಿಯವರೆ...

    ಪಂಕಜ್ ಉದಾಸ್" ರ ಗಝಲ್ ನೆನಪಾಯಿತು...

    "ಸಬ್ ಕೊ ಮಾಲೂಮ್ ಹೈ ಕಿ ಮೆ ಶರಾಭಿ ನಹಿ...
    ಫಿರ್ ಭಿ ಕೋಯಿ ಪಿಲಾಯೇತೊ ಮೈ ಕ್ಯಾ ಕರೂ...?"

    ಹೇಂಡತಿ ಮನೆಯಲ್ಲಿ ಇದ್ದಾಳೆ..
    ಅವಳನ್ನು ಒಪ್ಪಿದ್ದೇನೆ..."ನಿನ್ನ ಬಿಟ್ಟು ಯಾರನ್ನೂ ನೋಡುವದಿಲ್ಲ ಹೇಳಿದ್ದಾಗಿದೆ...
    ಆದರೂ....

    "ಏಕ್ ಬಾರ ನಝರೋಂಸೆ ನಝರೆ ಮಿಲೆ..
    ಔರ್ ಕಸಮ್ ಟೂಟ್ ಜಾಯೇತೊ ಮೆ ಕ್ಯಾ ಕರೂ...?"

    ಕೇಳಿದ್ದೀರಾ...?
    ದಯವಿಟ್ಟು ಕೇಳಿ ...

    ನಿಮ್ಮ ಕವನವೂ ಚೆನ್ನಾಗಿದೆ....

    ಅಭಿನಂದನೆಗಳು....

    ReplyDelete
  6. ಏನು ಮಾಡೋದು ಕಾಕಾ ನಮ್ಮ ಮನ್ಯಾಗ "ಪ್ರಮೀಳಾರಾಜ್ಯ" ನಾನೂ ಒಂದು ನಮೂನಿ ಮನಮೋಹನ ಸಿಂಗ್ ನಂಗ....!

    ReplyDelete
  7. ಉಮೇಶ ಎಲ್ಲಾ ನನ್ನ ಒಳ್ಳೇದಕ್ಕ ಖರೇ ಆದ್ರೂ ಒಮ್ಮೊಮ್ಮೆ ಬ್ಯಾಸರಆಗ್ತದ ನೀವು ಇನ್ನೂ ಬ್ರಹ್ಮಚಾರ್ರಿ ಇರಬೇಕು ಹಿಂಗಾಗಿ
    ಈ ಸಂಸಾರದ ಆದಿ ಅಂತ ಗೊತ್ತಿಲ್ಲ....

    ReplyDelete
  8. ಶಿವು ಕಾಯುತ್ತಿರುವೆ ನಿಜ ಆದರೆ ಯಾವಾಗ ಯೋಗಾಯೋಗ ಕೂಡಿ ಬರ್ತದೋ

    ReplyDelete
  9. ರೀ ಗೋಪಾಲ್ ನೀವು ಸಮಾನದುಃಖಿ ಅಂತ ಗೊತ್ತಿರಲಿಲ್ಲ ನಮ್ಮ ಸಂಘಕ್ಕ ಮೆಂಬರ್ ಆಗಾವ್ರೇನು

    ReplyDelete
  10. ಹೆಗಡೇಜಿ ಉಧಾಸ್ ನ್ ಆ ಗಜಲು ನನಗೂ ಸೇರ್ತದ. ಮುಂದ ಆ ಗಜಲಿನ್ಯಾಗ ಒಂದು ಶೇರ್ ಬರ್ತದ...
    "ಕೈಸಿ ಲತ್ ಕೈಸಿ ಚಾಹತ್ ಕಹಾಂಕಿ ಖತಾ
    ಬೇಖುದಿ ಮೆ ಹೈ ಅನ್ವರ್ ಖುದಿಕಾ ನಶಾ
    ಜಿಂದಗಿ ಏಕ್ ನಶೆಕೆ ಸಿವಾ ಕುಛ ನಹೀಂ
    ತುಮಕೋ ಪೀನಾ ನ ಆಯೆ ತೋ ಮೈ ಕ್ಯಾ ಕರೂಂ....."
    ಹಂಗ ಆ ನಿಮಿಷದ ಒಂದು ಘಟನಾ ಮನಸ್ಸಿನ್ಯಾಗ ಉಳೀತು ಒಂದು ತಿಂಗಳ ಮ್ಯಾಲ ಅಕ್ಷರದಾಗ ಮೂಡಿತು

    ReplyDelete
  11. ಅಯ್ಯೋ ದೇವರೇ. ಕಯ್ಯಿಗೆ ಸಿಕ್ಕಿದ್ದು ಬಾಯಿಗೆ ಸಿಗಲಿಲ್ಲವೇ?
    ತರಳೆಯ ತನು ತಾಗಿದ ಅನುಭವ ಆದರೂ ಸಿಕ್ಕಿತಲ್ಲ. ಪಾಲಿಗೆ ಬಂದದ್ದು ಪಂಚಾಮೃತ.

    ReplyDelete
  12. ರಾಜೀವ್ ಸುಸ್ವಾಗತ ನಿಜವೇ ಪಾಲಿಗೆ ಬಂದಿದ್ದು ಪಂಚಾಮೃತ ಅಥವಾ ಸಿಕ್ಕಷ್ಟೇ ಶಿವಾ...

    ReplyDelete