Wednesday, April 29, 2009

ಮಗಳ ಪ್ರಶ್ನೆ

ಹಿಂಗ್ಯಾಕ ನಮ್ಮ ದೇಶದಾಗ ? ೮ ವರ್ಷದ ಮಗಳು ಕೇಳಿದ್ಲು ಆಫೀಸ ಮುಗಿಸಿ ಟಿವಿ ಹಚ್ಚಿದಾಗ ಚಾನಲ್ ನವರು ಕಸಬ್ ನ ಡಿಮಾಂಡ್ ಬಗ್ಗೆ ಹೇಳುತ್ತಿದ್ದರು. ಓದಲು ಪಾಕಿಸ್ತಾನಿ ಪತ್ರಿಕೆ ಬೇಕಂತೆ ಅವನಿಗೆ ಕೊಡೋಣ ಆದರೆ ನಾಳೆ ಮಲ್ಲಿಕಾ ಶೇರಾವತ್ ಬೇಕು ಎಂದು ಹಟ ಹಿಡಿದರೆ ಏನು ಮಾಡೋದು....ಇಷ್ಟಕ್ಕೂ ಅವ ನಮ್ಮ ಅತಿಥಿ ಅಲ್ಲ ಬಂಧು ಮೊದಲೇ ಅಲ್ಲ. ಬೇರೆ ಚಾನಲ್ ತಿರುಗಿಸಿದಾಗ ಕಸಬ್ ನ ಹೊಸಾ ಡಿಮಾಂಡ್ ಮೇಲೆ ಚರ್ಚಾ ನಡೆದಿತ್ತು ನೋಡುವವರು sms ಕಳಿಸುತ್ತಿದ್ದರು ಒಬ್ಬರು ಬರೆದಿದ್ದರು
ಅವನನ್ನು ಜೇಲಿನಿಂದ ಬಿಡುಗಡೆಗೊಳಿಸಿ ೨೬/೧೧ ರ ದಿನ ಮಡಿದ ಸಂಬಂಧಿಗಳಿಗೆ ಒಪ್ಪಿಸಲಿ..! ಸಲಹೆ ಅತಾರ್ಕಿಕ ಅನಿಸಬಹುದು ಆದರೆ ಅದರ ಹಿಂದೆ ಅಡಗಿದ ಕಳಕಳಿ ಮೆಚ್ಚಬೇಕು.ಎಷ್ಟು ದಿನ ಅವನನ್ನು ಜೈಲಿನಲ್ಲಿ ಕೂಡಿಸಿ ಕೂಳು ಹಾಕೋದು ..ಅವ ಒಂದು ನಮೂನಿ vipಕೈದಿ ಅವನ ಕಡೆ ಕೆಲಸ ಮಾಡಸುವ ಹಾಗಿಲ್ಲ ಜೈಲಿನ್ಯಾಗ ಇದ್ದರೂ ಒಂಥರಾ ರಾಜಾನ ದರಬಾರ...!

ಈಗ ಮಗಳು ಕೇಳಿದ ಪ್ರಶ್ನಿಗೆ ಬರ್ತೇನಿ ...ನಾ ಅಂದೆ ಬ್ಯಾರೆ ದೇಶದಾಗ ಆಗಿದ್ರ ಇಷ್ಟೊತ್ತಿನ್ಯಾಗ ಅವ ಹೆಣಾ ಆಗಿ ಹೋಗತಿದ್ದ . ಅದಕ್ಕ ಮಗಳು ಕೇಳಿದ್ಲು ನಮ್ಮ ದೇಶದಾಗ ಯಾಕ್ ಹಿಂಗ? ಉತ್ತರ ನಾ ಎಲ್ಲಿಂದ ಕೊಡಲಿ ಉತ್ತರ ಕೊಡಬೇಕಾದವರಿಗೆ ಅದರ ಚಿಂತಿ ಇಲ್ಲ..ಅವರು ನಾಳೆ ಸಿಗಲಿರುವ ವೋಟಿನ ಲೆಕ್ಕ ಹಾಕುತ್ತಿದ್ದಾರೆ...ಒಂದು ವೇಳೆ ಕಸಬ್ ನ
ವಿಚಾರಣೆ ಹೀಗೆ ಐದು ವರ್ಷ ಜಗ್ಗಿದರೆ(ಅದರ ಎಲ್ಲ ಸಾಧ್ಯತಾ ಅದ...!) ಮುಂದಿನ ಸಾರಿ ಸಹ ಅವರ ಕುರ್ಚಿ ಭದ್ರ ಆಗಿರ್ತದ.
ಪಾಪ ಮಗಳಿಗೇನು ಗೊತ್ತು ಇದು ಪ್ರಶ್ನಿ ಕೇಳಿದ್ಲು ಖರೇ ಉತ್ತರ ಕೊಡಲಿಕ್ಕೆ ನನಗೆ ಸಾಧ್ಯನ ಇಲ್ಲ ...ನೀವ್ಯಾರಾರು ಸಹಾಯ
ಮಾಡಬಹುದೇನೋ?

3 comments:

  1. ದೇಸಾಯಿಯವರೆ, ಅದು ನಿಮ್ಮ ಮಗಳ ಪ್ರಶ್ನೆ ಮಾತ್ರ ಅಲ್ಲ, ನಮ್ಮೆಲ್ಲರ ಪ್ರಶ್ನೆ ಕೂಡ. ಈ ಭಯೋತ್ಪಾದಕರಿಗೆ ಶಿಕ್ಷೆ ಕೊಟ್ಟರೆ ಯಾವುದೋ ಒಂದು ಧರ್ಮದವರಿಗೆ ನೋವಾಗುತ್ತದೆ ಅಂತ ಆಳುವ ಸರಕಾರಕ್ಕೆ ಹೆದರಿಕೆ. ನಿಜಕ್ಕೂ ಆ ಧರ್ಮದವರನ್ನು ಹೀಗೆ ಅವಮಾನಿಸಿದಂತೆ ಈ ನಡವಳಿಕೆ. ಬೇರೆ ದೇಶದಲ್ಲಿ ಹೀಗೆ ಆಗಲು ಸಾಧ್ಯವೇ ಇಲ್ಲ

    ReplyDelete
  2. "A Wednesday" ಹಿಂದಿ ಚಿತ್ರವನ್ನು ನೀವು ನೋಡಿರಬಹುದು, ನೋಡಿರದಿದ್ದರೆ ತಪ್ಪದೆ ಒಂದು ಸರಿ ನೋಡಿ..
    ಇಂತವರಿಗೆ ಏನ್ ಮಾಡಬೇಕು ಅಂತ ಆ ಚಿತ್ರದಲ್ಲಿ ವಿಭಿನ್ನವಾಗಿ ಹೇಳಿದ್ದರೆ..

    ReplyDelete
  3. ದೀಪಸ್ಮಿತಾ ನಿಮ್ಮ ಕಳಕಳಿ ಮೆಚ್ಚಿದೆ..
    ಶಿವಪ್ರಕಾಶ ನೀವು ಉಲ್ಲೇಖಿಸಿದ ಚಿತ್ರ ನೋಡಿರುವೆ...ಆದರೆ ಅದು ಸಿನೇಮ
    ನಮ್ಮ ಸರ್ಕಾರಕ್ಕೆ ಆ ದಮ್ ಇದೆಯಾ?

    ReplyDelete